ಈಗ ಯಾರಾದರೂ ನಿಮಗೆ ದುಃಖ ಯಾಕಾತು ಅಂತ ಕೇಳಿದರೆ, ಅಪ್ಪ ಸತ್ತಿದ್ದಕ್ಕೆ ದುಃಖ ಆತು ಅಂತೀರಿ. ಅವ್ವ ಸತ್ತಿದ್ದಕ್ಕೆ, ಮಗು ಸತ್ತಿದ್ದಕ್ಕೆ, ಅಂಗಡಿಗೆ ಹಾನಿಯಾಗಿದ್ದಕ್ಕೆ ದುಃಖ ಆತು ಅಂತೀರಿ. ಪರೀಕ್ಷೆ ಫೇಲಾಗಿದ್ದಕ್ಕೆ ದುಃಖ ಆತು ಅಂತೀರಿ. ಆದರೆ ವಿಚಾರ ಮಾಡಿ ನೋಡಿ, ಅಪ್ಪ ಸತ್ತಿದ್ದಕ್ಕೇ ದುಃಖ ಆಗತಿತ್ತು ಅಂದರೆ ಊರಾಗ ತುಂಬಾ ಜನರ ಅಪ್ಪಂದಿರು ಸತ್ತಾರ, ಅವಾಗ ನಿಮಗ ದುಃಖ ಆಗಲಿಲ್ಲ, ಮಗ ಸತ್ತಾಗ ದುಃಖ ಆಗುತ್ತಿತ್ತು ಅಂದರ ಊರಾಗ ತುಂಬಾ ಜನರ ಮಕ್ಕಳು ಸತ್ತಾಗ ನೀವು ಅವರ ಮನಿಗೆ ಹೋಗಿ ಸಮಾಧಾನ ಮಾಡಿ ಬಂದೀರಿ, ಅವಾಗ ನಿಮಗ ದುಃಖ ಆಗಲಿಲ್ಲ, ವಾಸ್ತವದಲ್ಲಿ ಅಪ್ಪ ಸತ್ತಾಗ, ಅವ್ವ ಸತ್ತಾಗ ಅಥವಾ ಮಗು ಸತ್ತಾಗ ದುಃಖ ಆಗಿಲ್ಲ. ನಂದು ಅನ್ನೋದು ಸತ್ತಿತಲ್ಲ ಅದಕ್ಕೆ ದುಃಖ ಆಗೈತಿ. ನನ್ನ ತಂದೆ, ನನ್ನ ತಾಯಿ, ನನ್ನ ಮಗು, ನನ್ನ ತಮ್ಮ ಅನ್ನೋರಿಗೆ ಏನಾದರೂ ಆದರೆ ದುಃಖ ಆಗತೈತಿ, ಹೀಗೆ ನನ್ನ ಅನ್ನುವುದಿದ್ದಾಗ ಮಾತ್ರ ದುಃಖ ಆಗೈತಿ. ಈ ನಂದು ಅನ್ನುವುದೇ ಬಂಧನ. ಇದೇ ದುಃಖದ ಬೀಜ. ಅಪ್ಪ ಮತ್ತು ನಾನು ಎನ್ನುವುದರ ನಡುವೆ ನಂದು ಅನ್ನೋದು ಸೇರಿಕೊಂಡೈತಲ್ಲ ಅದು ಬಂಧನ. ಎಲ್ಲಿ ನಂದು ಅನ್ನೋದು ಬರತೈತಿ, ಅಲ್ಲಿ ದುಃಖ ಶುರುವಾಗತೈತಿ.

ಒಬ್ಬ ಶ್ರೀಮಂತ ದೊಡ್ಡ ಮನೆ ಕಟ್ಟಿಸಿದ್ದ. ಒಂದಿನ ಕಾಶಿ ಯಾತ್ರೆಗೆ ತೆರಳಿದ. ಒಂದು ತಿಂಗಳ ನಂತರ ವಾಪಸು ಬಂದಾಗ ಅವ ಕಟ್ಟಿದ ಮನೆಗೆ ಬೆಂಕಿ ಬಿದ್ದಿತ್ತು. ಅದನ್ನು ನೋಡಿ ಹೊಳ್ಳಾಡಿ ಅಳಾಕತ್ತಿದ. ಮಗ ಬಂದು ‘ಯಾಕೆ ಅಳಾಕತ್ತಿ?’ ಎಂದು ಕೇಳಿದ. ‘ಅಲ್ಲೋ ಯಾಕಳಾಕತ್ತಿ ಅಂತಾ ಕೇಳ್ತಿಯಲ್ಲೋ, ಮನೆಗೆ ಬೆಂಕಿ ಬಿದ್ದಿದ್ದು ಕಾಣವಲ್ದೇನು?’ ಎಂದ ಅಪ್ಪ. ಅದಕ್ಕೆ ಮಗ ‘ನೀನು 50 ಲಕ್ಷ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಸಿದ್ದಿ. ಆದರೆ ಅದನ್ನು ಒಬ್ಬರು 80 ಲಕ್ಷ ರೂಪಾಯಿಗೆ ಕೇಳಿದರು. ಅದಕ್ಕೆ ಮಾರಿಬಿಟ್ಟೆ. ಈಗ ಅದು ನಮ್ಮದಲ್ಲ’ ಎಂದ. ಮನೆ ನಮ್ಮದಲ್ಲ ಎಂದು ಕೇಳಿದ ತಕ್ಷಣ ಅಪ್ಪನಿಗೆ ದುಃಖನೇ ಹೋತು. ಅಳೋದು ನಿಲ್ಲಿಸಿದ. ಅಷ್ಟರಲ್ಲೇ ಸಣ್ಣ ಮಗ ಬಂದು ‘ಮನೆ ಮಾರಿದ್ದು ನಿಜ. ಆದರೆ ಇನ್ನೂ ರಿಜಿಸ್ಟರ್ ಆಗಿಲ್ಲ. ಈಗಲೂ ನಮ್ಮ ಹೆಸರಲ್ಲೇ ಐತೆ’ ಎಂದಾಗ
ಅಪ್ಪನಿಗೆ ಮತ್ತೆ ದುಃಖ ಆತು.

ಈಗ, ನೀವು ಇಬ್ಬರು ಜಗಳ ಆಡ್ತೀರಿ. ಪರಸ್ಪರ ತಲೆ ಕೂದಲು ಹಿಡಿದು ಜಗ್ಗಾಡುತ್ತೀರಿ. ಪೊಲೀಸ್ ಕಂಪ್ಲೇಂಟ್ ಕೊಡುತ್ತೀರಿ. ಕೋರ್ಟ್ಗೂ ಹೋಗುತ್ತೀರಿ. ಆದರೆ ನೀವು ಕಟಿಂಗ್ ಶಾಪ್ಗೆ ಹೋಗಿ ಕೂದಲು ಕತ್ತರಿಸುತ್ತೀರಿ. ಆತ ಕತ್ತರಿಸಿದ ಕೂದಲನ್ನು ಬಿಸಾಡತಾನ. ಊರಮಂದಿ ಅದರ ಮ್ಯಾಲ ಅಡ್ಡಾಡತಾರ. ಕೂದಲು ಹಿಡಿದರೆ ಕಂಪ್ಲೇಂಟ್ ಮಾಡತೀರಿ, ಆದರೆ ನಿಮ್ಮದೇ ಕೂದಲಿನ ಮೇಲೆ ಊರ ಮಂದಿ ಅಡ್ಡಾಡಿದರೂ ಸುಮ್ಮನಿರ್ತೀರಿ. ಯಾಕೆ? ಯಾಕೆಂದರ ನಂದು ಅನ್ನೋದು ಅನ್ನೋ ಕಾರಣಕ್ಕೆ.

ನಂದು ಅಂತ ಬಂದರೆ ಮಾತ್ರ ದುಃಖ. ಇಲ್ಲವಾದರೆ ದುಃಖ ಇಲ್ಲ. ಸಕಲ ದುಃಖದ ಬೀಜ ಈ ನಂದೂ ಅನ್ನೋದರೊಳಗ ಐತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.