ಮಳೆ ಬೀಳತೊಡಗಿದೆ. ಬಿಸಿಲಬೇಗೆ ತಗ್ಗಿ ವಾತಾವರಣ ತಂಪಾಗಿದೆ. ಸದ್ಯ ಕುಡಿಯುವ ನೀರಿಗೆ ತೊಂದರೆ ಇಲ್ಲ, ಉತ್ತಮ ಬೆಳೆಯೂ ಬರಲಿ ಎಂಬ ಸಂತಸಭಾವದಲ್ಲಿ ಇರುವಾಗಲೇ ರಸ್ತೆಯಲ್ಲಿ ಗುಂಡಿಗಳು ರಾರಾಜಿಸುತ್ತಿವೆ. ರಾಜಧಾನಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಂತೂ ಸಾವಿರಾರು ರಸ್ತೆಗುಂಡಿಗಳಿವೆ. ಇವುಗಳಲ್ಲಿ ಹೆಚ್ಚಿನವು ಮುಖ್ಯರಸ್ತೆಗಳಲ್ಲಿಯೇ ಇವೆ! ರಾಜ್ಯದೆಲ್ಲೆಡೆ ಆಗುವ ರಸ್ತೆ ಅಪಘಾತಗಳಿಗೆ ಚಾಲಕರ ನಿರ್ಲಕ್ಷ್ಯದ ಜತೆಗೆ ರಸ್ತೆಗುಂಡಿಗಳು ಪ್ರಮುಖ ಕಾರಣ.

ಇವುಗಳನ್ನು ಮುಚ್ಚಲು ಸರ್ಕಾರದಿಂದ ವಿಶೇಷ ಕಾರ್ಯಪಡೆ ಘೋಷಣೆ ಆಗಿತ್ತು, ತಿಂಗಳೊಳಗೆ ಎಲ್ಲವನ್ನೂ ಮುಚ್ಚಬೇಕೆಂದು ಗಡುವನ್ನು ಕೂಡ ನೀಡಲಾಗಿತ್ತು. ಅವಧಿ ಮುಗಿದಿದೆ, ಒಂದಷ್ಟು ಕೆಲಸವಾಗಿದೆ, ಗುಂಡಿಗಳು ಇನ್ನೂ ಇವೆ ಮತ್ತು ಹೊಸದಾಗಿ ಕಾಣಿಸಿಕೊಳ್ಳುತ್ತಿವೆ!

ರಸ್ತೆಗುಂಡಿಗಳು ಉಂಟಾಗಲು ಮೂರು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೇಲ್ಮೈನಲ್ಲಿ ಇರುವ ಬಿರುಕುಗಳು, ಒಳಗೆ ಸೇರುವ ನೀರು ಮತ್ತು ಹೆಚ್ಚಿದ ವಾಹನ ಸಂಚಾರ. ಆರಂಭದಲ್ಲಿ ನಯವಾಗಿ ಇದ್ದರೂ ಕ್ರಮೇಣ ಡಾಂಬರು ರಸ್ತೆಯ ಮೇಲ್ಮೈನಲ್ಲಿ ಅಲ್ಲಲ್ಲಿ ಬಿರುಕುಗಳು ಉಂಟಾಗುತ್ತವೆ. ವಾಹನ ಸಂಚಾರ ಹೆಚ್ಚಿದಾಗ ಒತ್ತಡ ಹೆಚ್ಚಿ ಬಿರುಕುಗಳು ಹಿಗ್ಗುತ್ತವೆ. ನೀರು ಇವುಗಳ ಮೂಲಕ ಒಳಸೇರಿ ರಸ್ತೆಯ ಅಡಿಪದರವನ್ನು ತಲುಪುತ್ತದೆ. ನಿಧಾನವಾಗಿ ಪದರಗಳೆಲ್ಲ ದುರ್ಬಲವಾಗಿ ಕಿತ್ತು ಬರುತ್ತವೆ. ಕ್ರಮೇಣ ಇವು ದೊಡ್ಡದಾಗಿ ಗುಂಡಿಗಳಾಗುತ್ತವೆ. ಮಳೆ ಬಂದಾಗ ಇವುಗಳಲ್ಲಿ ನೀರು ತುಂಬುವುದು ಸಹಜ. ಅದರೊಂದಿಗೆ ಒಳಚರಂಡಿ, ರಸ್ತೆಬದಿಯ ಕಾಲುವೆಗಳಲ್ಲಿ ನೀರು ಹರಿಯುವ ಸಮರ್ಪಕ ವ್ಯವಸ್ಥೆ ಇಲ್ಲದಿದ್ದಾಗ ರಸ್ತೆ ಮತ್ತಷ್ಟು ಶಿಥಿಲವಾಗುತ್ತದೆ. ಇದನ್ನು ತಡೆಯಲು ರಸ್ತೆ ನಿರ್ಮಾಣ ಉತ್ತಮವಾದ ಗುಣಮಟ್ಟದ್ದಾಗಿರಬೇಕು. ಓಡಾಡುವ ವಾಹನಗಳ ಒತ್ತಡವನ್ನು ತಡೆಯುವ ಸಾಮರ್ಥ್ಯ ಹೊಂದಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾಲಕಾಲಕ್ಕೆ ತಕ್ಕಂತೆ ರಸ್ತೆಗಳ ನಿರ್ವಹಣಾ ಕಾರ್ಯ ನಡೆಯಬೇಕು.

ರಸ್ತೆಗುಂಡಿಗಳಿಂದ ಆಗುವ ಅಪಾಯಗಳು ಅನೇಕ. ವಾಹನ ಚಲಿಸುವಾಗ ಟಯರ್, ಡಿಸ್ಕ್, ಸಸ್ಪೆನ್ಷನ್ನ ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ವೇಗವಾಗಿ ಬರುತ್ತಿರುವ ವಾಹನಚಾಲಕರು ರಸ್ತೆಗುಂಡಿಗಳನ್ನು ಕಂಡಾಗ ಇದ್ದಕ್ಕಿದ್ದಂತೆ ಬ್ರೇಕ್ ಒತ್ತಿ, ಗುಂಡಿಗಳನ್ನು ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ದಿಢೀರನೆ ನಿಲ್ಲುವುದರಿಂದ ಹಿಂದಿರುವ ಗಾಡಿಗಳು ಗುದ್ದುವ ಸಂಭವ ಇರುತ್ತದೆ. ಅನಿರೀಕ್ಷಿತವಾಗಿ ವಾಹನದ ಸ್ಟಿಯರಿಂಗ್ ಅನ್ನು ಅತ್ತಿತ್ತ ಆಡಿಸುವುದರಿಂದ ನಿಯಂತ್ರಣ ಕಳೆದುಕೊಳ್ಳಬಹುದು. ಇದರಿಂದ ಅಪಘಾತ ಉಂಟಾಗಬಹುದು.

ಹದಗೆಟ್ಟ ರಸ್ತೆ ಕಾರಣಕ್ಕೆ ವಾಹನಗಳ ಅಡ್ಡಾದಿಡ್ಡಿ ಚಾಲನೆಯಿಂದ ಪಾದಚಾರಿಗಳಿಗೂ ಅಪಾಯ ತಪ್ಪಿದ್ದಲ್ಲ. ಮಳೆಗಾಲದಲ್ಲಂತೂ ತಿರುವುಗಳಿರುವ ಕಡೆ ನೀರು ತುಂಬಿದ ರಸ್ತೆಗುಂಡಿಗಳು ಮೃತ್ಯುಕೂಪಗಳೇ ಸರಿ. ಹೀಗಾಗಿಯೇ ಮಳೆಗಾಲದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚು. ಬೆಂಗಳೂರಿನಲ್ಲಿ ಮೂರರಲ್ಲಿ ಒಂದು ರಸ್ತೆ ಅಪಘಾತಕ್ಕೆ ಈ ಗುಂಡಿಗಳು ಕಾರಣ ಎಂದು ಅಧ್ಯಯನದ ವರದಿಗಳು ತಿಳಿಸಿವೆ.

ಈ ಕುರಿತು ಅಧಿಕಾರಿಗಳು ‘ರಸ್ತೆಗಳ ನಿರ್ವಹಣೆಯು ಕಾಲಕಾಲಕ್ಕೆ ಸರಿಯಾಗಿ ನಡೆಯುತ್ತಿದೆ. ವಾಹನಗಳ ದಟ್ಟಣೆ ತೀರಾ ಹೆಚ್ಚಿರುವಾಗ ಸಹಜವಾಗಿಯೇ ರಸ್ತೆ ಸವೆತ ಮತ್ತು ಗುಂಡಿಗಳಾಗುತ್ತವೆ. ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಎರಡೂ ವಿಧಾನಗಳ ಮೂಲಕ ಹಗಲು- ರಾತ್ರಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ನಡೆದಿದೆ. ಮಳೆಗಾಲದಲ್ಲಿ ಡಾಂಬರು ಹಾಕಿ ಗುಂಡಿ ಮುಚ್ಚುವುದು ಕಷ್ಟ. ಹಾಗಾಗಿ ಕೋಲ್ಡ್ ಮಿಕ್ಸ್ ವಿಧಾನ ಬಳಸುತ್ತಿದ್ದೇವೆ. ಇದು ಹೆಚ್ಚು ಬಾಳಿಕೆ ಬರದಿದ್ದರೂ ಮಳೆಗಾಲದಲ್ಲಿ ಉಂಟಾಗುವ ಹಾನಿಯನ್ನು ತಪ್ಪಿಸಲು ಅನುಕೂಲಕರ. ಪ್ರತಿ ವಾರ್ಡ್ನಲ್ಲಿ ಎಂಜಿನಿಯರ್ಗಳು, ಸಂಚಾರ ಪೊಲೀಸರು ರಸ್ತೆಗುಂಡಿಗಳನ್ನು ಪತ್ತೆ ಮಾಡಿ ಮುಚ್ಚುವಲ್ಲಿ ನಿರತರಾಗಿದ್ದಾರೆ. ಹಾಗೆಯೇ ಸಾರ್ವಜನಿಕರು ಕೂಡ ರಸ್ತೆಗುಂಡಿಗಳ ಬಗ್ಗೆ ದೂರನ್ನು ನೀಡಬಹುದು. ಚುನಾವಣಾ ಕಾಲ, ಮೆಟ್ರೊದಂತಹ ಕಾಮಗಾರಿಗಳು ನಡೆಯುತ್ತಿರುವಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ಬಳಸುವುದು ಸ್ವಲ್ಪ ಕಷ್ಟವಾಗಿತ್ತು. ಆದರೂ ಬಹಳಷ್ಟು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಕೋಲ್ಡ್ ಮಿಕ್ಸ್ ಉಪಯೋಗಿಸುವುದೇನೋ ಸರಿ. ಆದರೆ ಹೀಗೆ ಮುಚ್ಚಿದ ಗುಂಡಿಗಳು ವಾರದಲ್ಲೇ ಕಿತ್ತು ಬರುತ್ತಿವೆ’ ಎಂಬ ಆರೋಪಗಳಿವೆ. ಈ ಸಮಸ್ಯೆ ವರ್ಷವಿಡೀ ಇದ್ದದ್ದೇ, ಮಳೆಗಾಲದಲ್ಲಿ ಹೆಚ್ಚಾಗುತ್ತದೆ ಅಷ್ಟೆ. ಈ ರಸ್ತೆಗುಂಡಿಗಳಿಂದ ಪ್ರಾಣಹಾನಿಯಾಗಿ ಗಲಾಟೆಯಾದಾಗ ಒಂದಷ್ಟು ಕಾರ್ಯ ನಡೆಯುತ್ತದೆ. ಇದು ಬರೀ ತೇಪೆ ಹಚ್ಚುವ ಕೆಲಸ. ನಿಜವಾಗಿ ಆಗಬೇಕಾದದ್ದು ಉತ್ತಮ ರಸ್ತೆಗಳ ನಿರ್ಮಾಣ. ಪ್ರತಿವರ್ಷ ಕೋಟ್ಯಂತರ ರೂಪಾಯಿಯನ್ನು ರಸ್ತೆಗಾಗಿ ಮೀಸಲಿಡುತ್ತಾರೆ. ಆದರೂ ನಿರ್ಮಾಣವಾದ ಕೆಲವೇ ತಿಂಗಳಲ್ಲಿ ರಸ್ತೆಯಲ್ಲಿ ಗುಂಡಿಗಳು ಬೀಳುತ್ತವೆ. ಮಣ್ಣಿನ ಮೇಲೆ ಹಾಕುವ ತಳಪದರ ಗಟ್ಟಿಯಾಗಿ ಇರದಿದ್ದರೆ ಮೇಲೆ ಎಷ್ಟೇ ಡಾಂಬರು ಸುರಿದರೂ ಗುಂಡಿಗಳು ಖಚಿತವೇ. ರಸ್ತೆ ನಿರ್ಮಿಸುವಾಗ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಗಮನಿಸುವವರು ಯಾರು? ರಸ್ತೆ ನಿರ್ಮಾಣವಾದ ಬಳಿಕ ಗುಣಮಟ್ಟವನ್ನು ಪರೀಕ್ಷಿಸಿ, ನಂತರವೇ ದುಡ್ಡನ್ನು ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಇಲ್ಲದಿದ್ದರೆ ಈ ಗಡುವು, ರಸ್ತೆಗುಂಡಿ ಮುಚ್ಚುವುದು ಇವೆಲ್ಲವೂ ಪ್ರತಿವರ್ಷದ ಪ್ರಹಸನ ಎಂಬ ಆಕ್ರೋಶದ ಮಾತುಗಳಲ್ಲಿ ಹುರುಳಿಲ್ಲದೇ ಇಲ್ಲ.

ಮಳೆ ಬರುವಾಗ, ಅಪಘಾತವಾದಾಗ ತುರ್ತು ಕ್ರಮ ಕೈಗೊಳ್ಳುವುದು ಸರಿ. ಆದರೆ ನಿತ್ಯದ ಜೀವನ- ವ್ಯವಹಾರಕ್ಕೆ ಸಾಧನವಾದ ರಸ್ತೆಗಳ ಗುಣಮಟ್ಟದ ಬಗ್ಗೆ ಗಂಭೀರ ಚಿಂತನೆ ನಡೆಸಿ ದೂರದೃಷ್ಟಿಯ ನಿರ್ಧಾರ ಕೈಗೊಳ್ಳುವುದು ಅಗತ್ಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.