ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ಗಳನ್ನು ಸಮರ್ಥಿಸುತ್ತಾ ಸಂಬಂಧಿಸಿದ ಸಚಿವರು, ಈ ಕಾಯ್ದೆ ಪ್ರಕಾರ ‘ಯಾರು ಬೇಕಾದರೂ ಎಷ್ಟು ಬೇಕಾದರೂ ಎಲ್ಲಿ ಬೇಕಾದರೂ ಯಾರಿಂದ ಬೇಕಾದರೂ ಭೂಮಿಯನ್ನು ಕೊಂಡುಕೊಳ್ಳಬಹುದು’ ಎಂದೂ ‘ಯಾರು ಬೇಕಾದರೂ ಯಾರಿಂದ ಬೇಕಾದರೂ ಯಾವಾಗ ಬೇಕಾದರೂ ಎಷ್ಟು ಬೆಲೆಗೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿಸ ಬಹುದು’ ಎಂದೂ ಹೇಳಿದ್ದಾರೆ.

ಇಲ್ಲಿ ಪ್ರಶ್ನೆ: ಇದು ಯಾವ ಪರಿಭಾಷೆ? ಇದು ಜನತಂತ್ರ ಪರಿಭಾಷೆಯಲ್ಲ. ಈ ಕಾಯ್ದೆಗಳು ನಮ್ಮ ರೈತಾಪಿ ವರ್ಗವನ್ನು, ವಿಶೇಷವಾಗಿ ಒಟ್ಟು ಭೂಹಿಡುವಳಿಗಳಲ್ಲಿ ಶೇ 85ರಷ್ಟಿರುವ ಅತಿಸಣ್ಣ ಮತ್ತು ಸಣ್ಣ ಭೂಹಿಡುವಳಿದಾರ ರನ್ನು ನಿರ್ನಾಮ ಮಾಡಿಬಿಡುತ್ತವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರಗಳು, ಅದರಲ್ಲಿಯೂ ಕರ್ನಾಟಕದಲ್ಲಿ ಅರಸು ನೇತೃತ್ವದಲ್ಲಿ ಜಮೀನ್ದಾರಿ ಪಾಳೆಗಾರಿಕೆಯನ್ನು ತೊಡೆದುಹಾಕಲು ಪ್ರಯತ್ನ ನಡೆಸಲಾಗಿತ್ತು. ಈಗ ಮತ್ತೆ ಅದೇ ಜಮೀನ್ದಾರಿ ಪಾಳೆಗಾರಿಕೆಯನ್ನು ಪುನರ್ಸ್ಥಾಪಿಸಲು ಸರ್ಕಾರ ಕಟಿಬದ್ಧವಾಗಿರುವಂತೆ ಕಾಣುತ್ತದೆ. ಇದನ್ನು ನಾವು ತೀವ್ರವಾಗಿ ವಿರೋಧಿಸಬೇಕು.

-ಟಿ.ಆರ್.ಚಂದ್ರಶೇಖರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.