ಸೇನೆಯಲ್ಲಿ ನಿವೃತ್ತಿಗಿನ್ನು ಆರು ತಿಂಗಳಿರುವಾಗ ನಮಗೆ ಹತ್ತು ಫಾರ್ಮ್‍ಗಳ ಒಂದು ಸೆಟ್ ತಲುಪುತ್ತವೆ. ಮೂರು ತಿಂಗಳ ಅವಧಿಯಲ್ಲಿ ಸೂಚಿಸಿದ ದಿನಾಂಕದಂದು ನಾವು ಆ ಫಾರ್ಮ್‍ಗಳನ್ನು ಕಳುಹಿಸಬೇಕು. ನಿವೃತ್ತಿಗೆ ಹದಿನೈದು ದಿನಗಳಿರುವಾಗ ನಮ್ಮ ಖಾತೆಗೆ ಬರಬೇಕಾದ ಎಲ್ಲಾ ಮೊತ್ತವೂ ಬಂದಿರುತ್ತದೆ. ನಮ್ಮ ಪ್ರಾವಿಡೆಂಟ್ ಫಂಡ್ ಮೊತ್ತ, ಗ್ರಾಚ್ಯುವಿಟಿ, ರಜೆಯ ಸಂಬಳ ಇತ್ಯಾದಿಗಳೆಲ್ಲವೂ ಪೈಸೆ ಪೈಸೆ ಲೆಕ್ಕದೊಂದಿಗೆ ನಮ್ಮ ಖಾತೆಗೆ ಜಮೆಯಾಗುತ್ತದೆ. ಬಹುಶ ಇಷ್ಟು ಶಿಸ್ತು ಬದ್ಧ ನಿವೃತ್ತಿ ವಿಶ್ವದ ಯಾವ ಇಲಾಖೆಯಲ್ಲೂ ಇರಲಿಕ್ಕಿಲ್ಲ.

ನಮ್ಮ ಸೇವಾವಧಿಯ ಕೊನೆಯ ದಿನಗಳಲ್ಲಿ, ನಾವಿರುವಲ್ಲಿಂದಲೇ ಕ್ರಮಾನುಸಾರ ಫಾರ್ಮ್‍ನ್ನು ತುಂಬಿ ಕಳುಹಿಸುವುದು ಬಿಟ್ಟರೆ ಫೈಲ್ ಹಿಡಿದುಕೊಂಡು ಅಲೆದಾಡುವ, ಗೋಗರೆಯುವ ಅಥವಾ ಸಲಾಮು ಹಾಕುವ ಯಾವ ಅವಶ್ಯಕತೆಯೂ ಇಲ್ಲ. ನಮ್ಮ ಯುನಿಫಾರಂಗಳನ್ನು ಹ್ಯಾಂಗರ್‍ಗೆ ನೇತು ಹಾಕುವ ಮುನ್ನ ನಮಗೆ ಸೇರಬೇಕಾದ ಅಷ್ಟೂ ಮೊತ್ತ ಬಂದು ಸೇರಿರುತ್ತದೆ.

ನನ್ನದೂ ನಿವೃತ್ತಿಯ ಎಲ್ಲಾ ವಿಧಾನಗಳೂ ಹಂತ ಹಂತವಾಗಿ ಮುಂದುವರಿಯುತ್ತಿದ್ದಂತೆ ನನ್ನನ್ನು ಇಷ್ಟು ವರ್ಷಗಳ ಕಾಲ ಪ್ರೀತಿಸಿದ ನನ್ನ ಸೈನಿಕರಿಗೆ ಮತ್ತು ಅವರ ಕುಟುಂಬಕ್ಕೆ ಕೃತಜ್ಞನಾಗಬೇಕಾದ ಕರ್ತವ್ಯವೂ ನನ್ನದಾಗಿತ್ತು. ಪ್ರೀತಿಯ ಹೊರತಾಗಿ ನಾನವರಿಗೆ ಏನು ತಾನೇ ಕೊಡಬಲ್ಲೆ! ನನ್ನ ಅವಧಿಯಲ್ಲಿಯೂ ದೇಶಕ್ಕಾಗಿ ಜೀವ ತೆತ್ತ ಎಲ್ಲಾ ಹುತಾತ್ಮರಿಗೂ ನಾನು ಮನಸಾರೆ ಶಾಂತಿ ಬಯಸಿ ಪ್ರಾರ್ಥನೆ ಸಲ್ಲಿಸಿದೆ.

ಆತ್ಮ ಎಂದೆಂದಿಗೂ ಅಮರ
ಅದನ್ನೆಂದೂ ಇಲ್ಲವಾಗಿಸಲಾರದು!
ಬೆಂಕಿಯಿಂದ ಸುಡಲಾಗದು, ನೀರಿನಲ್ಲಿ
ಮುಳುಗಿಸಲೂ ಆಗದು!
ಬಿರುಗಾಳಿಯಿಂದ ತೂರಿ ಬಿಡಲೂ ಆಗದು!!
ಅಗಲಿದ ವೀರ ಯೋಧರಿಗೆ ಇದೇ ನನ್ನ ನುಡಿನಮನವಾಗಿತ್ತು!

ಹೌದು, ಒಂದು ಮಾತಿದೆ. ವಯಸ್ಸಾದ ಸೈನಿಕ ಎಂದೂ ಸಾಯುವುದಿಲ್ಲ, ಆತ ನಿಧಾನವಾಗಿ ಅಳಿಸಿಹೋಗುತ್ತಾನೆ!. ವಯೋ ನಿವೃತ್ತರಾದ ನಮ್ಮಂತಹ ಸೈನಿಕರು, ದೇಶಕ್ಕಾಗಿ ಬಲಿದಾನ ಗೈದ ಸೈನಿಕರ ಬಗ್ಗೆ ಹೊಟ್ಟೆ ಕಿಚ್ಚು ಪಡುತ್ತೇವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಅವಕಾಶ ಅವರಿಗೆ ಸಿಕ್ಕಿದ್ದಕ್ಕೆ, ನಾವದರಿಂದ ವಂಚಿತರಾಗಿದ್ದಕ್ಕೆ!.

ಅಂತೂ ಸುಮಾರು 34ವರ್ಷಗಳ ಅನುಬಂಧವೊಂದಕ್ಕೆ ನಾನು ಕೊನೆಗೂ ವಿದಾಯ ಹೇಳಿದೆ. ಅದು 31ರ ಮೇ 2003. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ನನ್ನ ದೇಶದ ಸೈನಿಕರನ್ನು ಅಪ್ಪಿಕೊಂಡು ಅಳುತ್ತಾ ವಿದಾಯ ಹೇಳಿದೆ. ಆ ಕ್ಷಣ ಅತ್ಯಂತ ಭಾವುಕ ಮತ್ತು ನೋವಿನ ಕ್ಷಣವಾಗಿತ್ತು. ಈ ಹಂತದಲ್ಲಿ ನಾನಿಲ್ಲಿ ದಾಖಲಿಸಲೇ ಬೇಕಾದ ಅಬ್ರಹಾಂ ಲಿಂಕನ್ ಅವರ ಮಾತೊಂದು ನೆನಪಾಗುತ್ತದೆ. I like to see a man proud of the place in which he lives. I like to see a man live so that his place will be proud of him. (ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ ವಾಸಿಸಿ ಆ ಸ್ಥಳದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನು ಕಾಣಲಿಚ್ಛಿಸುತ್ತೇನೆ. ಓರ್ವ ವ್ಯಕ್ತಿ ಒಂದು ಸ್ಥಳದಲ್ಲಿ ವಾಸಿಸುತ್ತಿದ್ದ ಎಂಬ ಕಾರಣಕ್ಕೆ ಆ ಸ್ಥಳವೂ ಅವನ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದನ್ನು ಕಾಣಲಿಚ್ಛಿಸುತ್ತೇನೆ!)

ನಿವೃತ್ತಿಯ ಜೀವನದಲ್ಲಿರುವಾಗ ಇಂದು ನಾನು ಒಬ್ಬನೇ ಕುಳಿತು ಮೌನವಾಗಿ ದೇವರನ್ನು ಪ್ರಾರ್ಥಿಸುತ್ತೇನೆ. ಒಬ್ಬ ನಿವೃತ್ತ ಕರ್ನಲ್ ಬರೆದಿರುವ ಈ ಸಾಲುಗಳನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಇದನ್ನು ನಾವು ಕಮಾಂಡರ್‍ಗಳ ಪ್ರಾರ್ಥನೆಯಾಗಿಯೂ ಹೇಳುತ್ತೇವೆ.

Lord, make me worthy of he men I serve,
worthy of their loyalty and devotion to duty.
Their wonderous willingness and their ready laughter,
their great humility that asks so little
and gives so much to readily without complaint.
Grand their simple wishes Lord
And bless them please
For in this world no better soldiers breath
Than these.....no better soldiers breath
Than these.

ಸೈನಿಕನ ನಿವೃತ್ತಿ-ಬೀಳ್ಕೊಡುಗೆಯ ಕ್ಷಣಗಳು
ನಮ್ಮ ರೆಜಿಮೆಂಟ್ ನಲ್ಲಿ ಒಟ್ಟೂ 21 ಇನ್‍ಫಂಟರಿ ಬೆಟಾಲಿಯನ್ ಇತ್ತು. ಸೈನಿಕರು ಅವರ ರ್ಯಾಂಕ್‍ಗಳಿಗನುಗುಣವಾಗಿ 40ರಿಂದ 50ರ ವಯೋಮಾನದೊಳಗೆ ನಿವೃತ್ತರಾಗುತ್ತಿದ್ದರು. ಕೆಲವರಿಗೆ ಇನ್ನು ಓದುತ್ತಿರುವ ಚಿಕ್ಕ ಮಕ್ಕಳಿರುತ್ತಿದ್ದರು. ಅಥವಾ ಮದುವೆಗೆ ತಯಾರಾದ ಹೆಣ್ಣು ಮಕ್ಕಳು, ಬಿದ್ದು ಹೋಗುವ ಸ್ಥಿತಿಯಲ್ಲಿರುವ ಮನೆ, ಕಾಯಿಲೆಯಿಂದ ನರಳುತ್ತಿರುವ ಪೋಷಕರು...ಹೀಗೆ ದೇಶಕ್ಕಾಗಿ ತಮ್ಮ ಅತ್ಯಂತ ಮಹತ್ವದ ಆಯುಷ್ಯವನ್ನು ಧಾರೆ ಎರೆದ ಸೈನಿಕ ನಿವೃತ್ತಿಯ ದಿನ ಸಮೀಪಿಸುವಂತೆ ಚಿಂತೆಗೊಳಗಾಗುತ್ತಾನೆ. ಮುಂದೇನು ಎಂಬ ಪ್ರಶ್ನೆಯೊಂದು ಅವರ ಮುಂದೆ ಬ್ರಹದಾಕಾರವಾಗಿ ನಿಂತಿರುತ್ತದೆ. ಸೇನೆ ಎಂಬ ಒಂದು ಸೀಮಿತ ಪರಿಧಿಯೊಳಗೆ ತನ್ನದೇ ಒಂದು ಜೀವನ ಕಟ್ಟಿಕೊಂಡವನಿಗೆ ಈ ಪ್ರಪಂಚ ಹೇಗಿರಬಹುದೆಂಬ ಕಲ್ಪನೆಯೂ ಇರುವುದಿಲ್ಲ.

ಹದಿ ಹರೆಯದಲ್ಲಿ ಸೈನ್ಯಸೇರಿರುವ ಸೈನಿಕನಿಗೆ ಸೇನೆಯೇ ಜಗತ್ತಾಗಿರುತ್ತದೆ. ಪ್ರತೀ ತಿಂಗಳೂ ಬೇರೆ ಬೇರೆ ರ್ಯಾಂಕ್‍ನ ಕನಿಷ್ಟ 150-200 ಸೈನಿಕರು ನಿವೃತ್ತರಾಗುತ್ತಿದ್ದರು. ಪ್ರತೀ ಬೆಟಾಲಿಯನ್‍ನ ಸೈನಿಕರೂ ತಮ್ಮ ನಿವೃತ್ತಿಗೆ ಸರಿಯಾಗಿ ಒಂದು ತಿಂಗಳ ಮೊದಲು ನಮ್ಮಲ್ಲಿ ರಿಪೋರ್ಟ್ ಮಾಡಿಕೊಂಡಿರಬೇಕು. ಈ ಒಂದು ತಿಂಗಳ ಅವರ ನಿವೃತ್ತಿಯ ವಿವಿಧ ಹಂತದ ತಯಾರಿಯನ್ನು ‘ಪೆನ್ಶನ್ ಡ್ರಿಲ್’ ಎಂದು ಕರೆಯಲಾಗುತ್ತದೆ. ಪೆರೇಡ್ ನಲ್ಲಿ ಇಂತ ಸೈನಿಕರನ್ನು ಭೇಟಿಯಾಗಿ ಅವರಿಗೆ ಕೆಲ ನಿಯಮಗಳನ್ನು ಹೇಳಲಾಗುತ್ತದೆ. ಸೈನ್ಯದ ಓರ್ವ ರೆಕಾರ್ಡ್ ಆಫೀಸರ್ ಅವನ ಪ್ರತೀ ವಿಧಾನಗಳನ್ನೂ ಜತನದಿಂದ ನೋಡಿಕೊಳ್ಳುತ್ತಾನೆ. ಪ್ರತೀ ವಾರಕ್ಕೊಮ್ಮೆ ಆಗ ಬೇಕಾದ ಕೆಲಸಗಳನ್ನು ನೋಡಿ, ಎಲ್ಲಾ ಕಾಗದ ಪತ್ರಗಳ ತಯಾರಿ ಮಾಡುತ್ತಾನೆ. ಯಾವುದೇ ಲಂಚ ರುಷುವತ್ತುಗಳಿಗೆ ಅಲ್ಲಿ ಆಸ್ಪದವಿಲ್ಲ. ತಿಂಗಳ ಕೊನೆಯ ವಾರದಲ್ಲಿ ಅವನ ಎಲ್ಲಾ ಪತ್ರಗಳೂ ತಯಾರಾಗಿ, ಸೇರಬೇಕಾದ ಹಣ ಅವನ ಖಾತೆಗೆ ಸೇರಿರುತ್ತದೆ. ಕೊನೆಯ ಶನಿವಾರದಂದು ಬೀಳ್ಕೊಡುಗೆಯ ಸಮಾರಂಭ, ರಾತ್ರಿ ಊಟ, ಸ್ಮರಣಿಕೆ ನೀಡಿಕೆಯೊಂದಿಗೆ ಮುಂದಿನ ಜೀವನಕ್ಕೆ ಶುಭ ಹಾರೈಸಿ ಬೀಳ್ಕೊಡಲಾಗುತ್ತದೆ. ಒಂದು ಗ್ರೂಫ್ ಫೋಟೋಗ್ರಾಫ್ ಜೊತೆಗೆ ಬೀಳ್ಕೊಡುಗೆ ಸಮಾರಂಭ ಮುಗಿಯುತ್ತದೆ.

ಓರ್ವ ಕಮಾಂಡರ್‍ಗೆ ಅತ್ಯಂತ ಸಮಾಧಾನ ಸಂತಸ ಕಂಡುಕೊಳ್ಳುವ ಮಾರ್ಗವೆಂದರೆ ಇಂತಹ ಸೈನಿಕರು ಯಾವುದೇ ಅಸಮಾಧಾನ ಇಲ್ಲದೇ ನಿವೃತ್ತರಾಗುವುದನ್ನು ನೋಡುವುದು. ನನಗಂತೂ ಈ ಸೈನಿಕರು ನಮ್ಮ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸಲ್ಲಿಸಬಹುದಾದ ಬಹು ದೊಡ್ಡ ಕೃತಜ್ಞತೆ ಇದು ಮಾತ್ರ ಆಗಿತ್ತು.

ಯಾವುದಾದರೂ ಅನಿವಾರ್ಯ ಸಂದರ್ಭದಲ್ಲಿ ಯಾವುದೇ ಸೈನಿಕನಿಗೆ ಒಂದು ತಿಂಗಳಲ್ಲಿ ನಿವೃತ್ತಿಯ ಎಲ್ಲಾ ವಿಧಾನಗಳನ್ನು ಪೂರೈಸಲಾಗದಾದರೆ ಅಂತ ಸೈನಿಕನ್ನು ನಾವು ಅತಿಥಿಯಾಗಿ ಉಳಿಸಿಕೊಂಡು ಎಲ್ಲಾ ವಿಧಾನ ಮುಗಿಸಿ ಕಳಿಸುತ್ತಿದ್ದೆವು. ಬಹುಶ ಯಾವುದೇ ಇತರ ಇಲಾಖೆಗಳು ತಮ್ಮಿಂದ ನಿವೃತ್ತನಾಗುವ ಉದ್ಯೋಗಿಗೆ ಮೂವತ್ತು ದಿನದ ಮೊದಲೇ ಎಲ್ಲಾ ವೇತನ ನೀಡಿ, ಸಂತಸದಿಂದ ಆತ ಹೊರ ಹೋಗುವಂತೆ ಮಾಡುವ ವ್ಯವಸ್ಥೆ ಇಲ್ಲವೆಂದೇ ನನ್ನ ಅನಿಸಿಕೆ. ಅದಿರುವುದು ಕೇವಲ ನಮ್ಮ ಸೈನ್ಯದಲ್ಲಿ ಮಾತ್ರ.

ಹುತಾತ್ಮರ ಮಕ್ಕಳ ವಸತಿ ನಿಲಯ
ಸೈನ್ಯದಲ್ಲಿ ಹುತಾತ್ಮರಾದ ಮಕ್ಕಳಿಗಾಗಿ ಸುಸಜ್ಜಿತ ವಸತಿನಿಲಯವನ್ನು ಕಟ್ಟಲಾಗಿದೆ. 1965ರ ಯುದ್ಧದಲ್ಲಿ ಹುತಾತ್ಮರಾದ ನಾಯಕ್ ದರ್ಶನ್ ಸಿಂಗ್ ಹೆಸರಿನ ವಸತಿ ನಿಲಯದಲ್ಲಿ 6ರಿಂದ 18ವರ್ಷ ವಯಸ್ಸಿನ ಸುಮಾರು 35 ವಿದ್ಯಾರ್ಥಿಗಳು ಇರುತ್ತಿದ್ದರು. ಇವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಸೈನ್ಯ ಒದಗಿಸುತ್ತಿತ್ತು. ಇದನ್ನು ನೋಡಿಕೊಳ್ಳಲೆಂದೇ ಓರ್ವ ಡ್ಯೂಟಿ ಆಫೀಸರ್ ಇರುತ್ತಿದ್ದರು. ಯಾವುದಾದರೋ ಓರ್ವ ಆಫೀಸರ್ ಪತ್ನಿಯನ್ನು ಇಲ್ಲಿ ವಾರಕ್ಕೊಂದರಂತೆ ಡ್ಯೂಟಿ ಲೇಡಿ ಆಫ್ ದ ವೀಕ್ ಎಂದು ನೇಮಿಸಿ, ಆಕೆ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದರು. ಆಹಾರದ ಗುಣ ಮಟ್ಟ, ಸ್ವಚ್ಛತೆ, ಸೇವೆ, ಟ್ಯೂಶನ್ ಹೀಗೆ ಎಲ್ಲಾ ವ್ಯವಸ್ಥೆಗಳನ್ನೂ ಇವರು ನೋಡಿಕೊಳ್ಳುತ್ತಿದ್ದರು. ಹೀಗೆ ನಮ್ಮ ನಾಳೆಗಳಿಗಾಗಿ ತಮ್ಮ ನಿನ್ನೆಗಳನ್ನು ಬಲಿ ಕೊಟ್ಟ ಸೈನಿಕರ ತ್ಯಾಗವನ್ನು ನಾವು ಯಾವುದೇ ಕ್ಷಣದಲ್ಲೂ ಮರೆಯುತ್ತಿರಲಿಲ್ಲ. ಈ ಮೂಲಕ ಅವರ ಮಕ್ಕಳನ್ನು ನೋಡಿಕೊಳ್ಳುತ್ತಿರುವುದನ್ನೂ ನಾವು ಸೈನ್ಯದ ಕರ್ತವ್ಯ ಎಂದೇ ನಂಬಿದ್ದೆವು.

ನಿವೃತ್ತ ಸೈನಿಕರು/ವಿಧವೆಯರ ಬಗ್ಗೆ ಕಾಳಜಿ
ಮೂರು ಅಥವಾ ಆರು ತಿಂಗಳಿಗೊಮ್ಮೆ ಪಂಜಾಬ್‍ನ ವಿವಿಧ ಭಾಗಗಳಿಗೆ ನಾವು ಸೇನಾ ನೇಮಕಾತಿಗೆ ಹೋದಾಗ, ಅಲ್ಲಿ ನಿವೃತ್ತ ಸೈನಿಕರ ಅಥವಾ ಸೈನಿಕರ ವಿಧವೆಯರ ರ್ಯಾಲಿಗಳನ್ನು ಮಾಡುತ್ತಿದ್ದೆವು. ತಮ್ಮ ಜೀವಿತಾವಧಿಯನ್ನು ಸೈನ್ಯಕ್ಕೆ ಅರ್ಪಿಸಿದ ಇಂತಹವರಿಗೆ ಅವರ ಸಮಸ್ಯೆಗಳನ್ನೂ ಆಲಿಸುತ್ತಿದ್ದೆವು. ಅವರಿಗೆ ಆರ್ಥಿಕ ಸಹಕಾರ ಒದಗಿಸಿ, ಇತ್ತೀಚೆಗೆ ಹೊಸದಾಗಿಆಗಿರುವ ಬೆಳವಣಿಗೆಗಳನ್ನು, ನಿಯಮಗಳನ್ನು ತಿಳಿಸಿ ಹೇಳುತ್ತಿದ್ದೆವು, ಹೀಗೆ ಸೈನ್ಯ ಮತ್ತು ನಿವೃತ್ತರ, ಸೈನಿಕರ ವಿಧವೆಯರ, ಕುಟುಂಬದ ಸಂಬಂಧ ಸದಾ ಮುಂದುವರಿಯುತ್ತಿತ್ತು.

ನಿರೂಪಣೆ: ಅರೆಹೊಳೆ ಸದಾಶಿವರಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.