ಮದ್ಯ ಮಾರಾಟ ನಿಷೇಧ ಪ್ರಕ್ರಿಯೆಯು ವಿಶ್ವದ ಯಾವುದೇ ಭಾಗದಲ್ಲೂ ಯಶಸ್ವಿಯಾಗಿಲ್ಲ. ಮಾನವನ ಇತಿಹಾಸ, ಸಮಾಜ ವಿಜ್ಞಾನ ಇತ್ಯಾದಿಗಳ ಬಗೆಗಿನ ಅಧ್ಯಯನವೂ ಇದನ್ನೇ ಪ್ರತಿಪಾದಿಸುತ್ತದೆ. ಹೀಗಾಗಿ, ಮದ್ಯಪಾನವೆಂಬ ವ್ಯಸನವನ್ನು ಕೇವಲ ನಿಯಂತ್ರಿಸಬಹುದು ಅಷ್ಟೆ.

ಪ್ರಜಾಪ‍್ರಭುತ್ವ ರಾಷ್ಟ್ರಗಳಲ್ಲಿ ನಾವು ಈ ವ್ಯಸನವನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಶಾಲಾ ಕಾಲೇಜು ಪಠ್ಯಗಳ ಹಂತದಿಂದಲೇ ಪ್ರಯತ್ನ ನಡೆಸಬೇಕು.ಸಂಪೂರ್ಣ ಪಾನ ನಿಷೇಧದಂತಹ ಅತಿರೇಕದ, ಅಗ್ಗದ ಜನಪ್ರಿಯತೆಯ ಕ್ರಮದಿಂದ ಅನಾರೋಗ್ಯಕರ ಪೇಯಗಳು, ಕಳ್ಳಬಟ್ಟಿ ದಂಧೆ, ಸಾಮಾಜಿಕ ಹಾಗೂ ಆರ್ಥಿಕ ಏರುಪೇರು, ನೂತನ ಮೇಲು, ಕೀಳು ವರ್ಗ ನಿರ್ಮಾಣ, ತನ್ಮೂಲಕ ಭ್ರಷ್ಟಾಚಾರ ಹೆಚ್ಚಳದಂತಹ ಅನಪೇಕ್ಷಿತ ಪೆಡಂಭೂತಗಳು ಸೃಷ್ಟಿಯಾಗುತ್ತವೆ. ಹೀಗಾಗಿ, ಮದ್ಯವು ಹಲವರಿಗೆ ಹೃದ್ಯ ಆಗುವುದೇಕೆ ಎಂಬ ಬಗ್ಗೆ ಮೊದಲು ಸೂಕ್ತ ಅಧ್ಯಯನ ನಡೆಸಿ, ಅದಕ್ಕೆ ಕಾರಣವಾಗುವ ಅಂಶಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಕಾಗಿದೆ.

–ಎಸ್.ಕೆ.ಕುಮಾರ್, ಕಲಬುರ್ಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.