ಸ್ವಚ್ಛಂದ ಹೆಣ್ಣು ಪ್ರೇಮವಿಲ್ಲದೆ ಕೇವಲ ಕಾಮಕ್ಕಾಗಿ ಗಂಡನ್ನು ಕೂಡಬಲ್ಲಳು, ಹಾಗೂ ಪ್ರೇಮದಿಂದ ಕಾಮವನ್ನು ಪ್ರತ್ಯೇಕಿಸಿ ಕೇವಲ ಪ್ರೇಮ ಸಂಬಂಧವನ್ನೂ ಹೊಂದಬಲ್ಲಳು. ನಿಷ್ಕಾಮ ಪ್ರೀತಿಯು ಬದ್ಧ ಗಂಡಿನಿಂದ ಸಿಗದಿದ್ದರೆ ಇತರ ಗಂಡು/ಹೆಣ್ಣು ಸ್ನೇಹಿತರಿಂದ ಪಡೆಯುವ ಯತ್ನವನ್ನೂ ಮಾಡಬಲ್ಲಳು ಎಂದು ಹೇಳಿದ್ದೆ. ಇದನ್ನು ಸ್ಪಷ್ಟಪಡಿಸಲೋ ಎಂಬಂತೆ ಒಂದು ಆಧಾರ ಸಿಕ್ಕಿತು. ಅದನ್ನು ನಿಮ್ಮೊಂದಿಗೆ ಉತ್ಸಾಹದಿಂದ ಹಂಚಿಕೊಳ್ಳುತ್ತಿದ್ದೇನೆ.

ಮೊನ್ನೆ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಸಿನಿಮಾಗಳಲ್ಲಿ ಒಂದು ಮಹತ್ವದ ಚಿತ್ರ ‘ನಾತಿಚರಾಮಿ.’ ಮಂಸೂರೆ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಹಾಗೂ ಸಂಚಾರಿ ವಿಜಯ ಅವರದು ಮುಖ್ಯ ಪಾತ್ರ. ಕತೆಯಲ್ಲಿ ನಾಯಕಿಯ ಗಂಡ ಸತ್ತು ಎರಡು ವರ್ಷವಾಗಿದೆ. ಅವನ ಮರಣವನ್ನು ಒಪ್ಪಿಕೊಂಡರೂ ತನ್ನ ಬದುಕಿನಲ್ಲಿ ಅವನ ಪಾತ್ರವನ್ನು ಎಳ್ಳಷ್ಟೂ ಮರೆತಿಲ್ಲ. ಬದಲು ಅವನನ್ನು ಜೀವಂತ ಇರಿಸಲು ಎಲ್ಲ ಪ್ರಯತ್ನ ಮಾಡುತ್ತ ಅವನ ಕಲ್ಪನೆಯಲ್ಲೇ ಸುಖಪಡುತ್ತ, ಶಾರೀರಿಕ ಬಯಕೆ ಆದಾಗ ವೈಬ್ರೇಟರ್ ಬಳಸಿ ಕಾಮತೃಪ್ತಿ ಪಡೆಯುತ್ತ ಆರಾಮವಾಗಿ ಇದ್ದಾಳೆ. ಕ್ರಮೇಣ ಆಕೆಗೆ ಮರೆವು, ಎಲ್ಲೋ ಗಮನ, ನೀರಸತನ, ಕಳೆದುಹೋಗುವಿಕೆ ಕಾಡುತ್ತದೆ. ಹಸಿಕಾಮವನ್ನು ಹತ್ತಿಕ್ಕಿದ್ದರಿಂದ ಹೀಗಾಗಿದೆ, ಅದರ ತೂಬು ತೆಗೆದು ಹೊರಹರಿಯಲು ಬಿಡುವುದು ಸೂಕ್ತವೆಂದು ಮನೋವೈದ್ಯನು ಅಭಿಪ್ರಾಯ ಪಡುತ್ತಾನೆ. ಹಾಗಾಗಿ ಆಕೆ ಒಬ್ಬ ಸಂಗಾತಿಯನ್ನು ಹುಡುಕಲು ಹೊರಡುತ್ತಾಳೆ. ಅದಕ್ಕೆ ಕರಾರು ಎಂಥದ್ದು? ಅವನು ಕೇವಲ ಶಾರೀರಿಕ ಸುಖಕ್ಕಾಗಿ ಸಂಪರ್ಕಿಸಬೇಕೇ ವಿನಾ ಪ್ರಣಯ- ಪ್ರೀತಿಗಾಗಿ ಅಥವಾ ದೀರ್ಘಕಾಲೀನ ಸಂಬಂಧಕ್ಕಾಗಿ ಅಲ್ಲ! ಇಷ್ಟರಲ್ಲಿ ನಾಯಕನ ಭೇಟಿಯಾಗುತ್ತದೆ. ಆತ ವಿವಾಹಿತ. ಏಕಸಂಗಾತಿಗೆ ನಿಷ್ಠನಾದರೂ ದಾಂಪತ್ಯದ ಬಾಂಧವ್ಯಕ್ಕೆ ಜೋಡಿಸಿಕೊಳ್ಳದೆ ಪ್ರೀತಿ-ಪ್ರೇಮಗಳಿಂದ ಮೈಲು ದೂರವಿದ್ದಾನೆ. ಅತ್ಯಂತ ಪ್ರೀತಿಸುತ್ತ ಅನುಬಂಧಕ್ಕಾಗಿ ಹಾತೊರೆಯುವ ಹೆಂಡತಿಯ ಬಯಕೆಗಳನ್ನು ನಿರ್ಲಕ್ಷ್ಯಿಸುತ್ತ ಉದ್ಯೋಗವನ್ನೇ ಉಸಿರಾಡುತ್ತ ಇರುತ್ತಾನೆ. ಆದರೆ ಆಗಾಗ ನಿರ್ಭಾವುಕನಾಗಿ ಹೆಂಡತಿಯನ್ನು ಸಂಭೋಗಕ್ಕೆ ಉಪಯೋಗಿಸಿಕೊಳ್ಳುತ್ತ, ಆನಂತರ ವಿಮುಖನಾಗುತ್ತಾನೆ. ನಾಯಕಿಯ ತನ್ನ ಕಾಮದ ಅಗತ್ಯತೆಯನ್ನು ನಾಯಕನೊಂದಿಗೆ ಹಂಚಿಕೊಂಡಾಗ ಒಪ್ಪದೆ ತಿರಸ್ಕರಿಸುತ್ತ, ಚಾರಿತ್ರ್ಯಹೀನಳೆಂದು ಜರಿಯುತ್ತಾನೆ. ಆಕೆ ಅವನನ್ನು ಎದುರಿಸಿ ಪ್ರಶ್ನಿಸಿದಾಗ ತನ್ನ ತಪ್ಪು ಅರಿವಾಗುತ್ತ, ಆಕೆಯ ಅಂತರಂಗದ ಬೇಡಿಕೆಗೆ ಓಗೊಡುತ್ತಾನೆ. ನಾಯಕ ನಾಯಕಿ ಕತ್ತಲಲ್ಲಿ ಕೂಟ ನಡೆಸುತ್ತಾರೆ. ನಂತರ ಬೆಳಕಿನಲ್ಲಿ ಗೋಡೆಯ ಮೇಲೆಲ್ಲ ಹರಡಿಕೊಂಡ ಆಕೆಯ ಗಂಡನ ಭಾವಚಿತ್ರಗಳನ್ನು ನೋಡಿ ನಾಯಕ ದಿಗ್ರ್ಭಮೆಗೊಳ್ಳುತ್ತಾನೆ. ತನ್ನ ಹೆಂಡತಿಯು ತಮ್ಮಿಬ್ಬರ ಭಾವಚಿತ್ರಗಳಿಂದ ಗೋಡೆಯನ್ನು ಅಲಂಕರಿಸಿ, ತೋರಿಸಿದಾಗ ನಿರ್ಲಕ್ಷಿಸಿದ್ದು ನೆನಪಾಗುತ್ತದೆ. ನಾಯಕಿಯ ಜೊತೆಗಿನ ಕೂಟದಲ್ಲಿ ಭಾವೋತ್ಕಟತೆಯಿಂದ ಒಳಗೊಂಡಿದ್ದು ತಲೆಯಲ್ಲಿ ಇದ್ದಂತೆಯೆ, ಹೆಂಡತಿಯ ಜೊತೆಗಿನ ಕೂಟಗಳಲ್ಲಿ ನಿರ್ಭಾವುಕನಾಗಿ ಇದ್ದುದು ನೆನಪಾಗುತ್ತ ಮನಸ್ಸು ಕಲಕಿ ತಪ್ಪಿತಸ್ಥ ಭಾವ ಕಾಡುತ್ತದೆ. ಅವನು ಮನೆಗೆ ಮರಳಿ ಹೆಂಡತಿಯನ್ನು ತಬ್ಬಿಕೊಳ್ಳುತ್ತ ಅಳುತ್ತಾನೆ. ಅವಳ ಭಾವನೆಗಳಲ್ಲಿ ಲೀನವಾಗುತ್ತ ಮೊಟ್ಟಮೊದಲ ಸಲ ಅನನ್ಯತೆಯ ಭಾವವನ್ನು ಅನುಭವಿಸುತ್ತಾನೆ. ಇತ್ತ ನಾಯಕಿಯು ತನ್ನ ‘ಒಂದು-ರಾತ್ರಿ’ಯ ಸುಖದಿಂದ ಜೀವಂತಿಕೆ ಪಡೆದುಕೊಳ್ಳುತ್ತ ಮೈದುಂಬಿಕೊಳ್ಳುತ್ತಾಳೆ.

ಕತೆಯ ಉದ್ದಕ್ಕೂ ಎದ್ದುಕಾಣುವುದು ಶ್ರುತಿಯವರ ಪ್ರೌಢ ಅಭಿನಯದ ಹಿಂದಿರುವ ನಾಯಕಿಯ ವ್ಯಕ್ತಿತ್ವ. ಗಂಡನನ್ನು ಕಳೆದುಕೊಂಡರೂ ಅವನ ಜೊತೆಗಿನ ದಾಂಪತ್ಯವನ್ನು ಕಳೆದುಕೊಳ್ಳದಿರುವುದು ಆಕೆಯ ಅದ್ವಿತೀಯತೆ. ಹಾಗಿದ್ದರೂ ಭೂತಕಾಲದ ಭ್ರಮೆಯಲ್ಲಿ ಬದುಕಲು ಇಷ್ಟಪಡದೆ ವಾಸ್ತವಕ್ಕೇ ಅಂಟಿಕೊಳ್ಳಲು ಅವಳಿಗೇನೂ ಅಡ್ಡಿಯಿಲ್ಲ. ತನ್ನನ್ನು ಬಯಸಿ ಮುಗಿಬೀಳುವ ಪುರುಷರಿಂದ ರಕ್ಷಿಸಿಕೊಳ್ಳುವುದು ಆಕೆಯ ಒಂದು ಯತ್ನವಾದರೆ, ಇನ್ನೊಂದು ಯತ್ನವು ತಾನು ಮೆಚ್ಚುವ- ಆದರೆ ತನ್ನನ್ನು ಮೆಚ್ಚದಿರುವ- ಪುರುಷನಿಂದ ಸಾಂಗತ್ಯ ಬಯಸದೆ ಕೇವಲ ಕಾಮೇಚ್ಛೆಯ ಅಗತ್ಯವನ್ನು ಪೂರೈಸಿಕೊಳ್ಳುವುದು ಆಕೆಯ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಅನ್ಯನೊಡನೆ ಮೈ ಒಡ್ಡಿಕೊಳ್ಳುವ ವಿಚಾರಕ್ಕೆ ಆಕೆ ಮೂಗು ಮುರಿಯುವುದಿಲ್ಲ- ಏಕೆಂದರೆ ಅದು ವೈದ್ಯರು ಶಿಫಾರಸು ಮಾಡಿರುವ ಔಷಧಿಯಂತೆ. ಹಾಗಾಗಿಯೇ ನಾಯಕನಿಗೆ, ‘ನಿನ್ನ ದಾಂಪತ್ಯವನ್ನು ನೀನಿಟ್ಟುಕೋ; ನಿನ್ನ ಶರೀರವನ್ನು ಮಾತ್ರ ಒಂದುಸಲ ಕೊಡು’ ಎಂದು ಸಂದೇಶ ಕೊಟ್ಟು ಕಾಮುಕತೆಯಲ್ಲಿ ಧೀಮಂತಿಕೆ ಮೆರೆಯುತ್ತಾಳೆ. ಅವಳ ದೃಷ್ಟಿಯಲ್ಲಿ ಇನ್ನೊಬ್ಬ ಗಂಡೆಂದರೆ ವೈಬ್ರೇಟರ್ನ ಇನ್ನೊಂದು ತುದಿಗೆ ಅಂಟಿದ ಶರೀರವಷ್ಟೆ; ಅದರೊಡನೆ ಭಾವನಾತ್ಮಕ ನಂಟು ಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆಕೆಗೆ ತನ್ನ ಗಂಡನ ಜೊತೆಗಿನ ನಿಷ್ಠೆಯ ಜೊತೆಗೆ ತನ್ನ ದಾಂಪತ್ಯದ ಜೊತೆಗಿನ ನಿಷ್ಠೆಯೂ ಎದ್ದುಕಾಣುತ್ತದೆ– ಗಂಡನನ್ನು ಕಳೆದುಕೊಂಡರೂ ದಾಂಪತ್ಯವನ್ನು ಕಳೆದುಕೊಳ್ಳಲಾರಳು. ಗಂಡ ಹೇಗೇ ಇರಲಿ, ಅವನೊಡನೆಯ ದಾಂಪತ್ಯ ಬೇಕು ಎಂದು ನಾಯಕನ ಹೆಂಡತಿಯು ಬಯಸುವಾಗ, ಗಂಡ ಇಲ್ಲದಿದ್ದರೂ ಸರಿ, ಅವನೊಡನೆಯ ದಾಂಪತ್ಯ ಬೇಕು ಎಂದು ನಾಯಕಿಯು ಬಯಸುವುದು ಕಥಾಕೌಶಲ್ಯ ಹಾಗೂ ಸೂಕ್ಷ್ಮ ನಿರ್ದೇಶನಕ್ಕೆ ಸಾಕ್ಷಿಯಾಗಿದೆ.

ಇದೆಲ್ಲ ಕತೆಯಾಯಿತು. ಇಲ್ಲಿ ನನಗೊಬ್ಬ ಕಾಲೇಜು ವಿದ್ಯಾರ್ಥಿ ನೆನಪಾಗುತ್ತಾನೆ. ಒಂಟಿವಾಸಿಯಾದ ಅವನಿಗೆ ಪಕ್ಕದ ಮನೆಯ ಪ್ರೌಢ ಮಹಿಳೆಯ ಪರಿಚಯವಾಗಿದೆ. ಆಕೆ ತನ್ನ ಗಂಡನ ಜೊತೆಗಿರುವ ನೀರಸ ಬಾಂಧವ್ಯವನ್ನು ಇವನೊಡನೆ ಹೇಳಿಕೊಂಡಿದ್ದಾಳೆ. ಇಬ್ಬರೂ ಸ್ನೇಹಿತರಾಗಿದ್ದಾರೆ. ಇವನಿಗೋ ಅವಳೊಡನೆ ಕೂಡುವಾಸೆ. ಅದಕ್ಕವಳು ಒಪ್ಪುತ್ತಿಲ್ಲ. ಬಾಂಧವ್ಯವನ್ನು ಮಾತ್ರ ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾಳೆ. ಛಲ ಬಿಡದಿರುವ ಇವನೊಡನೆ ಕೊನೆಗೊಂದು ಸಲ ಕೂಡಿದ್ದಾಳೆ. ನಂತರ ವ್ಯವಹಾರವನ್ನು ಕಡಿದುಕೊಂಡಿದ್ದಾಳೆ. ಇವನು ಖಿನ್ನತೆ, ವ್ಯಥೆಯಿಂದ ನನ್ನಲ್ಲಿ ಬಂದಿದ್ದಾನೆ. ಈ ದೃಷ್ಟಾಂತದಲ್ಲಿ ಹುಡುಗನನ್ನು ಬದಿಗಿಟ್ಟು, ಆ ಮಹಿಳೆಯ ಬಗೆಗೆ ಯೋಚಿಸೋಣ. ಅವಳಿಗೂ ‘ನಾತಿಚರಾಮಿ’ಯ ನಾಯಕಿಗೂ ವ್ಯತ್ಯಾಸವಿದೆ. ಪರಸಂಬಂಧದಲ್ಲಿ ನಾಯಕಿಯು ಭಾವನೆಗಳಿಲ್ಲದ ಕಾಮುಕತೆಯನ್ನು ಬಯಸಿದರೆ, ಈ ಪ್ರೌಢ ಮಹಿಳೆ ಕಾಮುಕತೆ ಇಲ್ಲದ ಭಾವನೆಗಳನ್ನು ಬಯಸುತ್ತಾಳೆ. ಇಂಥ ಹೆಂಗಸರು ನಮ್ಮಲ್ಲಿ ಹೇರಳವಾಗಿದ್ದಾರೆ.

ಹೀಗೇಕೆ? ನಮ್ಮಲ್ಲಿ ಸಾಕಷ್ಟು ಗಂಡಸರು ಮೇಲಿನ ನಾಯಕನಂತೆ ಏಕಾಂಗಿ ಸ್ವಭಾವವನ್ನು (Avoidant attachment style) ಬೆಳೆಸಿಕೊಂಡಿರುತ್ತಾರೆ. ಅವರಿಗೆ ಮೈಗೊಡುವ ಹೆಂಗಸರಿಗೆ ಕಾಮತೃಪ್ತಿ ಆಗುವುದು ಬಹಳ ಕಷ್ಟ. ಇದಕ್ಕೆ ಪರಿಹಾರ? ಪರಿಹಾರ ಕಂಡುಕೊಂಡ ಮಹಿಳೆಯ ಬಾಯಿಯಿಂದಲೇ ಕೇಳಿ ‘ಪ್ರತಿ ಕೂಟದ ನಂತರ ನನ್ನ ಗಂಡ ಆ ಕಡೆಗೆ ತಿರುಗಿ ನಿದ್ದೆಗೆ ಜಾರುತ್ತಾನೆ. ಅದನ್ನೇ ಕಾಯುತ್ತಿರುವ ನಾನು ಈ ಕಡೆಗೆ ತಿರುಗಿ ನನಗೆ ಬೇಕಾದಂತೆ ಖಾಸಗಿ ಭಾಗಗಳನ್ನು ಸ್ಪರ್ಶಿಸಿಕೊಳ್ಳುತ್ತ ಕಾಮತೃಪ್ತಿ ಪಡೆಯುತ್ತೇನೆ. ನಂತರ ಮಂಚದಿಂದ ಇಳಿದು ಅವನನ್ನು ನೋಡುತ್ತೇನೆ. ‘ನೋಡಿದೆಯಾ, ನಿನ್ನ ಸುಖ ಬೇರೆ, ನನ್ನ ಸುಖ ಬೇರೆ. ನೀನು ಕೊಡದಿದ್ದರೆ ನಾನು ಉಪವಾಸ ಇರುವೆನೆಂದು ತಿಳಿದಿದ್ದೀಯಾ.’ ಎಂದು ಅಂದುಕೊಳ್ಳುತ್ತ ಬಚ್ಚಲಿಗೆ ಹೋಗುತ್ತೇನೆ.

ಇಂಥ ಮಹಿಳೆಯರಲ್ಲಿ ಅನೇಕರು ತಮ್ಮ ಮೆಚ್ಚಿನ ಪುರುಷರನ್ನು ಕಲ್ಪಿಸಿಕೊಳ್ಳುತ್ತ ಸುಖಪಡುವುದೂ ಉಂಟು. ಇವರನ್ನೂ ‘ನಾತಿಚರಾಮಿ’ಯ ನಾಯಕಿಯನ್ನೂ ಗಮನಿಸಿದರೆ ಏನು ಗೊತ್ತಾಗುತ್ತದೆ? ಹೆಂಗಸರ ಕಾಮಪ್ರಜ್ಞೆಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆ!

ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.