ಒಣಭೂಮಿ ಅಭಿವೃದ್ಧಿ ವಿದೇಶಿ ನೆರವಿಗೆ ಯತ್ನ

ಬೆಂಗಳೂರು, ನ. 19– ರಾಜ್ಯದಲ್ಲಿ ಒಣಭೂಮಿ ಅಭಿವೃದ್ಧಿಗಾಗಿ ವಿದೇಶಿ ನೆರವು ಪಡೆಯಲು ಪೂರಕವಾಗುವ ನೀತಿಯನ್ನು ಸದ್ಯದಲ್ಲೇ ರೂಪಿಸುವುದಾಗಿ ಕೃಷಿ ಸಚಿವ ಟಿ.ಬಿ.ಜಯಚಂದ್ರ ಇಂದು ಇಲ್ಲಿ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ರಾಜ್ಯ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಹಾಗೂ ಎಂಜಿನಿಯರುಗಳ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ‘ಹನಿ ನೀರಾವರಿಯ ಸಮಸ್ಯೆಗಳು ಮತ್ತು ಉದ್ದೇಶಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾಗದ ಸುಮಾರು 32 ತಾಲ್ಲೂಕುಗಳಲ್ಲಿ ಅಂತರ್ಜಲ ಕಡಿಮೆಯಾಗಿರುವ ಕಾರಣ, ಈ ಭಾಗಗಳಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಕಷ್ಟವಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಒಣಭೂಮಿ ಅಭಿವೃದ್ಧಿಗೆ ವಿದೇಶದಿಂದ ಹಣ ತರುವ ಸಂಬಂಧ ಈ ನಿರ್ಧಾರ ತೆಗೆದುಕೊಂಡಿರು
ವುದಾಗಿ ಹೇಳಿದರು.

ನಗರ ಸಾರಿಗೆಗೆ ಖಾಸಗಿ
ಬಸ್– ಯಶಸ್ವಿಯತ್ತ

ಬೆಂಗಳೂರು, ನ. 19– ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ನಗರ ಹಾಗೂ ಉಪನಗರಗಳಲ್ಲಿನ ಪ್ರಯಾಣಿಕರ ಒತ್ತಡವನ್ನು ನೀಗಿಸುವ ಉದ್ದೇಶದಿಂದ, ಖಾಸಗಿ ಬಸ್ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹೊಸ ಯೋಜನೆ ಯಶಸ್ಸಿನ ಹಾದಿಯಲ್ಲಿದೆ.

ಕೇವಲ ಐದು ಖಾಸಗಿ ಬಸ್ಗಳನ್ನು ಬಿಎಂಟಿಸಿ ಸರಹದ್ದಿನ ರಸ್ತೆಗಳಲ್ಲಿ ಸಂಚಾರಕ್ಕೆ ಬಿಡುವುದರ ಮೂಲಕ 1997ರ ಡಿಸೆಂಬರ್ 31ರಿಂದ ಪ್ರಾಯೋಗಿಕವಾಗಿ ಆರಂಭವಾದ ಈ ಯೋಜನೆಯಿಂದ ಬಿಎಂಟಿಸಿಗೆ ಪ್ರತಿ ಕಿಲೊಮೀಟರ್ಗೆ ಒಂದು ರೂಪಾಯಿಯಂತೆ ಇಲ್ಲಿಯವರೆಗೆ ಸುಮಾರು ಒಂದು ಕೋಟಿ ರೂಪಾಯಿ ಲಾಭ ಬಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.