ರಾಜ್ಯದ ಶಿಗ್ಗಾವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಂದ ವಿಧಾನಸಭೆಗೆ ಇದೇ 13ರಂದು ನಡೆದ ಉಪಚುನಾವಣೆಗಳು ಹಲವು ಕಾರಣಗಳಿಂದ ಏಕಕಾಲಕ್ಕೆ ಮುಖ್ಯವೂ ಅಮುಖ್ಯವೂ ಆಗಿದ್ದವು. ಈ ಕ್ಷೇತ್ರಗಳಲ್ಲಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಇ.ತುಕಾರಾಮ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರಿಂದ ಈ ಕ್ಷೇತ್ರಗಳಿಗೆ ಉಪಚುನಾವಣೆಗಳ ಆರ್ಭಟ ಕಾಲಿರಿಸುವಂತಾಗಿತ್ತು.

ಎರಡು ಕ್ಷೇತ್ರಗಳಲ್ಲಿ ಹಾಲಿ ಸಂಸದರ ಮಕ್ಕಳು ಹಾಗೂ ಇನ್ನೊಂದರಲ್ಲಿ ಸಂಸದರ ಮಡದಿ ತಮ್ಮೆಲ್ಲಾ ಸ್ವಹಿತಾಸಕ್ತಿಗಳನ್ನು ‘ತ್ಯಾಗ’ ಮಾಡಿ, ಚುನಾವಣಾ ಕಣಕ್ಕಿಳಿಯುವ ಮೂಲಕ ಜನಸೇವೆಗೆ ಮುಂದಾಗಿದ್ದನ್ನು ಮತದಾರರು ಅಚ್ಚರಿ, ಅಭಿಮಾನ ಮತ್ತು ಆತಂಕದಿಂದ ವೀಕ್ಷಿಸಿದ್ದಾರೆ!

ಉಪಚುನಾವಣೆಯ ಫಲಿತಾಂಶವು 136 ಶಾಸಕರ ಬೆಂಬಲದಿಂದ ಸದೃಢವಾಗಿರುವ ಸರ್ಕಾರದ ಮೇಲಾಗಲೀ ಸಂಸತ್ ಚುನಾವಣೆಯಲ್ಲಿ ಸಮಾಧಾನಕರ ಪ್ರದರ್ಶನ ನೀಡಿರುವ ವಿರೋಧ ಪಕ್ಷಗಳ ವರ್ತಮಾನ ಅಥವಾ ಹತ್ತಿರದ ಭವಿಷ್ಯದ ಮೇಲಾಗಲೀ ಪರಿಣಾಮ ಬೀರುವ ಸಾಧ್ಯತೆ ಇರಲೇ ಇಲ್ಲ. ಆದಾಗ್ಯೂ ಈ ಚುನಾವಣೆಗಳ ಆರಂಭ, ಮಧ್ಯಂತರ ಮತ್ತು ಕೊನೆಯ ಹಂತಗಳ ಆಗುಹೋಗುಗಳು ಸಾಮಾನ್ಯ ಜನರೊಂದಿಗೆ ರಾಜಕೀಯ ವಿಶ್ಲೇಷಕರನ್ನೂ ಗೊಂದಲದಲ್ಲಿ ಮುಳುಗಿಸುವಷ್ಟು ತಿರುವುಗಳನ್ನು ಪಡೆದಿದ್ದನ್ನು ಗಮನಿಸಿದ್ದೇವೆ.

ಅಮುಖ್ಯ ಸ್ಪರ್ಧಾಕಣ ಕೂಡ ಅತಿಯಾದ ಪ್ರಾಮುಖ್ಯ ಪಡೆಯುವಲ್ಲಿ ಕುಟುಂಬ ರಾಜಕಾರಣದ ಪ್ರತಿಷ್ಠೆಯ ಕೊಂಬುಗಳ ತಾಕಲಾಟವೇ ಬಹುದೊಡ್ಡ ಪಾತ್ರ ವಹಿಸಿರುವುದು ಎದ್ದು ಕಾಣಿಸುತ್ತದೆ. ಯಾವುದೇ ಸಂದರ್ಭದಲ್ಲಿ ಪ್ರತಿಷ್ಠೆ ಎಂಬುದು ಅಖಾಡಕ್ಕೆ ಇಳಿದಾಗ, ಆಟದ ಎಲ್ಲಾ ನೀತಿನಿಯಮಗಳು ಗಾಳಿಯಲ್ಲಿ ತೂರಿಹೋಗುವುದು, ತಿರುವುಮುರುವು ಆಗುವುದು ಸಾಮಾನ್ಯ.

ಅಂತೆಯೇ ಉಪಚುನಾವಣೆಗಳಲ್ಲಿ ಆರೋಪ, ಪ್ರತ್ಯಾರೋಪ, ನಿಂದನೆ, ಕೆಸರೆರಚಾಟ, ವ್ಯಕ್ತಿಗತ ದಾಳಿ, ಅಸಭ್ಯ ಭಾಷಾಬಳಕೆ... ಯಾವುದರಲ್ಲೂ ಯಾರೂ ಯಾವ ಪಕ್ಷವೂ ಹಿಂದೆ ಬೀಳಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ಚುನಾವಣೆಗಳಲ್ಲಿ ನಡೆದ ಹಣಕಾಸಿನ ವಹಿವಾಟು ಎಲ್ಲರ ಊಹೆ, ತರ್ಕ, ಲೆಕ್ಕಾಚಾರವನ್ನೂ ಮೀರಿಸಿದೆ. ಈ ಮೂರೂ ಕ್ಷೇತ್ರಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಕೇಳಿಬಂದ ಹಣದ ಚಲಾವಣೆ ಬಗೆಗಿನ ಮಾಹಿತಿಗಳು ಬೆಚ್ಚಿಬೀಳಿಸುವಂತಹವು.

ಶಿಗ್ಗಾವಿ ಕ್ಷೇತ್ರದ ರೈತನೊಬ್ಬ ಅಕಾಲಿಕ ಮಳೆಯಿಂದ ನೆಲಕಚ್ಚಿದ್ದ ಮೆಕ್ಕೆಜೋಳ ಕಟಾವು ಮಾಡಲು ಕೂಲಿಕಾರರ ತಂಡದ ಮುಖಂಡನನ್ನು ಸಂಪರ್ಕಿಸಿದನಂತೆ. ಆತ, ‘ಅಣ್ಣಾರ... ಇನ್ನೆರಡು ದಿನ ಬಿಟ್ಟುಬಿಡ್ರಿ, ಆಳುಗಳು ಸಿಗಂಗಿಲ್ಲ. ವೋಟಿಗೆ ಒಬ್ಬರು 2,000, ಇನ್ನೊಬ್ಬರು 1,500 ರೂಪಾಯಿ ಕೊಟ್ಟಾರ...’ ಎಂದು ಲೆಕ್ಕ ಬಿಚ್ಚಿಟ್ಟ. ಸಂಡೂರು ಕ್ಷೇತ್ರ ಯಾವತ್ತೂ ಅಭ್ಯರ್ಥಿಗಳ ಪಾಲಿಗೆ ದುಬಾರಿ ಎನ್ನಿಸಿಕೊಂಡಿದ್ದೇ ಇಲ್ಲ. ಇಲ್ಲಿ ಸಾಮಾನ್ಯವಾಗಿ ಒಗ್ಗರಣೆ ಮೆಣಸಿನಕಾಯಿಗೆ ತೃಪ್ತಿಪಡುವಷ್ಟು ಸಂಭಾವಿತ ಮತದಾರರು ಕಾಣಸಿಗುತ್ತಾರೆ. ಆದರೆ ಈ ಬಾರಿ ಜನಾರ್ದನ ರೆಡ್ಡಿ ಅವರು ಸಂಡೂರಿನಲ್ಲಿ ಠಿಕಾಣಿ ಹೂಡಿದ್ದರಿಂದ, ಕ್ಷೇತ್ರದ ಮೌಲ್ಯವೂ ಬಹಳಷ್ಟು ತೇಜಿ ದಾಖಲಿಸಲು ಸಾಧ್ಯವಾಗಿದೆ ಎಂಬ ಮಾತು ಕೇಳಿಬಂದಿದೆ.

ಇನ್ನು, ಚನ್ನಪಟ್ಟಣದಲ್ಲಂತೂ ಚುನಾವಣೆ ಬದಲು ವಾಹಿನಿಗಳು ಬಣ್ಣಿಸುವಂತೆ ‘ರೋಚಕ ಕದನ’ವೇ ಏರ್ಪಟ್ಟಿದ್ದನ್ನು ನಾಡು ಬೆರಗುಗಣ್ಣಿನಿಂದ ನೋಡುವಂತಾಯಿತು. ಅಲ್ಲಿ ಸುರಿದ ದ್ವೇಷದ ಮಳೆ, ಹರಿದ ಹಣದ ಹೊಳೆ ಯಾರ ಅಂದಾಜಿಗೂ ನಿಲುಕುವ ಪ್ರಮಾಣದ್ದಲ್ಲ. ಒಂದು ಅಸ್ಪಷ್ಟ ಲೆಕ್ಕಾಚಾರದ ಪ್ರಕಾರ, ಚುನಾವಣೆಯಲ್ಲಿ ಚಲಾವಣೆಯಾದ ಮೊತ್ತ ₹ 350 ಕೋಟಿ ಮೀರಿದೆ ಎಂದು ಹೇಳಲಾಗುತ್ತದೆ. ಇತ್ತೀಚೆಗಿನ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಶಿಕ್ಷಣಕ್ಕಿಂತ ಮದುವೆಗಳಿಗೆ ಹೆಚ್ಚಿನ ಹಣ ವ್ಯಯವಾಗುತ್ತಿದೆಯಂತೆ. ಅದರಂತೆ ಕ್ಷೇತ್ರದ ಅಭಿವೃದ್ಧಿ ವೆಚ್ಚ ಮತ್ತು ಚುನಾವಣೆ ಖರ್ಚಿನ ಅನುಪಾತದ ಬಗ್ಗೆ ಅಧ್ಯಯನ ಆಗಬೇಕಿದೆ!

ಈ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಇಷ್ಟೊಂದು ದನಿ, ಧನ, ಪ್ರತಿಷ್ಠೆಯನ್ನು ಖರ್ಚು ಮಾಡಿ ಸಾಧಿಸುವುದಾದರೂ ಏನನ್ನು ಎಂಬ ಅಮಾಯಕ ಸಂದೇಹ ಮೂಡಬಹುದು. ನಿಜದಲ್ಲಿ, ಇವೆಲ್ಲಾ ಅವರು ಮಾಡುವ ಖರ್ಚಲ್ಲ; ಬದಲಾಗಿ, ಹೂಡಿಕೆ ಎಂಬುದು ಮತದಾರರ ಪ್ರಜ್ಞೆಯ ಪರಿಧಿಯನ್ನು ಪ್ರವೇಶಿಸದಿದ್ದರೆ ಪ್ರಜಾಪ್ರಭುತ್ವದ ಗುಣಮಟ್ಟ ಪಾತಾಳ ಮುಟ್ಟಲು ಬಹಳ ಸಮಯವನ್ನೇನೂ ಬೇಡುವುದಿಲ್ಲ. ಅಷ್ಟಕ್ಕೂ ಭ್ರಷ್ಟ ರಾಜಕಾರಣಿಗಳು ಚುನಾವಣೆಗಳ ಸಮಯದಲ್ಲಿ ಹೂಡಿಕೆ ಮಾಡುವ ಇಷ್ಟೊಂದು ಬಂಡವಾಳ ಎಲ್ಲಿಂದ ಬರುತ್ತದೆ, ಈ ಹೂಡಿಕೆಗೆ ಪ್ರತಿಯಾಗಿ ಅವರು ಎಲ್ಲಿಂದ ಲಾಭ ಗಳಿಸುತ್ತಾರೆ ಎಂಬಂತಹ ಪ್ರಶ್ನೆಗಳು ಮೂಡುವಷ್ಟು ಮುಗ್ಧತೆಯನ್ನು ಪ್ರಜಾಪ್ರಭುಗಳು ಈಗಾಗಲೇ ಕಳೆದುಕೊಂಡಾಗಿದೆ. ರಾಜಕಾರಣ ಎಂದರೆ ಹಣದ ವಹಿವಾಟು ಮತ್ತು ಅಧಿಕಾರದ ಕವಾಟ ಎಂಬ ವ್ಯಾಖ್ಯಾನದ ಎದುರಿನಲ್ಲಿ ಎಲ್ಲ ತತ್ವ, ಸಿದ್ಧಾಂತಗಳು ಕೈಕಟ್ಟಿ, ತಲೆಬಾಗಿ ನಿಂತಿರುವುದನ್ನು ಕಾಣುತ್ತಿದ್ದೇವೆ.

ಇಂತಿರುವ ಹಾಲಿ ರಾಜಕೀಯ ವಾತಾವರಣದಲ್ಲಿ ಯಾವ ಪುಣ್ಯಾತ್ಮ ತಾನೇ ಇಷ್ಟೊಂದು ಬಂಡವಾಳವನ್ನು ಕುಟುಂಬಸ್ಥರ ಮೇಲಲ್ಲದೆ ಕಾರ್ಯಕರ್ತರ ಮೇಲೆ ಹೂಡಲು ಮನಸ್ಸು ಮಾಡಿಯಾನು ಎಂಬ ತರ್ಕದಲ್ಲಿ ಕುಟುಂಬ ರಾಜಕಾರಣ ಕುರಿತ ಟೀಕೆಗಳಿಗೆ ಉತ್ತರವಿದೆ. ಈ ಮಧ್ಯೆ ರಾಜಕೀಯ ತಾತ್ವಿಕತೆ, ನೈತಿಕತೆ ಕೂಡ ಅವಕಾಶವಾದಿ ನೆಲೆಯಲ್ಲಿ ತೇಲಿ ಹೋಗುವುದನ್ನು ಗಮನಿಸಬಹುದು. ‘ಕೋಮುವಾದಿ ಬಿಜೆಪಿ’ಯ ಲಕ್ಷ್ಮಣ ಸವದಿ, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಿದ ತಕ್ಷಣ ‘ಸೆಕ್ಯುಲರ್’ ಆಗಬಲ್ಲರು. ‘ಗುಲಾಮಗಿರಿ ಪಾಲನೆ’ಗೆ ಹೆಸರಾದ ಕಾಂಗ್ರೆಸ್ ಪಕ್ಷದ 15 ಶಾಸಕರು ಬಿಜೆಪಿ ಸೇರಿ ಸರ್ಕಾರ ರಚಿಸಿದ ಕೂಡಲೇ ರಾಷ್ಟ್ರೀಯವಾದಿ ಆಗಲು ಸಾಧ್ಯ. ಜಗದೀಶ ಶೆಟ್ಟರ್ ಅಂತಹವರು ಕೆಲವೇ ತಿಂಗಳಲ್ಲಿ ಸೆಕ್ಯುಲರ್ ಮತ್ತು ಕೋಮುವಾದಿ ಪೋಷಾಕನ್ನು ಅದಲು ಬದಲು ಮಾಡಿಕೊಳ್ಳಬಹುದು. ಇಂತಹ ಬೆಳವಣಿಗೆಗಳನ್ನು ಆಧರಿಸಿಯೇ ಶಾಸಕರ ಖರೀದಿಯ ಹೇಳಿಕೆಗಳನ್ನು ನಿಕಷಕ್ಕೆ ಒಡ್ಡಬೇಕಿದೆ.

ಕಾಂಗ್ರೆಸ್ ಪಕ್ಷದ ಐವತ್ತು ಶಾಸಕರಿಗೆ ಬಿಜೆಪಿ ತಲಾ ₹ 50 ಕೋಟಿಯ ಆಮಿಷ ಒಡ್ಡಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಆಫರ್ ಮೊತ್ತ ಐವತ್ತಲ್ಲ, ನೂರು ಕೋಟಿ ರೂಪಾಯಿ ಎಂದು ತಿದ್ದುಪಡಿ ಮಾಡಿದವರು ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್. ಅಷ್ಟೇ ಅಲ್ಲ, ಅವರು ತಮ್ಮ ಈ ಆರೋಪವನ್ನು ರುಜುವಾತು ಮಾಡಲು ಬಹಳಷ್ಟು ಸಾಕ್ಷ್ಯಗಳೂ ಇರುವುದಾಗಿ ಖಚಿತಪಡಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಅವರ ತಂಡದವರು ಅಧಿಕಾರದ ಸೂತ್ರ ಹಿಡಿದ ಒಂದೂವರೆ ವರ್ಷದ ನಂತರವೂ ವಿರೋಧ ಪಕ್ಷದ ಹ್ಯಾಂಗೋವರ್ನಿಂದ ಹೊರಬಂದಂತೆ ಕಾಣುವುದಿಲ್ಲ. ಜನಪರ ಆಡಳಿತದಲ್ಲಿ ತೊಡಗುವ ಬದಲು ದಿನಕ್ಕೊಂದು ಆರೋಪ ಮಾಡುವುದರಲ್ಲಿ ಕಾಲಕಳೆಯುತ್ತಿದ್ದಾರೆ. ಆರೋಪ, ಸಾಕ್ಷ್ಯ, ಆಡಳಿತ, ತನಿಖಾ ವ್ಯವಸ್ಥೆ ಎಲ್ಲವನ್ನೂ ತಮ್ಮ ಬಳಿಯೇ ಇರಿಸಿಕೊಂಡು ಗಾಳಿಹೇಳಿಕೆಗಳಲ್ಲಿ ನಿರತರಾದರೆ ಹೇಗೆ?

ಏಳು ಕೋಟಿ ಜನಸಂಖ್ಯೆಯುಳ್ಳ ಕರ್ನಾಟಕದಂತಹ ಬೃಹತ್ ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗೆ ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸುವ ಕನಿಷ್ಠ ನ್ಯಾಯಪ್ರಜ್ಞೆ ಇರಬೇಕೆಂದು ನಿರೀಕ್ಷಿಸುವುದು ಸಹಜ. ಶಾಸಕರ ಸಂಖ್ಯೆಯ ಶೇಕಡ 15ರಷ್ಟು ಮಂತ್ರಿಮಂಡಲ ಸದಸ್ಯರ ಜೊತೆಗೆ ಸುಮಾರು 80 ಜನ ಸಚಿವ ದರ್ಜೆಯ ಸಲಹೆಗಾರರ ತಂಡ ಹೊಂದಿರುವ ಮುಖ್ಯಮಂತ್ರಿ, ಒಬ್ಬ ಸಾಮಾನ್ಯ ರಾಜಕಾರಣಿಯಂತೆ ಆರೋಪ, ಪ್ರತ್ಯಾರೋಪಗಳಲ್ಲಿ ಸಮಯ ಹರಣ ಮಾಡಲಾಗದು.

ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಅಕ್ರಮ ಆರೋಪ ಉರುಳಾಗಬಹುದು ಎಂಬ ಸಂದರ್ಭದಲ್ಲಿ ಕೊನೆಗೂ ಎಚ್ಚೆತ್ತುಕೊಂಡ ಅಥವಾ ಹಾಗೆಂದು ನಟಿಸಿದ ಸರ್ಕಾರ, ಬಿಜೆಪಿ ನೇತೃತ್ವದ ಹಿಂದಿನ ಆಡಳಿತದ ಅವ್ಯವಹಾರಗಳನ್ನು ಬಯಲಿಗೆಳೆಯಲು, ತನಿಖೆಗೆ ಒಳಪಡಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ ಹಿಂದಿನ ಸರ್ಕಾರದ ಅವಧಿಯ 22 ಹಗರಣಗಳ ತನಿಖೆಯು ತಾರ್ಕಿಕ ಅಂತ್ಯ ತಲುಪಿ ಭ್ರಷ್ಟರನ್ನು ಶಿಕ್ಷಿಸಲಾಗುತ್ತದೆ ಎಂದು ನಂಬಲು ಜನಸಾಮಾನ್ಯರಿಗೆ ಪೂರ್ವ ನಿದರ್ಶನಗಳೇ ದೊರಕುತ್ತಿಲ್ಲ. ಇಲ್ಲಿ ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎಂಬ ‘ಬಾರಾ ಖೂನ್ ಮಾಫಿ’ ವಾತಾವರಣದಲ್ಲಿ ಭರವಸೆ ಎಲ್ಲಿಂದ ಹುಟ್ಟೀತು?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.