ಪರಿಸರ ಮತ್ತು ಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದ ಸ್ವತಂತ್ರ ಸಂಸ್ಥೆ ‘ವರ್ಲ್ಡ್ ವೈಲ್ಡ್ಲೈಫ್ ಫಂಡ್’ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಲಿವಿಂಗ್ ಪ್ಲ್ಯಾನೆಟ್ ರಿಪೋರ್ಟ್- 2024’ ಪರಿಸರದ ನಾಶ ಅಪಾಯಕಾರಿ ಹಂತ ಮುಟ್ಟುತ್ತಿರುವುದನ್ನು ಎತ್ತಿ ತೋರಿದೆ (ಪ್ರ.ವಾ., ಅ. 22). ಕಳೆದ ಅರ್ಧ ಶತಮಾನದಲ್ಲಿ ವನ್ಯಜೀವಿಗಳ ಸರಾಸರಿ ಸಂಖ್ಯೆ ಶೇ 73ರಷ್ಟು ಕ್ಷೀಣಿಸಿದ್ದರೆ, ಸಿಹಿನೀರಿನ ಜಲಚರಗಳ ಸಂಖ್ಯೆ ಶೇ 85ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ಶೇ 69ರಷ್ಟು ಭೂಚರಗಳು,
ಶೇ 56ರಷ್ಟು ಸಮುದ್ರಜೀವಿಗಳು ಕಣ್ಮರೆಯಾಗಿರುವ ಮಾಹಿತಿ ಗಾಬರಿ ಮೂಡಿಸುವಂತಿದೆ. ಪರಿಸರದ ಸ್ವಾಸ್ಥ್ಯ ವೇಗವಾಗಿ ಬಿಗಡಾಯಿಸುತ್ತಿರುವ ಸೂಚನೆಯಿದು!

ಆತಂಕದ ಕಾರ್ಮೋಡಗಳ ನಡುವೆಯೂ ಅಲ್ಲಲ್ಲಿ ಸಣ್ಣ ಸಣ್ಣ ಹಣತೆಗಳು ಬೆಳಗುತ್ತಾ ಪರಿಸರ ಸಂರಕ್ಷಣೆಯ ಆಶಾವಾದಕ್ಕೆ ಇಂಬು ನೀಡುತ್ತಿವೆ. ಭವಿಷ್ಯದ ದಿನಗಳಿಗೆ ಭರವಸೆ ತುಂಬುವಂತೆ ದೀಪಾವಳಿಯ ಈ ಹೊತ್ತಿನಲ್ಲಿ ನಾಡಿನ ಪ್ರಮುಖ ಜೀವದಾಯಿನಿಯೊಂದರ ಪಾವಿತ್ರ್ಯ ಕಾಪಾಡುವ ಬೃಹತ್ ಜನಾಂದೋಲನವೊಂದಕ್ಕೆ ದಿನಗಣನೆ ಶುರುವಾಗಿದೆ.

ಹೌದು, ಮಾನವನ ಹೊಲಸುಗಳನ್ನೆಲ್ಲಾ ಹೊತ್ತು ಜೀವಂತಿಕೆಯನ್ನೇ ಕಳೆದುಕೊಂಡು ಬರಡಾಗುತ್ತಿರುವ ತಾಯಿ ತುಂಗಭದ್ರೆಯನ್ನು ಮಾಲಿನ್ಯಮುಕ್ತಗೊಳಿಸುವ ದಿಸೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಸಂಸ್ಥೆ ನೇತೃತ್ವದಲ್ಲಿ ‘ನಿರ್ಮಲ ತುಂಗಭದ್ರಾ ಅಭಿಯಾನ, ಕರ್ನಾಟಕ’ ಇದೇ ನವೆಂಬರ್ ಆರರಿಂದ ಆರಂಭವಾಗುತ್ತಿದೆ. ಜನ ಜಾಗೃತಿ, ಜಲಜಾಗೃತಿ, ಜನಾಗ್ರಹದ ಸಂಕಲ್ಪ ಹೊತ್ತ ಈ ಪಾದಯಾತ್ರೆಯು ತುಂಗೆಯ ಉಗಮಸ್ಥಾನದ ಸಮೀಪದ ಶೃಂಗೇರಿಯಿಂದ ಶುರುವಾಗಿ, ನದಿಯ ಹಾದಿಯಲ್ಲಿ ಸಾಗಿ ಕೊಪ್ಪಳದ ಕಿಷ್ಕಿಂಧೆಯಲ್ಲಿ ಕೊನೆಗೊಳ್ಳಲಿದೆ.

ಪಶ್ಚಿಮಘಟ್ಟದ ದಟ್ಟಾರಣ್ಯದ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಸಂಗಮವಾಗುವುದು ಶಿವಮೊಗ್ಗ ಸಮೀಪದ ಕೂಡಲಿಯಲ್ಲಿ. ತನ್ನ ನಾನೂರು ಕಿ.ಮೀ.ಗೂ
ಮೀರಿದ ಹರಿವಿನಲ್ಲಿ ನಾಡಿನ ಏಳೆಂಟು ಜಿಲ್ಲೆಗಳ ಜನ, ಜಾನುವಾರು, ಜಲಚರ ಸೇರಿದಂತೆ ಅಸಂಖ್ಯ ಜೀವಸಂಕುಲಗಳನ್ನು ಪೊರೆಯುವುದಲ್ಲದೆ ನೆರೆಯ ರಾಜ್ಯಗಳಿಗೂ ನೀರುಣಿಸುವ ಪ್ರಮುಖ ನದಿ ತುಂಗಭದ್ರೆ.

ಅಪರೂಪದ ಔಷಧೀಯ ಗುಣಗಳನ್ನು ಹೊಂದಿ
ರುವ ಪಶ್ಚಿಮಘಟ್ಟದ ಸಸ್ಯಸಂಕುಲಗಳ ನಡುವೆ ಹರಿದು
ಬರುವ ನದಿಯ ನೀರು ಅಮೃತಕ್ಕೆ ಸಮಾನ ಎಂಬ ಮಾತಿತ್ತು. ತುಂಗಾ ಪಾನವೆಂಬುದಂತೂ ಅನುಭವದ ಆಚರಣೆಯಾಗಿತ್ತು. ಆದರೆ ಅಭಿವೃದ್ಧಿ, ಆಧುನೀಕರಣದ ಭರಾಟೆಯ ಜೊತೆಗೆ ಮಾನವನ ದುರಾಸೆಗೆ ಬಲಿ
ಯಾದ ಈ ಪವಿತ್ರ ನದಿ ಕಲುಷಿತಗೊಂಡು ಕುಡಿಯಲೂ ಯೋಗ್ಯವಲ್ಲದ ದುಃಸ್ಥಿತಿಗೆ ತಲುಪುತ್ತಿರುವುದು ಭೀಕರ ಭವಿಷ್ಯದ ಮುನ್ಸೂಚನೆಯೇ ಸರಿ.

ಮಾನವನ ಅನಾಚಾರದಿಂದ ಜೀವಜಲ ಮೂಲಗಳು ಹೊಲಸಾಗಿವೆ. ಪಟ್ಟಣಗಳು, ನಗರ ಗಳ ತ್ಯಾಜ್ಯ ನೀರು ನದಿ ಸೇರುತ್ತಿದೆ. ಕೈಗಾರಿಕೆಗಳ ಕೊಳಚೆಯನ್ನೂ ಹರಿಯುವ ನೀರಿಗೆ ಬಿಡಲಾಗುತ್ತಿದೆ. ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಗಳ ಅತಿಬಳಕೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯು ವುದು, ಅರಣ್ಯನಾಶ, ಗಣಿಗಾರಿಕೆ, ಅಕ್ರಮವಾಗಿ ಮರಳೆತ್ತುವಂತಹ ಕಾರಣಗಳಿಂದ ಜಲಮೂಲಗಳು ಮಲಿನವಾಗಿವೆ. ನೀರು ಕಲುಷಿತವಾಗುತ್ತಿರುವುದರ ಪರಿಣಾಮ ನೇರವಾಗಿ ಪರಿಸರದ ಮೇಲಾಗುತ್ತಿದೆ. ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಬೆಳೆಗಳು ವಿಷಯುಕ್ತವಾಗುತ್ತಿವೆ. ಶುದ್ಧ ಕುಡಿಯುವ ನೀರು ಸಿಗದೆ ಪ್ರಾಣಿ, ಪಕ್ಷಿ, ಜಲಚರಗಳ ಸ್ವಾಸ್ಥ್ಯ ಕೆಡುತ್ತಿದೆ. ಮಾನವನ ದೇಹವೂ ಕಾಯಿಲೆಗಳ ಗೂಡಾಗುತ್ತಿದೆ. ನಮ್ಮ ಪರಿಸರ ಮತ್ತಷ್ಟು ನಾಶವಾಗುವುದನ್ನು ತಪ್ಪಿಸಲು ಜನಜಾಗೃತಿಯೇ ಪ್ರಬಲ ಮದ್ದು. ಸಾರ್ವಜನಿಕರಲ್ಲಿ ಅರಿವು ತುಂಬುತ್ತಾ, ಆಡಳಿತದಿಂದ ಆಗಬೇಕಿರುವ ಕಾರ್ಯಗಳ ಬಗ್ಗೆ ಗಟ್ಟಿ ದನಿಯಲ್ಲಿ ಆಗ್ರಹಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ.

ರಾಜ್ಯದಲ್ಲಿ ಈ ಹಿಂದೆ ನಡೆದ ಪರಿಸರ ಚಳವಳಿ
ಗಳು ಜನರಲ್ಲಿ ಎಚ್ಚರದ ಜೊತೆಗೆ ಬದಲಾವಣೆಗೂ ಕಾರಣವಾಗಿವೆ. ಎಂಬತ್ತರ ದಶಕದ ‘ಪಶ್ಚಿಮಘಟ್ಟ ಉಳಿಸಿ’ ಆಂದೋಲನ, ನಂತರದಲ್ಲಿ ಕುದುರೆಮುಖ ಗಣಿಗಾರಿಕೆಯ ವಿರುದ್ಧ ನಡೆದ ‘ತುಂಗಾಮೂಲ ಉಳಿಸಿ’ ಚಳವಳಿಯು ಪಶ್ಚಿಮಘಟ್ಟದ ಒಡಲನ್ನು ಬಗೆ
ಯುವ ಕಾರ್ಯಕ್ಕೆ ತಡೆಯೊಡ್ಡಿದ ನಿದರ್ಶನಗಳು ನಮ್ಮ
ಎದುರಿಗಿವೆ. ಉತ್ತರ ಭಾರತದಲ್ಲೂ ಗಂಗಾನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ದೊಡ್ಡ ಅಭಿಯಾನ ನಡೆದಿದ್ದರ ಫಲವಾಗಿ ನದಿ ಶುದ್ಧೀಕರಣದ ‘ನಮಾಮಿ ಗಂಗೆ’ ಬೃಹತ್ ಯೋಜನೆ ಜಾರಿಯಾಗಿದೆ.

ನಗರ, ಪಟ್ಟಣ, ಗ್ರಾಮಗಳ ತ್ಯಾಜ್ಯ ನೀರು, ಕೈಗಾರಿಕೆಗಳ ಕೊಳಚೆ ನೇರವಾಗಿ ನದಿ ಸೇರದಂತೆ ಶುದ್ಧೀಕರಣ ಘಟಕಗಳ ಸ್ಥಾಪನೆ, ಶೌಚಾಲಯ ವ್ಯವಸ್ಥೆ, ಧಾರ್ಮಿಕ ಆಚರಣೆಗಳ ಹೆಸರಲ್ಲಿ ನದಿಗಳನ್ನು ಹೊಲಸು ಮಾಡದಂತೆ ಅರಿವು ಮೂಡಿಸುವುದು, ಸುರಕ್ಷಿತ ಬೆಳೆ ಪದ್ಧತಿಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು, ಕಸದ ಸಮರ್ಪಕ ವಿಲೇವಾರಿ, ಮರಳು ಗಣಿಗಾರಿಕೆಗೆ ಕಡಿವಾಣದಂತಹ ಕ್ರಮಗಳಿಂದ ನಮ್ಮ ಜಲಮೂಲಗಳಿಗೆ ಪುನರ್ಜೀವ ನೀಡಲು ಸಾಧ್ಯ.

ಜಲಮೂಲಗಳನ್ನು ಸಂರಕ್ಷಿಸುವ ಚಳವಳಿಗಳು ಎಲ್ಲೆಡೆ ನಡೆಯಬೇಕಿದೆ. ಜನ ಎಚ್ಚರಗೊಂಡು ಕೂಗಿದಾಗಲಷ್ಟೇ ಸರ್ಕಾರವೂ ಎದ್ದೇಳುವುದು. ಕೂಸು ಅತ್ತರಷ್ಟೇ ತಾಯಿ ಹಾಲುಣಿಸುವುದು. ಜನಾಂದೋಲನವು ಪ್ರಬಲವಾಗಿ ರೂಪುಗೊಂಡಾಗ ಮಾತ್ರ ಪರಿವರ್ತನೆ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.