ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಮುಂಬರುವ ಏಕದಿನ ವಿಶ್ವಕಪ್ ಸರಣಿಗೆ ತನ್ನ ತಂಡವನ್ನು ಪ್ರಕಟಿಸಿದೆ.

2023ರ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ಭಾರತ ತನ್ನ ತಂಡವನ್ನು ಪ್ರಕಟಿಸಿದೆ. ಇದೀಗ ಆಸ್ಟ್ರೇಲಿಯಾ ಕೂಡಾ ತನ್ನ ತಂಡದ 15 ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ.

ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡದಲ್ಲಿ ಹಿರಿಯ ವೇಗಿ ಪ್ಯಾಟ್ ಕಮಿನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಯಾವುದೇ ಅಚ್ಚರಿಯ ಬದಲಾವಣೆಗಳು ಆಗಿಲ್ಲ. ಕಳೆದ ತಿಂಗಳು ವಿಶ್ವಕಪ್ಗಾಗಿ 18 ಆಟಗಾರರ ಸಂಭಾವ್ಯ ಹೆಸರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿತ್ತು.

ಆದರೆ ಅಂತಿಮ 15 ಆಟಗಾರರ ಪಟ್ಟಿಯಲ್ಲಿ ಆಲ್ರೌಂಡರ್ ಆ್ಯರಾನ್ ಹಾರ್ಡಿ, ವೇಗಿ ನ್ಯಾಥಾನ್ ಈಲ್ಸ್ ಹಾಗೂ ಯುವ ಸ್ಪಿನ್ನರ್ ತನ್ವೀರ್ ಸಂಘಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಆಯ್ಕೆ ಸಮಿತಿಯು ಅನುಭವಿ ಆಟಗಾರರ ತಂಡವನ್ನು ಈ ಬಾರಿ ವಿಶ್ವಕಪ್ಗೆ ಆಯ್ಕೆ ಮಾಡಿದೆ. ನಾಲ್ವರು ವೇಗಿಗಳು, ಮೂರು ಜನ ಆಲ್ರೌಂಡರ್ಗಳು, ಇಬ್ಬರು ಸ್ಪಿನ್ನರ್ ಹಾಗೂ ಒಬ್ಬರು ಸ್ಪಿನ್ ಆಲ್ರೌಂಡರ್ಗಳು ಇದ್ದಾರೆ. ವೇಗಿಗಳಲ್ಲಿ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್, ಮಿಷೆಲ್ ಸ್ಟಾರ್ಕ್ ಹಾಗೂ ಸೀನ್ ಅಬಾಟ್ ಇರಲಿದ್ದಾರೆ.

ಐವರು ಶಕ್ತಿಶಾಲಿ ಬ್ಯಾಟರ್ಗಳು: ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ ಮತ್ತು ಜೋಶ್ ಇಗ್ಲೀಸ್. ಕ್ಯಾರಿ ಮತ್ತು ಜೋಶ್ ಇಬ್ಬರೂ ವಿಕೆಟ್ ಕೀಪರ್ಗಳಾಗಿದ್ದಾರೆ. ಆಲ್ರೌಂಡರ್ಗಳಲ್ಲಿ ಮಿಷೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟಾಯಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಇರಲಿದ್ದಾರೆ. ಸ್ಪಿನ್ನರ್ಗಳಾಗಿ ಆಷ್ಟನ್ ಅಗರ್ ಹಾಗೂ ಆ್ಯಡಂ ಜಂಪಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ತಂಡ ಹತ್ತು ವಿಭಿನ್ನ ಬೌಲಿಂಗ್ ಆಯ್ಕೆಯನ್ನು ಹೊಂದಿದೆ.

ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರೀ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆಷ್ಟನ್ ಅಗರ್, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ, ಮಿಚೆಲ್ ಸ್ಟಾರ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.