ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದು ಪೋಷಕರಲ್ಲಿ ತಲ್ಲಣ ಸೃಷ್ಟಿಸಿದೆ. ಆಗಿದ್ದಿಷ್ಟು. ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿ ವಿದ್ಯಾ ಭ್ಯಾಸದ ಕಡೆ ಗಮನ ಕೊಡುವಂತೆ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೇ ಆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ಸೂಕ್ಷ್ಮ ಮನೋ
ಭಾವದವನಾಗಿದ್ದಿರಬಹುದು, ಅದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಈ ವಿಷಯವನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ.

21ನೇ ಶತಮಾನದ ಕೌಶಲಗಳಾದ ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಭಾಗಿತ್ವ, ಸಮಸ್ಯಾ ಪರಿ ಹಾರ ಕೌಶಲ, ತಾಂತ್ರಿಕ ಸಾಕ್ಷರತೆಯಂತಹವನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವೆಲ್ಲಾ ಶಾಲೆ, ಕುಟುಂಬ
ಗಳಲ್ಲಿ ಆಸಕ್ತಿ ತೋರಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳು
ತ್ತಿದ್ದೇವೆ. ಇವೆಲ್ಲವುಗಳ ಜೊತೆ ಮೊಬೈಲ್ ಫೋನ್ ಬಳಕೆಯನ್ನು ಅಗತ್ಯಕ್ಕೆ ಅನುಸಾರವಾಗಿ ಬಳಸುವಂತಹ ಜಾಣ್ಮೆ, ಮನೋನಿಗ್ರಹದ ಕೌಶಲಗಳನ್ನು ಕಲಿಸುವತ್ತಲೂ ನಾವು ಮುಂದಡಿ ಇಡಬೇಕಿದೆ.

ಚಿಕ್ಕಪುಟ್ಟ ಸಂಗತಿಗಳಿಗೆ ಮುನಿಸು, ಬೇಸರ ಮಾಡಿ
ಕೊಳ್ಳದೆ ಸೋಲು, ನಿರಾಸೆಯನ್ನು ತಾಳಿಕೊಂಡು ಪುಟಿದೇಳುವ ಗಟ್ಟಿ ಮನಸ್ಸನ್ನು ಮೈಗೂಡಿಸಿಕೊಳ್ಳುವತ್ತ ಸ್ಪಷ್ಟ, ನಿರ್ದಿಷ್ಟ ಕ್ರಮಗಳನ್ನು ಶಾಲೆ ಹಾಗೂ ಕುಟುಂಬ ಗಳು ತೆಗೆದುಕೊಳ್ಳಲು ಇದು ಸಕಾಲ.

ಮೊಬೈಲ್ ಫೋನ್ನ ಅತಿ ಬಳಕೆಯು ಮಕ್ಕಳು ಮತ್ತು ಹದಿಹರೆಯದವರಲ್ಲಿ ಗಂಭೀರವಾದ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಮೆದುಳಿನ ಬೆಳವಣಿಗೆ 25 ವರ್ಷಗಳವರೆಗೆ ಆಗುತ್ತದೆ. ಮೊಬೈಲ್ನ ಅತಿ ಬಳಕೆಯು ಮೆದುಳಿನ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ. ರಾತ್ರಿಯ ವೇಳೆಯಲ್ಲಿ ನಿದ್ರೆಗೆ ಅವಶ್ಯವಾದ ಮೆಲಟೋನಿನ್ ಎಂಬ ಹಾರ್ಮೋನಿನ ಬಿಡುಗಡೆಗೆ ಮೊಬೈಲ್ ಬಳಕೆಯು ಅಡ್ಡಿಯಾಗುವುದರಿಂದ ನಿದ್ರೆಯ ಕೊರತೆ ಉಂಟಾಗುತ್ತದೆ. ನಿದ್ರೆಯ ಅಭಾವದಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಶಾಲೆ, ಕಾಲೇಜಿನಲ್ಲಿ ಏಕಾಗ್ರತೆಯ ಕೊರತೆಯಿಂದ ವಿಷಯಗಳ ಕಲಿಕೆಗೆ ಅಡ್ಡಿಯಾಗುತ್ತದೆ. ಇದು ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ
ವನ್ನು ಉಂಟುಮಾಡುತ್ತದೆ. ದೃಷ್ಟಿದೋಷ, ಕತ್ತು, ಬೆನ್ನು ನೋವಿನಂತಹ ಸಮಸ್ಯೆಗಳು ತಲೆದೋರುತ್ತವೆ.

ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ನಂತಹ ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಾದಂತೆ, ಅನಪೇಕ್ಷಿತ ವ್ಯಕ್ತಿಗಳ ಸಂಪರ್ಕ ಬೆಳೆಸಿಕೊಳ್ಳುವ ಅಪಾಯ ಇರುತ್ತದೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಕೆಲವು ಹದಿಹರೆಯದವರು ಮತ್ತು ಮಕ್ಕಳು ಲೈಂಗಿಕ ಸಂಪರ್ಕ ಹೊಂದಿ, ಅಪಾಯಕಾರಿ ಸ್ಥಿತಿಯನ್ನು ಎದುರಿಸುತ್ತಾರೆ. ಮೊಬೈಲ್ನಲ್ಲಿನ ಗೇಮ್ಗಳಿಗೆ ದಾಸರಾಗಿ ಯಾವಾಗಲೂ ಮೊಬೈಲ್ ಫೋನ್ ಬಿಟ್ಟಿರಲಾರದಂತೆ ಆಗುತ್ತಾರೆ.

ಪೋಷಕರು ಮೊಬೈಲ್ ಫೋನ್ ಬಳಕೆ ನಿಯಂತ್ರಿಸಲು ಪ್ರಯತ್ನಿಸಿದರೆ ಕೆಲವು ಮಕ್ಕಳು ತಮಗೆ ಅಪಾಯ ತಂದುಕೊಳ್ಳಲು ಮುಂದಾಗಬಹುದು. ಇನ್ನು ಕೆಲವರು ದೊಡ್ಡವರ ಮೇಲೆ ಆಕ್ರಮಣ ಮಾಡುವ
ಪ್ರವೃತ್ತಿ ತೋರುತ್ತಾರೆ. ಇಂತಹ ಸನ್ನಿವೇಶದಲ್ಲಿ ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆ ಹಾಗೂ ವರ್ತನೆಗಳ ಮೇಲೆ ಗಮನವಿಡಬೇಕು. ಮೊಬೈಲ್ ಫೋನನ್ನು ಯಾವಾಗಲೂ ತಮ್ಮ ಬಳಿ ಹೊಂದಿರುವುದು, ಮೊಬೈಲ್ ಕೈಯಲ್ಲಿ ಇಲ್ಲದಿದ್ದಾಗ ತೀವ್ರ ಚಡಪಡಿಕೆ, ಆತಂಕದ ಲಕ್ಷಣಗಳನ್ನು ತೋರುವುದು, ಕಿರುಪರೀಕ್ಷೆ, ಪರೀಕ್ಷೆಗಳಲ್ಲಿ ಕಳಪೆ ಸಾಧನೆ ಮಾಡುವುದು, ಸ್ನೇಹಿತರು, ಕುಟುಂಬದವರೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಹಿಂಜರಿಯುವುದು ಹಾಗೂ ಅವರೊಂದಿಗೆ ಒಡನಾಡುವುದನ್ನು ತಪ್ಪಿಸಿ
ಕೊಳ್ಳುವುದು, ತಡರಾತ್ರಿಯವರೆಗೆ ಎದ್ದಿದ್ದು, ಬೆಳಿಗ್ಗೆ ನಿಧಾನವಾಗಿ ಏಳುವಂತಹ ಲಕ್ಷಣಗಳು ಕಂಡು
ಬಂದಾಗ ಪೋಷಕರು ಎಚ್ಚರ ವಹಿಸಬೇಕು.

ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಭರದಲ್ಲಿ ಪೋಷಕರು ಮಕ್ಕಳನ್ನು ಅವಮಾನಿಸುವುದು, ಹೊಡೆ
ಯಲು ಹೋಗುವುದು ಒಳ್ಳೆಯದಲ್ಲ. ಪ್ರೀತಿ, ಆತ್ಮೀಯತೆ
ಯಿಂದ ಮಕ್ಕಳೊಂದಿಗೆ ಸಂಪರ್ಕ ಸಾಧಿಸಿ, ಪರ ಸ್ಪರ ಚರ್ಚೆಯ ಮೂಲಕ ಹಂತಹಂತವಾಗಿ ಜೊತೆಗೂಡಿ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಈ ಕ್ರಮ ನಿಧಾನವಾದರೂ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡದು. ಕೆಲವು ಮಕ್ಕಳು ಅತಿ ಸೂಕ್ಷ್ಮ ಮನಃಸ್ಥಿತಿಯುಳ್ಳವರಾಗಿರುತ್ತಾರೆ. ಅವರ ಮನಸ್ಸಿಗೆ ಗಾಸಿಯಾಗುವಂತೆ ಮಾಡಿದರೆ ಅವರು ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿಕೊಳ್ಳಬಹುದು ಅಥವಾ ಖಿನ್ನತೆಗೆ ಜಾರಬಹುದು. ಮೊಬೈಲ್ ಹೊರ
ತಾದ ಮಾನವ ಒಡನಾಟ, ಪ್ರಕೃತಿಯ ಸಂಪರ್ಕದ ಅವ
ಕಾಶಗಳನ್ನು ಮಕ್ಕಳು ಹೊಂದಲು ಪ್ರೇರೇಪಿಸಬೇಕು.

ಮೊಬೈಲ್ ಫೋನಿನ ಅತಿಬಳಕೆಯನ್ನು ಅಪಾಯಕಾರಿ ಎಂದು ಪರಿಗಣಿಸಿ, ಎಳೆಯರನ್ನು ರಕ್ಷಿಸುವ ಅಗತ್ಯ ಇದೆ. ಮೊಬೈಲ್ ಬಳಕೆಯ ವಿಷಯದಲ್ಲಿ ಪೋಷಕರೇ ಮಕ್ಕಳಿಗೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಮನೆಯವರೆಲ್ಲರೂ ಸೇರಿ ಚರ್ಚಿಸಿ, ದಿನದ ಒಂದಷ್ಟು ಸಮಯವನ್ನು ‘ಮೊಬೈಲ್ ಬಳಸದೇ ಇರುವ ಅವಧಿ’ ಎಂದು ಘೋಷಿಸಿ, ಎಲ್ಲರೂ ಬದ್ಧರಾಗುವಂತೆ ನಡೆದುಕೊಳ್ಳುವುದು ಪರಿಣಾಮಕಾರಿಯಾಗಬಲ್ಲದು.

ಇದರ ಜೊತೆಗೆ ಮೊಬೈಲ್ನ ಸಮರ್ಪಕ ಬಳಕೆಯ ಕಡೆ ಎಲ್ಲರೂ ಗಮನಹರಿಸುವ ಅಗತ್ಯ ಇದೆ. ಮೊಬೈಲ್ನ ಅತಿಬಳಕೆಯು ಸಹಜ ಬದುಕಿನ ಇತರ ರಸಮಯ ಕ್ಷಣಗಳನ್ನು ನಮ್ಮಿಂದ ಕಿತ್ತುಕೊಳ್ಳಬಲ್ಲದು ಎಂಬ ಅರಿವನ್ನು ಹೊಂದಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.