ಭೂ ಸುಧಾರಣಾ ಮಸೂದೆಗೆ ಅಂಗೀಕಾರ, ಮಸೂದೆಗೆ ತಿದ್ದುಪಡಿ ಸೂಚಿಸಿದ ಎಚ್.ಕೆ. ಪಾಟೀಲ
ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೇ ಭೂ ಸುಧಾರಣಾ ಕಾಯ್ದೆ (ಎರಡನೇ ತಿದ್ದುಪಡಿ)–2020 ಮಸೂದೆಗೆ ವಿಧಾನಸಭೆಯಲ್ಲಿ ಬುಧವಾರ ಒಪ್ಪಿಗೆ ಸೂಚಿಸಲಾಯಿತು. ವಿಧಾನ ಪರಿಷತ್ನಲ್ಲಿ ತಿದ್ದುಪಡಿಗೊಂಡ ಮಸೂದೆಯನ್ನು ಕಂದಾಯ ಸಚಿವ ಆರ್.ಅಶೋಕ ಮಂಡಿಸಿದರು. ಕಾಂಗ್ರೆಸ್ನ ಎಚ್.ಕೆ.ಪಾಟೀಲ ಅವರು ಮಸೂದೆಗೆ ತಿದ್ದುಪಡಿ ಸೂಚಿಸಿ, ‘ಕಾಯ್ಸೆಯ 81 ಎ ಗೆ ತಿದ್ದುಪಡಿ ತರಬೇಕು. ರಾಜ್ಯದ ಸಾಮಾನ್ಯ ನಿವಾಸಿಗಳಲ್ಲದೇ ಬೇರೆ ಯಾರೂ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಬಾರದು. ಈಗಾಗಲೇ ನಿರೀಕ್ಷಿತ ನೀರಾವರಿ ಪ್ರದೇಶ ಅಥವಾ ನಿರೀಕ್ಷಿತ ಕೈಗಾರಿಕಾ ಪ್ರದೇಶದ ವ್ಯಾಪ್ತಿ ಯಲ್ಲಿ ಇಂಥ ಖರೀದಿ ಪ್ರಕ್ರಿಯೆಗೆ ಈಗಾಗಲೇ ವಿಧಿಸಲಾಗಿರುವ ನಿಯಂತ್ರಣ ಕಾನೂನುಗಳನ್ವಯ ಕ್ರಮ ಕೈಗೊಳ್ಳುವುದನ್ನು ಈ ತಿದ್ದುಪಡಿಯಿಂದ ತಡೆಯತಕ್ಕದ್ದಲ್ಲ. ಈ ತಿದ್ದುಪಡಿ ಪರಿಣಾಮವಾಗಿ ಈಗಾಗಲೇ ಜಾರಿಯಲ್ಲಿ ರುವ ಯಾವುದೇ ನಿಯಂತ್ರಣ ರದ್ದಾಗತಕ್ಕದ್ದಲ್ಲ‘ ಎಂದರು.Last Updated 9 ಡಿಸೆಂಬರ್ 2020, 22:04 IST