‘ವೀರಶೈವರು ಪಾಯಸ, ಒಕ್ಕಲಿಗರು ಮಾಂಸ’ ಇದ್ದಂತೆ ಎಂದು ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ (ಪ್ರ.ವಾ., ಸೆ.11). ‘ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದವರೇ ದೇವೇಗೌಡರಿಗೆ ಮತ ನೀಡಲಿಲ್ಲ. ಅವರನ್ನು ಸೋಲಿಸುವ ಮೂಲಕ ಪಾಪದ ಕೆಲಸ ಮಾಡಿದ್ದೇವೆ. ಮೊದಲು ನಮ್ಮ ಸಮಾಜ, ನಂತರ ಬೇರೆಯವರು ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಶಾಸಕರು ಹೇಳಿರುವುದು ವಿಷಾದನೀಯ.

ಎಲ್ಲ ಜಾತಿ, ಜನಾಂಗ, ಧರ್ಮದವರ ಸಹಕಾರದಿಂದ ಜನಪ್ರತಿನಿಧಿಗಳಾದವರು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಜಾತಿ– ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಎನ್ನುವ ಸರ್ವಜ್ಞನ ವಾಣಿಯಂತೆ, ಬರೀ ನಾನು, ನನ್ನದು ಎನ್ನುವುದನ್ನು ಬಿಟ್ಟು ಎಲ್ಲ ಜಾತಿ, ಜನಾಂಗ, ಧರ್ಮದವರ ಮೌಲ್ಯಗಳನ್ನೂ ಜನಪ್ರತಿನಿಧಿಗಳು ಗೌರವಿಸಲಿ.

–ಕೊದ್ದಡ್ಡಿ ಮಹೇಶ್,ಶಹಾಪೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.