ಪಶ್ಚಿಮಘಟ್ಟದ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ನೀತಿ ರೂಪಿಸಲು ಡಾ. ಮಾಧವ್ ಗಾಡ್ಗೀಳ್ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತು. ಡಾ. ಗಾಡ್ಗೀಳ್ ಸಮಿತಿ ವರದಿ ಬಗ್ಗೆ ಆಕ್ಷೇಪ ವ್ಯಕ್ತವಾದದ್ದರಿಂದ ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ಕೇಂದ್ರ ಪರಿಸರ ಸಚಿವಾಲಯ ರಚಿಸಿತು. ಇದರ ಉದ್ದೇಶ ಗಾಡ್ಗೀಳ್ ವರದಿಯನ್ನು ಪರಿಷ್ಕಾರ ಮಾಡುವುದು.

ರಾಜ್ಯ ಸರ್ಕಾರ -೨೦೧೩ರ ಜನವರಿ 11 ರಂದು ಬೆಂಗಳೂರಿನಲ್ಲಿ ಕಸ್ತೂರಿ ರಂಗನ್ ಸಮಿತಿ ಮುಂದೆ ತನ್ನ ವಿವರವಾದ ಅಭಿಪ್ರಾಯಗಳನ್ನು ತಿಳಿಸಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ. ಮಾಧವ ಗಾಡ್ಗೀಳ್ ವರದಿಯ ಬಹಳಷ್ಟು (ಶೇ 75) ಅಂಶಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು! ಮುಂದೆ ಡಾ. ಕಸ್ತೂರಿ ರಂಗನ್ ವರದಿ ಪ್ರಕಟವಾದಾಗ ಆ ವರದಿ ಪುನಃ ಚರ್ಚೆಗೆ ಒಳಗಾಯಿತು. ಕೇಂದ್ರ ಸರ್ಕಾರ ಈ ಬಗ್ಗೆ ಆದೇಶವನ್ನೇ ಹೊರಡಿಸಿದ್ದರಿಂದ ಜನಪ್ರತಿನಿಧಿಗಳು ನಾಮುಂದು ತಾಮುಂದು ಎಂದು ವರದಿಗೆ ವಿರೋಧ ವ್ಯಕ್ತ ಮಾಡಿದರು.

ನಂತರ ೨೦೧೪ರ ಪ್ರಾರಂಭದಲ್ಲಿ ರಾಜ್ಯ ಸರ್ಕಾರ ಕ್ಯಾಬಿನೆಟ್ ಉಪಸಮಿತಿ ರಚಿಸಿತು. ಇತ್ತೀಚೆಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಕ್ಯಾಬಿನೆಟ್ ನಿರ್ಣಯ ಕೈಗೊಂಡಿತು. ಕ್ಯಾಬಿನೆಟ್ ಕೈಗೊಂಡ ನಿರ್ಧಾರ, ಅಭಿಪ್ರಾಯಗಳ ಬಗ್ಗೆ ಚರ್ಚೆ ಆಗಬೇಕಾದದ್ದು ಅತ್ಯವಶ್ಯ.
ವರದಿಯ ಲೋಪದೋಷ: ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಕರ್ನಾಟಕದ ೧,೫೭೫ ಹಳ್ಳಿಗಳನ್ನು ಗುರುತಿಸಲಾಗಿದೆ. ಇವುಗಳನ್ನು ವೈಜ್ಞಾನಿಕವಾಗಿ ಹಾಗೂ ಸ್ಥಳೀಯವಾಗಿ ಪರಿಶೀಲನೆ ಮಾಡಿ ಗುರುತಿಸಬೇಕು ಎಂಬುದು ಪರಿಸರ ಕಾರ್ಯಕರ್ತರ ಅಭಿಪ್ರಾಯ. ಇನ್ನೂ ಕೆಲವು ಹಳ್ಳಿಗಳನ್ನು ಈ ಪಟ್ಟಿಗೆ ಸೇರಿಸಬೇಕು. ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಬರದಿರುವ ಹಳ್ಳಿಗಳನ್ನು ಪಟ್ಟಿಯಿಂದ ಕೈ ಬಿಡಬೇಕು.

ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟದ ವ್ಯಾಪ್ತಿಯನ್ನು ವೈಜ್ಞಾನಿಕವಾಗಿ ಗುರುತಿಸಿಲ್ಲ. ತಾಲ್ಲೂಕಾವಾರು ಪಟ್ಟಿ ಪ್ರಕಟಿಸಿ ಕೈ ತೊಳೆದುಕೊಂಡಿದೆ. ಉದಾಹರಣೆಗೆ ಸೊರಬ ತಾಲ್ಲೂಕು, ಹಳಿಯಾಳ, ಮುಂಡಗೋಡ ತಾಲ್ಲೂಕುಗಳು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ (ಈ ವರದಿ ಪ್ರಕಾರ) ಬರುವುದೇ ಇಲ್ಲ! ಅದೇ ಕರ್ನಾಟಕ ಸರ್ಕಾರ ೨೦೧೧ ರಲ್ಲೇ ಹೋಬಳಿ ಮಟ್ಟದಲ್ಲಿ ಪಶ್ಚಿಮಘಟ್ಟ ಗುರುತಿಸಿ ಆದೇಶ ನೀಡಿತ್ತು. ಕಸ್ತೂರಿ ರಂಗನ್ ಸಮಿತಿ ಈ ಬಗ್ಗೆ ಶ್ಲಾಘನೆ ಮಾಡಿತ್ತು. ಆದರೆ ಮುಂದೆ ತನ್ನ ವರದಿಯಲ್ಲಿ ಕರ್ನಾಟಕದ ಮಾದರಿಯನ್ನು ಸೇರಿಸಲೇ ಇಲ್ಲ! ಈ ಕೆಲವು ದೋಷಗಳನ್ನು ಸರಿಪಡಿಸಿಕೊಂಡು ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕಿತ್ತು.
ಮುಕ್ತ ಅವಕಾಶ ಸಲ್ಲದು: ಕಲ್ಲು ಗಣಿಗಾರಿಕೆ, ಮರಳುಗಾರಿಕೆ, ಮಿನಿ ಜಲವಿದ್ಯುತ್ನಂಥ ಯೋಜನೆಗಳಿಗೆ ಪಶ್ಚಿಮಘಟ್ಟದಲ್ಲಿ ಮುಕ್ತ ಅವಕಾಶ ನೀಡಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆ ಸರ್ವಥಾ ಸರಿ ಅಲ್ಲ. ಹಾಗೆಂದು ರಾಜ್ಯ ಸರ್ಕಾರ ಹೇಳುವಂತೆ ಏಕಾಏಕಿ ೮೦೦ ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶ ಪಟ್ಟಿಯಿಂದ ಕೈ ಬಿಡಬೇಕು ಎಂದು ಹೇಳುವುದು ಮೂರ್ಖತನವೇ ಸರಿ.

ಸಹ್ಯಾದ್ರಿಯನ್ನು ಬಳ್ಳಾರಿಯಂತೆ ಬಗೆಯಲು ಬಿಟ್ಟರೆ, ವಾಣಿಜ್ಯೀಕರಣಕ್ಕೆ ಬಾಗಿಲು ತೆರೆದರೆ ಇಲ್ಲಿನ ವನವಾಸಿಗಳ, ರೈತರ ಪಾಡೇನಾದೀತು? ಜೀವ ಸಂಕುಲದ ಪರಿಸ್ಥಿತಿ ಏನಾದೀತು? ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಘಟ್ಟದ ಹಳ್ಳಿಗಳನ್ನು ಘೋಷಿಸಿದರೆ, ಗುರುತಿಸಿದರೆ ಅಕ್ರಮ ಮರಳು ಗಣಿಗಾರಿಕೆ, ಮಿನಿ ಹೈಡೆಲ್ ಸರಮಾಲೆ ಇವಕ್ಕೆಲ್ಲ ತಡೆ ಬೀಳುತ್ತದೆ. ಮಲೆನಾಡಿನ ರೈತರಿಗೆ ಮರಳು, ಗಣಿ, ಡ್ಯಾಂ ಬೇಕಾಗಿಲ್ಲ. ಇದನ್ನು ರೈತರು ವನವಾಸಿಗಳು ಸ್ವಾಗತಿಸುತ್ತಾರೆ.

ಆದರೆ ಸ್ಥಾಪಿತ ಹಿತಾಸಕ್ತಿಗಳು ಮಾಡಿದ್ದೇನು? ಡಾ. ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ರೈತರು ವನವಾಸಿಗಳು ಒಕ್ಕಲೇಳಬೇಕು. ಮನೆ ಕಟ್ಟಲೂ ಅವಕಾಶ ಇಲ್ಲ ಎಂದು ಜನತೆಗೆ ತಪ್ಪು ಮಾಹಿತಿ ನೀಡಿದರು! ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟ ಕಾರ್ಯಪಡೆ ಶಿಫಾರಸು, ಸೂಕ್ಷ್ಮ ಪ್ರದೇಶ, ‘ಯುನೆಸ್ಕೊ’ ಪಟ್ಟಿ ಇವೆಲ್ಲವನ್ನೂ ವಿರೋಧಿಸಲು ಮುಂದಾದರು.
ಏಕಪಕ್ಷೀಯ ನಿರ್ಧಾರ: ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಬಗ್ಗೆ ನಿರ್ಣಯ ಕೈಗೊಳ್ಳುವಾಗ ಪಶ್ಚಿಮಘಟ್ಟದ ಪರಿಸರ ಸಂಘ ಸಂಸ್ಥೆಗಳ, ಪರಿಸರ ವಿಜ್ಞಾನಿಗಳ ಸಭೆ ಕರೆಯಬೇಕಿತ್ತು. ನಾಡಿಗೆ, ದಕ್ಷಿಣ ಭಾರತದ ಆಹಾರ ಸುರಕ್ಷತೆಗೆ ಪಶ್ಚಿಮಘಟ್ಟದ ನದಿ ಕಣಿವೆಗಳು ಮುಖ್ಯ. ಹಾಗಿರುವಾಗ ಇಂಥ ಗಂಭೀರ, ಮಹತ್ವದ ಜ್ವಲಂತ ವಿಷಯದಲ್ಲಿ ಕೇವಲ ರಾಜಕೀಯ ನಿರ್ಣಯ ಕೈಗೊಳ್ಳುವುದು ಸಾಧು ಅಲ್ಲವೇ ಅಲ್ಲ.

ಬೃಹತ್ ಅರಣ್ಯನಾಶಿ ಯೋಜನೆಗಳಿಗೆ ಹುನ್ನಾರ: ಗುಂಡ್ಯದಂಥ ಬೃಹತ್ ಅರಣ್ಯನಾಶಿ ಯೋಜನೆ ತರಲು, ಶರಾವತಿ, ಅಘನಾಶಿನಿ, ನೇತ್ರಾವತಿ ತಿರುವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಹುನ್ನಾರ ಕಸ್ತೂರಿ ರಂಗನ್ ವರದಿ ಕುರಿತ ಕ್ಯಾಬಿನೆಟ್ ನಿರ್ಣಯದ ಹಿಂದಿದೆಯೇ?

ಈಗ ಆಗಬೇಕಾದ್ದೇನು?: ರಾಜ್ಯ ಸರ್ಕಾರ, ಪ್ರಮುಖ ರಾಜಕೀಯ ಪಕ್ಷಗಳು, ಕೇಂದ್ರ ಪರಿಸರ ಅರಣ್ಯ ಸಚಿವಾಲಯಕ್ಕೆ ಮನವಿ ಮಾಡಿಕೊಳ್ಳಬೇಕು. ಪಶ್ಚಿಮಘಟ್ಟದ ರೈತರು, ವನವಾಸಿಗಳ ಸಹಭಾಗಿತ್ವದಲ್ಲಿ ಪಶ್ಚಿಮಘಟ್ಟದ ರಕ್ಷಣೆ, ನಿರ್ವಹಣೆ, ಅಭಿವೃದ್ಧಿ ಯೋಜನೆ ಜಾರಿ ಮಾಡಿ ಸ್ಥಾನಿಕ ಜನರ ಸಾಂಪ್ರದಾಯಿಕ ಹಕ್ಕುಗಳನ್ನು ಮಾನ್ಯ ಮಾಡಬೇಕು. ಗ್ರಾಮಸಭೆ, ಗ್ರಾಮ ಅರಣ್ಯ ಸಮಿತಿ, ಪಂಚಾಯಿತಿ ಜೀವ ವೈವಿಧ್ಯ ಸಮಿತಿ ಬಲಗೊಳಿಸಬೇಕು. ಇವುಗಳ ಜೊತೆಗೆ ಕಸ್ತೂರಿ ರಂಗನ್ ವರದಿ ಜಾರಿ ಮಾಡಬಹುದು ಎಂದು ಮನವಿ ಮಾಡಬೇಕು.

ಸರ್ಕಾರ ಗಮನಿಸಲಿ: ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾನ್ಯ ಜನತೆ ತಾವಾಗೇ ಬಂದ್ ಆಚರಿಸಿ ವಿರೋಧ ವ್ಯಕ್ತಮಾಡಿದ್ದನ್ನು ಸರ್ಕಾರ ಗಮನಿಸಬೇಕು. ಪಶ್ಚಿಮಘಟ್ಟದಲ್ಲಿ ಮಿನಿ ಹೈಡೆಲ್ ಡ್ಯಾಂ ಸರಮಾಲೆ ವಿರುದ್ಧ ಹಳ್ಳಿಗಳ ಜನರು ಚಳವಳಿ ಮಾಡಿದ್ದನ್ನು ರಾಜಕೀಯ ಎಂದು ಸಾರಿಸಿ ಬಿಟ್ಟರೆ ಹೇಗೆ? ಕಳೆದ ಎಂಟು ತಿಂಗಳಿಂದ ಪಶ್ಚಿಮಘಟ್ಟದ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಮರೋಪಾದಿಯಲ್ಲಿ ನಡೆಯುತ್ತಿರುವುದನ್ನು ಸರ್ಕಾರ ಬೆಂಬಲಿಸುತ್ತಿದೆಯೆ? ಶರಾವತಿ, ತುಂಗಾ, ನೇತ್ರಾವತಿಗಳ ನದೀ ಪಾತ್ರ ಹಾಳುಮಾಡಲಾಗಿದೆ. ಈವರೆಗೆ ಹೂಡಿಕೆದಾರರ ಸಮಾವೇಶಗಳಲ್ಲಿ ಪಶ್ಚಿಮಘಟ್ಟದಲ್ಲಿ ಉದ್ದಿಮೆ ಸ್ಥಾಪಿಸಲು ಅರ್ಜಿ ಹಾಕುವವರೇ ಇರಲಿಲ್ಲ. ಇನ್ನು ಮುಂದೆ ಪಶ್ಚಿಮ ಘಟ್ಟದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಸರ್ಕಾರವೇ ಅವಕಾಶ ನೀಡಬಹುದು.

ಕರ್ನಾಟಕದ ಪಶ್ಚಿಮಘಟ್ಟ ಜಗತ್ತಿನಲ್ಲೇ ಅಪರೂಪದ ಜೀವ ವೈವಿಧ್ಯ ಹೊಂದಿದೆ. ಅದರ ರಕ್ಷಣೆಗೆ ರಾಜ್ಯ ಸರ್ಕಾರ ಈ ಹಿಂದೆ ಸ್ಥಾಪಿಸಿದ್ದ ಪಶ್ಚಿಮಘಟ್ಟ ಕಾರ್ಯಪಡೆ ನೀಡಿದ ತಜ್ಞ ಶಿಫಾರಸುಗಳು ಅರಣ್ಯ ಭವನದ ಕಪಾಟಿನಲ್ಲಿ ತಣ್ಣಗೆ ಕುಳಿತಿವೆ. ಈ ಕಾರ್ಯಪಡೆ ಶಿಫಾರಸಿನಂತೆ ಕೈಗೊಂಡ ಪಶ್ಚಿಮಘಟ್ಟ ರಕ್ಷಣಾ ಯೋಜನೆಗಳನ್ನೂ ಈಗಿನ ಸರ್ಕಾರ ನಿಲ್ಲಿಸಿಬಿಟ್ಟಿದೆ!

ಶಿವರಾಮ ಕಾರಂತರ ಮಾತು: ಪಶ್ಚಿಮ ಘಟ್ಟದ ಸಂರಕ್ಷಣೆ ವಿಷಯ ದಲ್ಲಿ ನ್ಯಾಯಾಲಯಗಳು, ಪತ್ರಿಕೆಗಳು, ಸ್ಥಾನಿಕ ಪ್ರಜ್ಞಾವಂತ ನಾಗರಿಕರು, ರೈತರು ಇವರೆಲ್ಲರೂ ಬೆಂಬಲ ನೀಡುತ್ತಾರೆ. ರಾಜ ಕೀಯ ಪಕ್ಷಗಳು ಮಾತ್ರ ವಿರೋಧ ವ್ಯಕ್ತಮಾಡುತ್ತವೆ. ಪರಿಸರ ಪರ ಚುನಾವಣೆಗೇ ನಿಂತಿದ್ದ ಶಿವರಾಮ ಕಾರಂತ ಅವರು ಯಾವಾ ಗಲೂ ಹೇಳುತ್ತಿದ್ದ ಮಾತು ಇದು: ‘ಜನಪ್ರತಿನಿಧಿಗಳಿಗೆ ಪರಿಸರ ಪಾಠ ಮಾಡಿ’. ಇಂದು ಈ ಮಾತು ಇನ್ನೂ ಹೆಚ್ಚು ಪ್ರಸ್ತುತ.

ಇನ್ನೊಂದು ಸಂಗತಿ: ಡಾ. ಕಸ್ತೂರಿ ರಂಗನ್ ವರದಿ ಪ್ರಕಾರ ಕೇಂದ್ರ ಸರ್ಕಾರ ಈಗಾಗಲೇ ಹೊರಡಿಸಿದ ಆದೇಶ ರದ್ದು ಮಾಡಿದರೆ ಏನಾಗಬಹುದು? ಭಾರೀ ಅನಾಹುತ ಆಗಲಾರದು. ಈ ಆದೇಶವನ್ನು ಪರಿಸರ ಕಾಯಿದೆ ಅಡಿಯಲ್ಲಿ ಹೊರಡಿಸಲಾಗಿದೆ. ನಮ್ಮ ದೇಶದಲ್ಲಿ ಕೇಂದ್ರ ಅರಣ್ಯ ಕಾಯಿದೆ ಬಲವಾಗೇ ಇದೆ. ವನ್ಯಜೀವಿ ಕಾಯಿದೆ, ಪರಿಸರ ಕಾಯಿದೆ, ಜೀವ ವೈವಿಧ್ಯ ರಕ್ಷಣಾ ಕಾಯಿದೆಗಳು ಈಗಾಗಲೇ ಜಾರಿಯಲ್ಲಿ ಇವೆ ಎಂಬುದನ್ನು ಮರೆಯಬಾರದು.

ಏನೇ ವರದಿ, ಕಾಯಿದೆ, ಕಾನೂನು ಬಂದರೂ ಜಾಗೃತ ಜನತೆಯೇ ಪಶ್ಚಿಮಘಟ್ಟದ ಜೀವ ಸಂಕುಲ ಉಳಿವಿಗೆ ಧ್ವನಿ ಎಂಬುದನ್ನು ಮರೆಯಬಾರದು. ಅದಕ್ಕಾಗಿ ಪುನಃ ‘ಪಶ್ಚಿಮ ಘಟ್ಟ ಉಳಿಸಿ’ ಜನಾಂದೋಲನವೇ ಆಗಬೇಕು.
(ಲೇಖಕರು ವೃಕ್ಷಲಕ್ಷ ಆಂದೋಲನ ಅಧ್ಯಕ್ಷರು ಹಾಗೂ ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.