ಸ್ವಿಸ್ ಬ್ಯಾಂಕಿನಲ್ಲಿ ಭಾರತ ಮೂಲದವರು ಹೊಂದಿದ್ದ ಹತ್ತಕ್ಕೂ ಹೆಚ್ಚು ಸುಪ್ತ ಖಾತೆಗಳಲ್ಲಿನ ಹಣಕ್ಕೆ ವಾರಸುದಾರರೇ ಇಲ್ಲವಾಗಿ, ಆ ಎಲ್ಲ ಹಣವೂ ಅಲ್ಲಿನ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ (ಪ್ರ.ವಾ., ನ. 11). ಇದನ್ನು ಓದಿದ ಕೂಡಲೇ, ರಾಜ್‌ಕುಮಾರ್ ಅಭಿನಯದ ‘ಪರೋಪಕಾರಿ’ ಚಿತ್ರದ ಹಾಡಿನಲ್ಲಿ ಬರುವ ‘ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ...’ ಎಂಬುದು ನೆನಪಾಯಿತು. ಈ ಮಾತುಗಳು ಎಷ್ಟು ಸತ್ಯ ಎಂಬುದು ಈ ಸಂದರ್ಭದಲ್ಲಿ ಮನದಟ್ಟಾಗುತ್ತದೆ.

ಇದು ಬರೀ ಸ್ವಿಸ್ ಬ್ಯಾಂಕ್ ಖಾತೆಗಳಿಗಷ್ಟೇ ಅಲ್ಲದೆ, ಭಾರತದ ಬೇನಾಮಿ ಆಸ್ತಿಗಳು, ಧನಕನಕಾದಿಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ, ಸಂಪಾದಿಸಿದ ಹಣವನ್ನು ಸ್ವಯಂ ಘೋಷಿಸಿಕೊಂಡು, ತೆರಿಗೆ ಕಟ್ಟಿ ನೆಮ್ಮದಿಯ ನಿದ್ರೆಯನ್ನು ಪಡೆಯಬಹುದಾಗಿದೆ. ಅದನ್ನು ಬಿಟ್ಟು ಮುಚ್ಚಿಟ್ಟರೆ ಪರರ ಪಾಲಾಗುವುದರಲ್ಲಿ ಸಂದೇಹವಿಲ್ಲ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.