ಮಣಿಪುರದಲ್ಲಿನ ಸಂಘರ್ಷವು ಈಚಿನ ಕೆಲವು ತಿಂಗಳಲ್ಲಿ ಕಂಡಿದ್ದಕ್ಕಿಂತ ಈಗ ತೀವ್ರಗೊಂಡಿದೆ. ಉಗ್ರಗಾಮಿಗಳು ಅಲ್ಲಿ ನಾಗರಿಕ ಪ್ರದೇಶಗಳ ಮೇಲೆ ರಾಕೆಟ್ಚಾಲಿತ ಗ್ರೆನೇಡ್ಗಳನ್ನು (ಆರ್ಪಿಜಿ) ಮತ್ತು ಅತ್ಯಾಧುನಿಕ ಡ್ರೋನ್ಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಶಂಕಿತ ಕುಕಿ ಉಗ್ರರು ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಇರುವ ಮೈತೇಯಿ ಸಮುದಾಯದವರ ಗ್ರಾಮವೊಂದರ ಮೇಲೆ ಭಾನುವಾರ ಬಾಂಬ್ ದಾಳಿ ನಡೆಸಿದ್ದಾರೆ. ಇದು ಕುಕಿ ಸಮುದಾಯದವರು ಬಹುಸಂಖ್ಯೆಯಲ್ಲಿ ಇರುವ ಕಾಂಗ್ಪೋಕ್ಪಿ ಜಿಲ್ಲೆಯ ಗಡಿಗೆ ಸನಿಹದಲ್ಲಿ ಇದೆ. ಈ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ, ಕೆಲವರಿಗೆ ಗಾಯಗಳಾಗಿವೆ. ಜಿಲ್ಲೆಯ ಇನ್ನೊಂದು ಪ್ರದೇಶದಲ್ಲಿ ಇದೇ ರೀತಿಯಲ್ಲಿ ಮಂಗಳವಾರ ಬಾಂಬ್ ದಾಳಿ ನಡೆದಿದೆ. ಅಲ್ಲದೆ, ಗುಂಡಿನ ಚಕಮಕಿ ನಡೆದ ವರದಿಗಳೂ ಇವೆ. ದಾಳಿ ನಡೆಸಲು ಆರ್ಪಿಜಿ ಹಾಗೂ ಡ್ರೋನ್ಗಳನ್ನು ಬಳಸಿರುವುದರ ಪರಿಣಾಮವಾಗಿ, ರಾಜ್ಯದಲ್ಲಿನ ಸಂಘರ್ಷವು ಕದನ ಭೂಮಿಯಲ್ಲಿನ ಸಂಘರ್ಷದಂತೆ
ಗೋಚರಿಸುವಂತಾಗಿದೆ. ನೆರೆಯ ಮ್ಯಾನ್ಮಾರ್ನಲ್ಲಿ ಸೇನಾ ಆಡಳಿತ ಹಾಗೂ ಬಂಡುಕೋರರ ನಡುವೆ ಸಂಘರ್ಷ ನಡೆಯುತ್ತಿದೆ. ಇನ್ನೊಂದು ನೆರೆ ದೇಶ ಬಾಂಗ್ಲಾದಲ್ಲಿಯೂ ಪರಿಸ್ಥಿತಿ ಬಹಳ ಬಿಗುವಿನಿಂದ ಕೂಡಿದೆ. ಮಣಿಪುರದಲ್ಲಿ ನಡೆದಿರುವ ದಾಳಿಗಳ ಹಿಂದೆ ತರಬೇತಿ ಪಡೆದಿರುವ, ತಾಂತ್ರಿಕ ಪರಿಣತಿ ಹೊಂದಿರುವ ವ್ಯಕ್ತಿಗಳ ಪಾತ್ರ ಇರುವುದನ್ನು ಮಣಿಪುರ ಪೊಲೀಸರು ಗುರುತಿಸಿದ್ದಾರೆ. ಯುದ್ಧಭೂಮಿಯಲ್ಲಿ ನಡೆಯುವಂತಹ ಸ್ವರೂಪದ ಸಂಘರ್ಷವು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆ ಕಂಡಿದ್ದೇ ಆದಲ್ಲಿ, ಪರಿಸ್ಥಿತಿಯನ್ನುನಿಯಂತ್ರಿಸುವುದು ಬಹಳ ಕಷ್ಟದ ಕೆಲಸವಾಗಲಿದೆ.

ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಆಗಲಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಕಳೆದ ವಾರವಷ್ಟೇ ಹೇಳಿದ್ದರು. ತಾವು ರಾಜ್ಯದ ಎಲ್ಲ ಸಮುದಾಯಗಳ ನಾಯಕ ಎಂದೂ ರಾಜ್ಯವನ್ನು ಮತ್ತು ರಾಜ್ಯದ ಜನರನ್ನು ರಕ್ಷಿಸುವುದು ತಮ್ಮ ಕರ್ತವ್ಯವೆಂದೂ ಅವರು ಹೇಳಿದ್ದರು. ಆದರೆ ಈಗಿನ ಘಟನೆಗಳು, ಜನರ ಜೀವ ಹಾಗೂ ಆಸ್ತಿಯನ್ನು ರಕ್ಷಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿವೆ. ಕಳೆದ ವರ್ಷದ ಮೇ 3ರಂದು ಹಿಂಸಾಚಾರ ಶುರುವಾದಾಗಿನಿಂದ ನಡೆದಿರುವ ಹಲವು ಘಟನೆಗಳಲ್ಲಿಯೂ ಈ ವೈಫಲ್ಯವು ಎದ್ದುಕಂಡಿದೆ. ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ನಡೆಯುತ್ತಿರುವ ಹಾಗೂ ಅದು ಇತರ ಪ್ರದೇಶಗಳಿಗೂ ವಿಸ್ತರಿಸುವ ಅಪಾಯ ಇರುವ ಕಾರಣಕ್ಕೆ, ಆಡಳಿತಾರೂಢ ಬಿಜೆಪಿಯಲ್ಲಿನ ಒಂದು ವರ್ಗವು ರಾಜ್ಯದಲ್ಲಿನ ಕೇಂದ್ರೀಯ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಹಾಗೂ ಭದ್ರತಾ ಪಡೆಗಳ ನಿಯಂತ್ರಣ ಅಧಿಕಾರವನ್ನು ಮುಖ್ಯಮಂತ್ರಿ ಕಚೇರಿಗೆ ನೀಡಬೇಕು ಎಂಬ ಆಗ್ರಹವನ್ನು ಮಂಡಿಸಿದೆ. ಈ ರೀತಿ ಆದಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಊಹಿಸಿಕೊಳ್ಳಬಹುದು. ಏಕೆಂದರೆ, ಮುಖ್ಯಮಂತ್ರಿಯವರೇ ಆ ರಾಜ್ಯದಲ್ಲಿನ ಸಮಸ್ಯೆಯ ಒಂದು ಭಾಗ ಎಂದು ಪರಿಗಣಿಸಲಾಗಿದೆ.

ಮುಖ್ಯಮಂತ್ರಿಯವರು ನೇಮಕ ಮಾಡಿದ್ದ ದೂತರು ನಡೆಸಿದ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಸಂಘರ್ಷವು ತೀವ್ರಗೊಂಡಿರುವುದನ್ನು ಹಾಗೂ ಹಿಂಸಾಚಾರವು ಉಲ್ಬಣಿಸಿರುವುದನ್ನು ಗಮನಿಸಿದರೆ, ರಾಜ್ಯದಲ್ಲಿ ಪರಿಸ್ಥಿತಿಯು ಶಾಂತವಾಗುತ್ತದೆ, ಸಹಜ ಸ್ಥಿತಿ ಮರಳುತ್ತದೆ ಎಂಬ ಹೇಳಿಕೆಗಳಿಗೆ ಆಧಾರ ಇಲ್ಲ ಎಂದು ಅನ್ನಿಸುತ್ತಿದೆ. ರಾಜ್ಯವು ಕುಕಿ ಸಮುದಾಯದವರು ಹಾಗೂ ಮೈತೇಯಿ ಸಮುದಾಯದವರ ಪ್ರದೇಶಗಳ ನಡುವೆ ಒಡೆದುಹೋಗಿದೆ. ಎರಡೂ ಸಮುದಾಯಗಳ ನಡುವೆ ದ್ವೇಷ ಮೂಡಿದೆ. ನೆಲೆ ಕಳೆದುಕೊಂಡ 60 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ. ಅವರಿಗೆ ಜೀವನವು ಸಹಜವಾಗಿ ಉಳಿದಿಲ್ಲ. ಸರ್ಕಾರದ ಶಸ್ತ್ರಾಗಾರಗಳಿಂದ ಲೂಟಿ ಮಾಡಲಾಗಿರುವ ಐದು ಸಾವಿರ ಶಸ್ತ್ರಾಸ್ತ್ರಗಳು ಸಮುದಾಯಗಳ ನಡುವೆ ಇವೆ. ರಾಜ್ಯದ ಜನರ ಜೀವನವು ಇನ್ನಷ್ಟು ಹೆಚ್ಚು ಸಂಘರ್ಷದ ಪರಿಸ್ಥಿತಿಯತ್ತ ಜಾರುತ್ತಿದೆ. ಹೀಗಿದ್ದರೂ ಮಣಿಪುರವೆಂಬ ರಾಜ್ಯವು ತನಗೆ ಮುಖ್ಯವಲ್ಲ ಎಂಬಂತೆ ಕೇಂದ್ರ ಸರ್ಕಾರವು ನಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.