ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಕುರಿತಂತೆ ಡಾ. ವೆಂಕಟಯ್ಯ ಅಪ್ಪಗೆರೆ ಅವರ ಕಾಳಜಿ ಮೆಚ್ಚುವಂತಹುದೇ (ವಾ.ವಾ., ಏ. 24). ಅದಕ್ಕೆ ಅವರು ನೀಡಿರುವ ಸುಲಭದ ಪರಿಹಾರವೆಂದರೆ ಮುಕ್ತ ಲೈಂಗಿಕತೆ ಮತ್ತು ಅದಕ್ಕೆ ಅನುಕೂಲ ಮಾಡಿಕೊಡುವ ವೇಶ್ಯಾವಾಟಿಕೆ. ಹಿಂದೆಯೂ ಅನೇಕ ಗಣ್ಯರೆನಿಸಿಕೊಂಡವರು ಇದೇ ಪರಿಹಾರಕ್ಕೆ ಆಗ್ರಹಿಸಿದ್ದುಂಟು. ಆದರೆ, ಇಲ್ಲಿ ನನಗೆ ಬರುವ ಪ್ರಶ್ನೆಯೆಂದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಈ ಕಾರ್ಯಕ್ಕೆ ತಮ್ಮನ್ನು ಕಾಮುಕರಿಗೆ ಒಪ್ಪಿಸಿಕೊಳ್ಳುವವರನ್ನು ಈ ಮಹಾನುಭಾವರು ಎಲ್ಲಿಂದ ಕರೆತರುತ್ತಾರೆ ಎನ್ನುವುದು.

ತಮ್ಮ ಮನೆಯ ಹೆಣ್ಣುಮಕ್ಕಳನ್ನು ವಾತ್ಸ್ಯಾಯನನ ಕಾಮಸೂತ್ರದಲ್ಲಿ ಪಾರಂಗತರನ್ನಾಗಿಸಿ ಈ ಘನಕಾರ್ಯಕ್ಕೆ ಒಪ್ಪಿಸಿ ಕರೆತರುವ ಇರಾದೆ ಏನಾದರೂ ಇದೆಯೇ? ಈ ಪ್ರಶ್ನೆಯಿಂದ ಸಿಟ್ಟಿಗೇಳಬೇಡಿ ಸ್ವಾಮಿ...ಈ ಹೆಣ್ಣುಮಕ್ಕಳ ದುರ್ದೆಸೆಯ ಬಗ್ಗೆ ವಿಸ್ತಾರವಾಗಿ ಅಧ್ಯಯನ ನಡೆಸಿದ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಮತ್ತು ಲೇಖಕಿ ರೂಪ ಹಾಸನ ನೇತೃತ್ವದ ತಂಡದ ವರದಿಯ ಮುಖ್ಯಾಂಶಗಳು ’ಪ್ರಜಾವಾಣಿ’ಯಲ್ಲಿ ಪ್ರಕಟವಾಗಿ ಪ್ರಜ್ಞಾವಂತರನ್ನು ತಲ್ಲಣಗೊಳಿಸಿದ್ದವು. ಇದನ್ನು ವೇಶ್ಯಾವಾಟಿಕೆಯ ಸಮರ್ಥಕರು ಓದಿರಬಹುದು ಎಂದುಕೊಳ್ಳುತ್ತೇನೆ. ಇಲ್ಲದಿದ್ದರೆ ದಯವಿಟ್ಟು ಓದಿ.

ಯುವಜನರನ್ನು ಅವ್ಯಾಹತವಾಗಿ ಕಾಮ ಪ್ರಚೋದನೆಗೆ ಒಳಪಡಿಸುತ್ತಿರುವ ಅಶ್ಲೀಲ ಸಿನಿಮಾ, ವಿಡಿಯೊ, ಜಾಹೀರಾತು, ಇಂಟರ್‌ನೆಟ್ ಮುಂತಾದವುಗಳಿಗೆ ಮುಕ್ತ ಪರವಾನಗಿ ಇರುವ ಸಮಾಜದಲ್ಲಿ ಇನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಮೊದಲು ಇದಕ್ಕೆ ಕಡಿವಾಣ ಬೇಡವೇ? ಯುವಜನರಿಗೆ ಜೀವನಯೋಗ್ಯ ನೌಕರಿ ಖಾತ್ರಿಪಡಿಸಲಿ. ಮನೋರಂಜನೆಗೆ ಕ್ರೀಡೆ, ಉನ್ನತ ಸಂಸ್ಕೃತಿ ಬೆಳೆಸುವಂತಹ ಸಾಹಿತ್ಯ-ಕಲೆಗಳಲ್ಲಿ ತೊಡಗಿಸಲು ಕ್ರಮ ಕೈಗೊಳ್ಳಲಿ. ಯುವಜನರನ್ನು ಲೈಂಗಿಕತೆಯಲ್ಲಿ ಮುಳುಗಿಹೋಗುವ ಅಪಾಯದಿಂದ ಈ ಮೂಲಕ ಪಾರು ಮಾಡಲು ಸಾಧ್ಯವಿಲ್ಲವೇ?

ಮನುಷ್ಯನಿಗೆ ಹಸಿವು, ನೀರಡಿಕೆಯಂತೆ ಮೈಥುನವೂ ಸಹಜ ಕ್ರಿಯೆ ನಿಜ. ಆದರೆ, ವಿಶ್ವದ ಮೊದಲ ಸಮಾಜವಾದಿ ರಾಷ್ಟ್ರವಾದ ಸೋವಿಯತ್ ಒಕ್ಕೂಟದ ರೂವಾರಿ ಲೆನಿನ್ ಹೇಳಿದಂತೆ, ‘ಬಾಯಾರಿದವನು ಕೊಳಚೆ ನೀರನ್ನು ಹೇಗೆ ಕುಡಿಯಲಾರನೋ, ಹಾಗೆಯೇ ಪ್ರಜ್ಞಾವಂತನಾದವನು ಲೈಂಗಿಕ ಕಾಮನೆಯನ್ನು ಹೇಗೆಂದರೆ ಹಾಗೆ ತಣಿಸಿಕೊಳ್ಳಲಾರ’. ಅದನ್ನು ವೈವಾಹಿಕ ಜೀವನದಲ್ಲೇ ಪಡೆಯುವಂತಹ ಪರಿಸರವನ್ನು ಸೃಷ್ಟಿಸಬೇಕಾಗುತ್ತದೆ. ಅದರ ಬದಲಿಗೆ ಯಾವುದೋ ಬಡಪಾಯಿ ಹೆಣ್ಣನ್ನು ವೇಶ್ಯಾವೃತ್ತಿಗೆ ತಳ್ಳಿ ತಮ್ಮ ಮನೆಯ ಸಭ್ಯ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವ ಇಂತಹ ಪರಿಹಾರೋಪಾಯಗಳು ನಮಗೆ ಖಂಡಿತ ಬೇಡ. ಅಷ್ಟೇ ಅಲ್ಲ, ಇಂತಹ ದುಃಸ್ಥಿತಿಯಲ್ಲಿರುವವರ ಪುನರ್‌ವಸತಿ ಕಾರ್ಯ ಜರೂರಾಗಿ ನಡೆಯತಕ್ಕದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.