ಆರೋಗ್ಯಕರ ಸಮಾಜವೊಂದಕ್ಕೆ ಭಿನ್ನಾಭಿಪ್ರಾಯಗಳ ಕುರಿತ ಮುಕ್ತ ಚರ್ಚೆ ಅಗತ್ಯ ಎಂಬುದು ನಮ್ಮ ನಂಬಿಕೆ. ಈ ಕಾರಣದಿಂದಲೇ ಆರು ತಿಂಗಳ ಹಿಂದೆ `ಪ್ರಜಾವಾಣಿ' ಜಾತಿ ಸಂವಾದವನ್ನು ಆರಂಭಿಸಿತು.

ದೇಶದ ಇಬ್ಬರು ಪ್ರಸಿದ್ಧ ಚಿಂತಕರಾದ ಗೋಪಾಲ್ ಗುರು ಮತ್ತು ಸುಂದರ್ ಸರುಕ್ಕೈ ಈ ಸಂವಾದದ ಸಮನ್ವಯಕಾರರಾಗಿದ್ದರು. ಕರ್ನಾಟಕ ಮತ್ತು ಕರ್ನಾಟಕದ ಹೊರಗಿರುವ ಅನೇಕ ಬರಹಗಾರರು ಮತ್ತು ಓದುಗರು ಜಾತಿಯ ಆಚರಣೆಯಿಂದ ತೊಡಗಿ ಜಾತಿಯ ಭಿನ್ನ ಸ್ವರೂಪಗಳ ತನಕದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ `ಪ್ರಜಾವಾಣಿ'ಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಪ್ರಕ್ರಿಯೆಗೆ ಮಾರ್ಗದರ್ಶಕರಾಗಿ, ಚರ್ಚೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಕೆಲಸವನ್ನು ಇಬ್ಬರೂ ಸಮನ್ವಯಕಾರರು ಮಾಡಿದ್ದಾರೆ. ಸಂವಾದದಲ್ಲಿ ಪಾಲ್ಗೊಂಡ ಎಲ್ಲರಿಗೂ ಹಾಗೆಯೇ ಈ ಸಂವಾದ ಮಾಲಿಕೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ನಮ್ಮ ಪ್ರಯತ್ನವನ್ನು ಯಶಸ್ವಿಯಾಗಿಸಿದ ಓದುಗರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಈ ಚರ್ಚೆಗೆ ಔಪಚಾರಿಕವಾದ ಅಂತ್ಯವನ್ನು ಘೋಷಿಸುತ್ತಿದ್ದೇವೆ.

ಈ ಸಂವಾದದಲ್ಲಿ ಭಾಗವಹಿಸುವ ಉತ್ಸಾಹದಿಂದ ಅನೇಕರು ಕಳುಹಿಸಿಕೊಟ್ಟ ಅಭಿಪ್ರಾಯಗಳನ್ನು ನಮ್ಮ ಮುದ್ರಣ ಆವೃತ್ತಿಯಲ್ಲಿ ಪ್ರಕಟಿಸಲೂ ಸಾಧ್ಯವಾಗಿಲ್ಲ. ಈ ಎಲ್ಲಾ ಅಭಿಪ್ರಾಯಗಳನ್ನೂ ಒಂದು ಸಂಚಯವಾಗಿ ಓದುಗರಿಗೆ ನೀಡಬೇಕೆಂಬ ಉದ್ದೇಶದಿಂದ ಒಂದು ಪ್ರತ್ಯೇಕ ಅಂತರ್ಜಾಲ ತಾಣವನ್ನು http://jathisamvada.prajavani.net ಅನ್ನು `ಪ್ರಜಾವಾಣಿ' ರೂಪಿಸಿದೆ.

ಒಂದರ್ಥದಲ್ಲಿ ಚರ್ಚೆಗಳು ಯಾವತ್ತೂ ಮುಗಿಯುವುದಿಲ್ಲ. ಅವು ಬೆಳೆಯುತ್ತಾ ನಮ್ಮನ್ನೂ ಬೆಳೆಸುತ್ತಾ ಸದಾ ಇರುತ್ತವೆ. ಈ ಜಾಲತಾಣ ಜಾತಿಯ ಕುರಿತ ಮುಂದಿನ ಚರ್ಚೆಗಳಿಗೆ ವೇದಿಕೆಯಾಗಲಿ ಎಂಬುದು ನಮ್ಮ ಆಶಯ ಮತ್ತು ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.