ರಾಜ್ಯ ಸರ್ಕಾರವು ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಈ ವರ್ಷದಿಂದಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ತಯಾರಿ ಆರಂಭಿಸಿರುವುದು ಅತ್ಯಂತ ಸಂಭ್ರಮದಿಂದ ಸ್ವಾಗತಿಸಬೇಕಾದ ವಿಷಯ. ಜ್ಞಾನಕ್ಕೆ ಭಾಷೆಯೊಂದು ಸಮಸ್ಯೆಯೇ ಅಲ್ಲ.

ಇದಕ್ಕೆ ನಿದರ್ಶನವೆಂಬಂತೆ, ಜಗತ್ತಿನ ದಿಕ್ಕು ಬದಲಿಸಿದ ವೈಜ್ಞಾನಿಕ ಅನ್ವೇಷಣೆಗಳು, ಸಂಶೋಧನೆಗಳು ಆಯಾ ನೆಲದ ಭಾಷೆಯಲ್ಲಿಯೇ ಪ್ರಕಟಗೊಂಡಿವೆ. ಪ್ರಖ್ಯಾತ ವಿಜ್ಞಾನಿಗಳು ಸಂಶೋಧನಾ ಪ್ರಬಂಧಗಳನ್ನು ತಾಯ್ನುಡಿಯಲ್ಲಿಯೇ ಮಂಡಿಸಿದ್ದಾರೆ, ಮುಂದು ವರಿದು ಕೆಲವರು ಅವುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆದರೂ ತಮ್ಮ ಸಂಶೋಧನೆಗೆ ಬಳಸಿದ ಭಾಷೆಯ ಹೆಸರು, ಅಂಕೆ, ಚಿಹ್ನೆಗಳನ್ನೇ ಅನುವಾದದಲ್ಲಿಯೂ ಕಾಣಬಹುದು ಮತ್ತು ಅವೇ ಮೂಲ ಹೆಸರಿನಿಂದ ಕರೆಯಲ್ಪಡುತ್ತವೆ (ಉದಾ: ಆಲ್ಫಾ, ಬೀಟಾ, ಗಾಮಾ...). ಇಷ್ಟರಮಟ್ಟಿಗೆ ಸ್ಥಳೀಯ ಭಾಷೆಗಳು ವಿಜ್ಞಾನವನ್ನು ಆವರಿಸಿವೆ.

ದೇಶದ ಪ್ರಖ್ಯಾತ ವಿಜ್ಞಾನಿಗಳಾದ ಆರ್ಯಭಟ, ಭಾಸ್ಕರ ಅವರಂತಹ ಖಗೋಳಶಾಸ್ತ್ರಜ್ಞರು, ಕಣಾದ ಮಹರ್ಷಿಯಂತಹ ಅಣು ವಿಜ್ಞಾನಿಗಳು, ಸುಶ್ರುತರಂತಹ ವೈದ್ಯಕೀಯ ತಜ್ಞರು ತಾವು ಬಲ್ಲ ಸಂಸ್ಕೃತ ಭಾಷೆಯಲ್ಲಿಯೇ ತಮ್ಮ ಜ್ಞಾನ ಭಂಡಾರವನ್ನು ಬಿಚ್ಚಿಟ್ಟಿದ್ದಾರೆ. ಕಾಲಾಂತರದಲ್ಲಿ ಸಂಶೋಧಕರಿಂದ ಅವು ಇಂಗ್ಲಿಷಿಗೆ ತರ್ಜುಮೆಗೊಂಡು ವಿಶ್ವ ವ್ಯಾಪಿಯಾದವು. ಯಾವುದೇ ಒಂದು ವ್ಯವಸ್ಥೆಯಲ್ಲಿ ಹೊಸತನವನ್ನು ಅಳವಡಿಸಬೇಕಾದರೆ ಅದರ ಲಾಭ– ನಷ್ಟಗಳ ಬಗ್ಗೆ ಮೊದಲು ಚರ್ಚಿಸಬೇಕೆಂದು ತಾಂತ್ರಿಕ ಶಿಕ್ಷಣವೇ ನಮಗೆ ಕಲಿಸಿಕೊಡುತ್ತದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಅಳವಡಿಸುವುದನ್ನೂ ನಾವು ಇದೇ ದೃಷ್ಟಿಕೋನದಿಂದ ನೋಡಬೇಕಿದೆ.

ಮೊದಲು ಈ ಕ್ರಮದಿಂದ ಆಗುವ ಉಪಯೋಗ ಗಳ ಬಗ್ಗೆ ಗಮನಹರಿಸೋಣ: ಕೇವಲ ಇಂಗ್ಲಿಷ್ ಭಾಷೆಯನ್ನೇ ನೆಪಮಾಡಿ ಉನ್ನತ ವಿದ್ಯಾಭ್ಯಾಸ ವನ್ನು ಕೈಚೆಲ್ಲುತ್ತಿದ್ದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇದು ವರವಾಗುತ್ತದೆ. ಕನ್ನಡ ಮಾಧ್ಯಮ ಎಂದಮೇಲೆ ಸಹಜವಾಗಿಯೇ ಸರ್ಕಾರದ ಬೆಂಬಲ ಹೆಚ್ಚಿಗೆ ಸಿಗಬಹುದು. ಇದರಿಂದಾಗಿ ಬೋಧನಾ ಶುಲ್ಕದಲ್ಲಿ ಹೆಚ್ಚಿನ ವಿನಾಯಿತಿ, ಪ್ರತ್ಯೇಕ ವಿದ್ಯಾರ್ಥಿವೇತನದಂತಹ ಸೌಲಭ್ಯಗಳು ಸಿಗಬಹುದು. ಇದರಿಂದ ಬಡವರ್ಗಕ್ಕೂ ತಾಂತ್ರಿಕ ಶಿಕ್ಷಣ ಕೈಗೆಟುಕಬಹುದು. ಬಹುತೇಕ ಸಾಹಿತ್ಯ ವಲಯಕ್ಕಷ್ಟೇ ಸೀಮಿತವಾದ ಕನ್ನಡ ಭಾಷೆಯು ತಾಂತ್ರಿಕ ವಲಯದಲ್ಲೂ ತನ್ನ ಛಾಪು ಮೂಡಿಸುತ್ತದೆ. ತಾಂತ್ರಿಕ ನಿಘಂಟು, ತಾಂತ್ರಿಕ ಪುಸ್ತಕಗಳಲ್ಲಿ ಹೊಸ ಬದಲಾವಣೆಯಾಗಿ ಹೊಸ ಪದಗಳ ಉದಯಕ್ಕೆ ನಾಂದಿಯಾಗುತ್ತದೆ. ಭಾಷೆಯೊಂದೇ ತೊಡಕಾಗಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳ ತಲೆಯಲ್ಲಿಯೇ ಕುಳಿತಿರುವ ಸಂಶೋಧನೆಗಳು, ಅನ್ವೇಷಣೆಗಳು ಕನ್ನಡದ ಮೂಲಕ ವಿಶ್ವವ್ಯಾಪಿಯಾಗಲು ಅನುಕೂಲವಾಗುತ್ತದೆ.

ಇಷ್ಟೆಲ್ಲಾ ಲಾಭಗಳಿದ್ದರೂ ಕನ್ನಡವನ್ನು ತಾಂತ್ರಿಕ ಶಿಕ್ಷಣದಲ್ಲಿ ಅಳವಡಿಸುವಾಗ ಸಹಜವಾಗಿ ಕೆಲವೊಂದಿಷ್ಟು ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಅವುಗಳೆಂದರೆ: ಎಲ್ಲಾ ತಾಂತ್ರಿಕ ಶಬ್ದಗಳನ್ನು ಸಂಪೂರ್ಣವಾಗಿ ಕನ್ನಡೀಕರಿಸುವುದು ಸಾಧ್ಯವೇ?!, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಎಂಜಿನಿಯರಿಂಗ್‌ನಂತಹ ಮುಖ್ಯ ವಿಭಾಗಗಳ ಜೊತೆಗೆ ಹಲವಾರು ಉಪವಿಭಾಗಗಳೂ ಇವೆ. ಆಯಾ ವಿಷಯ ಗಳಲ್ಲಿ ಬಳಸುವ ಎಲ್ಲಾ ತಾಂತ್ರಿಕ ಶಬ್ದಗಳನ್ನು ಕನ್ನಡೀಕರಿಸುವುದು ಕಷ್ಟದ ಕೆಲಸ.

ಎಲ್ಲ ವಿಭಾಗಕ್ಕೂ ಬಳಕೆಯಾಗುವಂತೆ ಒಂದೇ ತಾಂತ್ರಿಕ ನಿಘಂಟನ್ನು ಹುಟ್ಟುಹಾಕುವುದು ಕಷ್ಟ. ಹೊಸ ಆವಿಷ್ಕಾರ, ತಂತ್ರಜ್ಞಾನಕ್ಕೆ ಅನುಗುಣವಾಗಿ ಹೊಸ ಶಬ್ದ ಸಂಪತ್ತು ಬೇಕಾಗುತ್ತದೆ. ಅದಕ್ಕಾಗಿ ತಾಂತ್ರಿಕ ಕ್ಷೇತ್ರ ಮತ್ತು ಕನ್ನಡ ಭಾಷಾ ಕ್ಷೇತ್ರ ಎರಡರಲ್ಲೂ ಮುತ್ಸದ್ದಿತನ ಹೊಂದಿರುವ ತಜ್ಞರು ಅವಶ್ಯಕ. ಇಂತಹ ಮಾನವ ಸಂಪನ್ಮೂಲ ದೊರೆಯುವುದು ವಿರಳ. ಈಗಿನ ಬೋಧಕರು ಸ್ವತಃ ಇಂಗ್ಲಿಷ್ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದವರು. ಕನ್ನಡದಲ್ಲಿ ಬೋಧಿಸಲು ಅವರಿಗೆ ವಿಶೇಷ ತರಬೇತಿಯ ಅವಶ್ಯಕತೆಯಿದೆ.

ಶಾಸ್ತ್ರೀಯವಾಗಿ ಬಳಸುವ ಕನ್ನಡ ಶಬ್ದಗಳು ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪದಗಳಿ ಗಿಂತಲೂ ಕ್ಲಿಷ್ಟವೆನಿಸಬಹುದು. ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆಯುವ ವಿದ್ಯಾರ್ಥಿಗಳಿಗೆ ವಿಷಯ ಜ್ಞಾನವನ್ನು ಪರಿಪೂರ್ಣವಾಗಿ ಕೊಡಬಹುದು. ಆದರೆ ಕನ್ನಡ ಅರಿಯದ ಇತರರಿಗೆ ಅದೇ ವಿಷಯವನ್ನು ವಿವರಿಸಲು ಕಷ್ಟವಾಗಬಹುದು. ಕನ್ನಡ ಮಾಧ್ಯಮ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಷ್ಟೇ ಉದ್ಯೋಗ ಪಡೆಯಲು ಸಾಧ್ಯವಾಗಬಹುದು. ಬಹುರಾಷ್ಟ್ರೀಯ ಕಂಪನಿಯಲ್ಲಿ ಬರೀ ಕನ್ನಡವನ್ನೇ ನಂಬಿ ಬದುಕಲು ಸಾಧ್ಯವಿಲ್ಲ. ಇಂಗ್ಲಿಷ್ ಸಂವಹನ ಕೌಶಲವೂ ಅವಶ್ಯ.

ಈ ರೀತಿಯಾಗಿ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಬಳಕೆಯಿಂದ ಸವಲತ್ತು, ಸವಾಲು ಎರಡೂ ಇವೆ. ಅದೇನೇ ಇದ್ದರೂ ಕನ್ನಡದ ಉಳಿವಿಗಾಗಿ, ಬೆಳವಣಿಗೆಗಾಗಿ ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ನಿರ್ಣಯ ಶ್ಲಾಘನೀಯವಾದದ್ದೇ. ಆದಾಗ್ಯೂ ಅತ್ಯಂತ ಕೂಲಂಕಷವಾಗಿ ಈ ವಿಚಾರದ ಬಗ್ಗೆ ಪರ– ವಿರೋಧದ ಚರ್ಚೆಯಾಗಬೇಕಿದೆ. ವಾಸ್ತವಿಕ ಕಾರ್ಯಕ್ಷೇತ್ರದಲ್ಲಿ ಯಾವ ರೀತಿ ಈ ನಿರ್ಣಯ ಪ್ರಭಾವ ಬೀರಬಹುದೆಂಬುದನ್ನು ಪ್ರಾಯೋಗಿಕ ದೃಷ್ಟಿಯಿಂದ ಯೋಚಿಸಬೇಕಿದೆ.

ಲೇಖಕರು: ಉಪನ್ಯಾಸಕ, ಅಂಜುಮನ್ ಪಾಲಿಟೆಕ್ನಿಕ್ಕಾಲೇಜು, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.