ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿಂದ ಹಲವು ಭಾಗ್ಯಗಳು ಬಾಗಿಲು ಬಡಿಯುತ್ತ ರಾಜ್ಯದ ಜನಸಾಮಾನ್ಯರನ್ನು ತಲುಪಿವೆ. ಆದರೆ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರೋತ್ಸಾಹಿಸಲು ಈ ಹಿಂದೆ ಜಾರಿಯಲ್ಲಿದ್ದ ಪುಸ್ತಕ ಖರೀದಿಯನ್ನು ಕೈಬಿಟ್ಟದ್ದು ಏಕೆ? ಕನ್ನಡದ ಹೆಸರಲ್ಲಿ, ಧರ್ಮ, ಜಾತಿ ಹೆಸರಲ್ಲಿ ಕಾರ್ಯಕ್ರಮ ನಡೆಸಲು ಕೋಟಿಗಟ್ಟಲೆ ಹಣ ವಿನಿಯೋಗಿಸುವ ಸರ್ಕಾರ, ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಮೀನ–ಮೇಷ ಎಣಿಸುತ್ತಿದೆ.

ಜನ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಬೇಕು. ರಾಜ್ಯಕ್ಕೆ ಮಠ, ಮಂದಿರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಗಳು ಬೇಕಿವೆ. ಎಲ್ಲ ವರ್ಗಗಳ ಜನ ಗ್ರಂಥಾಲಯಗಳಲ್ಲಿ ಒಂದಾಗುವಂತೆ ಮಾಡಬೇಕಿದೆ. ಹಾಗಾಗಿ ನಾಡಿನ ಜನರಿಗೆ ‘ಪುಸ್ತಕ ಭಾಗ್ಯ’ ಯೋಜನೆ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.