2003ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಚಿತ್ರ ಪ್ರೇಮ್ ನಿರ್ದೇಶನದ 'ಎಕ್ಸ್ಕ್ಯೂಸ್ ಮಿ'. ಸುನಿಲ್ ರಾವ್, ರಮ್ಯಾ ಮತ್ತು ಅಜಯ್ ರಾವ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರ ಮ್ಯೂಸಿಕಲ್ ಹಿಟ್ ಆಗಿತ್ತು,

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಪ್ರತಿಯೊಂದು ಹಾಡುಗಳು ಅದ್ಭುತವಾಗಿದ್ದವು. ಈ ಚಿತ್ರದಲ್ಲಿ 'ಬ್ರಹ್ಮ ವಿಷ್ಣು ಶಿವ' ಎಂಬ ಹಾಡೊಂದಿದೆ. ಪ್ರೇಮ್ ಅವರು ಈ ಹಾಡನ್ನು ಹಾಡಿದ್ದರು. ಸಂಗೀತ ನಿರ್ದೇಶನ ಆರ್.ಪಿ. ಪಟ್ನಾಯಿಕ್ ಅವರದ್ದು.

2007ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಮಾಯಾವಿ. ಮಮ್ಮೂಟ್ಟಿ, ಗೋಪಿಕಾ ಅಭಿನಯದ ಈ ಚಿತ್ರದಲ್ಲಿ 'ಮುಟ್ಟತ್ತೇ ಮುಲ್ಲೇ ಚೊಲ್ಲ್' ಎಂದು ಆರಂಭವಾಗುವ ಹಾಡಿಗೆ ಎಕ್ಸ್ಕ್ಯೂಸ್ ಮಿ ಚಿತ್ರದ ಬ್ರಹ್ಮ ವಿಷ್ಣು ಶಿವ ಹಾಡೇ ಸ್ಫೂರ್ತಿ. ಅಲೆಕ್ಸ್ ಪೌಲ್ ಸಂಗೀತ ನಿರ್ದೇಶಿಸಿದ ಈ ಹಾಡನ್ನು ಯೇಸುದಾಸ್ ಮತ್ತು ಮಂಜರಿ ಹಾಡಿದ್ದರು.

[related]

ಪರಭಾಷೆಯ ಹಾಡುಗಳಿಂದ ಸ್ಫೂರ್ತಿ ಪಡೆದ ಕನ್ನಡ ಚಿತ್ರಗೀತೆಗಳು ಇರುವಂತೆಯೇ ಕನ್ನಡದಿಂದ ಸ್ಫೂರ್ತಿ ಪಡೆದ ಪರಭಾಷಾ ಚಿತ್ರಗೀತೆಗಳೂ ಇವೆ. ಅವುಗಳಲ್ಲಿ ಮಾಯಾವಿ ಚಿತ್ರದ ಹಾಡೂ ಕೂಡಾ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.