ನವದೆಹಲಿ (ಪಿಟಿಐ): ಇದೇ ಮೊದಲ ಸಲ ನಡೆಯಲಿರುವ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮುಖ್ಯ ಪ್ರಾಯೋಜಕತ್ವ ಹಕ್ಕುಗಳನ್ನು ಟಾಟಾ ಸಮೂಹವು ಪಡೆದುಕೊಂಡಿದೆ.

ಮುಂಬೈನಲ್ಲಿ ಮಾರ್ಚ್ 4ರಿಂದ ಟೂರ್ನಿಯು ಆರಂಭವಾಗಲಿದೆ. ಐದು ತಂಡಗಳು ಆಡಲಿವೆ.

‘ಟಾಟಾ ಸಮೂಹವು ಟೈಟಲ್ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ಅವರ ಬೆಂಬಲದಿಂದ ಮಹಿಳಾ ಕ್ರಿಕೆಟ್ ಕ್ಷೇತ್ರದ ಬೆಳವಣಿಯನ್ನು ಉತ್ತಮವಾಗಿ ಮಾಡುವ ಭರವಸೆ ಮೂಡಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಪ್ರಾಯೋಜಕತ್ವ ಪಡೆಯಲು ನೀಡಿದ ಮೊತ್ತ ಮತ್ತಿತರ ವಿವರಗಳನ್ನು ಅವರು ಬಹಿರಂಗ ಮಾಡಿಲ್ಲ.

ಟಾಟಾ ಸಂಸ್ಥೆಯು ಐದು ವರ್ಷಗಳ ಅವಧಿಗೆ ಈ ಪ್ರಾಯೋಜಕತ್ವ ಹಕ್ಕುಗಳನ್ನು ಪಡೆದುಕೊಂಡಿದೆ. ಹೋದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಟೈಟಲ್ ಪ್ರಾಯೋಜಕತ್ವ ಗಳಿಸಿತ್ತು.

ಟೂರ್ನಿಯ ಪಂದ್ಯಗಳು ಮುಂಬೈನ ಬ್ರೆಬೊರ್ನ್ ಕ್ರೀಡಾಂಗಣ ಹಾಗೂ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿವೆ. ಈಚೆಗಷ್ಟೇ ಆಟಗಾರ್ತಿಯರ ಬಿಡ್ ಪ್ರಕ್ರಿಯೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.