ಜಾಫ್ನಾ ಸನಿಹ ಸೇನೆ:ಭಾರೀ ಕದನಕ್ಕೆ ಸಜ್ಜು
ಕೊಲಂಬೊ, ಜುಲೈ 13 (ಪಿಟಿಐ):ಎಲ್ಟಿಟಿಇ ವಿರುದ್ಧ ಸೇನಾ ಕಾರ್ಯಾಚರಣೆಯ ಐದನೆಯ ದಿನವಾದ ಇಂದು ಇಬ್ಬರು ಯುವತಿಯರೂ ಸೇರಿದಂತೆ 9 ತಮಿಳು ಉಗ್ರಗಾಮಿಗಳು ಶರಣಾಗಿದ್ದಾರೆ.

ಶ್ರೀಲಂಕಾ ಸೇನೆ ಜಾಫ್ನಾ ಪ್ರವೇಶಿಸುವುದನ್ನು ತಡೆಗಟ್ಟಲು ಉಗ್ರಗಾಮಿಗಳು ತಮ್ಮ ಪಡೆಗಳನ್ನು ಜಾಫ್ನಾ ಕಡೆಗೆ ಸಾಗಿಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಭಾರೀ ಕದನಕ್ಕೆ ಉಭಯ ಬಣಗಳು ಸಜ್ಜಾಗಿವೆ.

ಉಗ್ರಗಾಮಿಗಳು ಸೇನಾ ವಾಹನವೊಂದನ್ನು ನೆಲಬಾಂಬ್ ಬಳಸಿ ಸ್ಫೋಟಿಸಿದ್ದಾರೆ. ಸೇನಾ ಅಧಿಕಾರಿ ಸೇರಿ ಆರು ಮಂದಿ ಯೋಧರು ಬಲಿಯಾದರು.

ವೃತ್ತಿ ಶಿಕ್ಷಣ: ಪ್ರವೇಶ ಪ್ರಕ್ರಿಯೆ ಆಗಸ್ಟ್ನಲ್ಲಿ ಮುಕ್ತಾಯ
ನವದೆಹಲಿ, ಜುಲೈ 13– ವೃತ್ತಿ ಶಿಕ್ಷಣ ಕುರಿತಂತೆ ರಾಜ್ಯದ ವಿದ್ಯಾರ್ಥಿಗಳ ಹಿತಾಸಕ್ತಿ, ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಎತ್ತಿರುವ ಸಮಸ್ಯೆಗಳ ಇತ್ಯರ್ಥವೂ ಸೇರಿದಂತೆ ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್ ಒಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಸಲಹೆಗಳಿಗೆ ಒಪ್ಪಿಗೆ ಕೋರುವ ಮನವಿಯನ್ನು ಕರ್ನಾಟಕ ಸರ್ಕಾರ ಈ ತಿಂಗಳ 25ರೊಳಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.