ನವದೆಹಲಿ: ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಷ್ ಪಾಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬಿಡುಗಡೆ ಮಾಡಿದೆ.

ಅವರ ಬದಲಿಗೆ ವೇಗದ ಬೌಲರ್ ಆವೇಶ್ ಖಾನ್ ಅವರು ಲಖನೌ ತಂಡದಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ನಡೆಯಿರುವ ಮಿನಿ ಹರಾಜಿಗೂ ಮುನ್ನ ಫ್ರ್ಯಾಂಚೈಸಿಗಳಿಗೆ ನೀಡಲಾಗಿರುವ ಆಟಗಾರರ ಟ್ರೇಡ್ ವಿಂಡೋ ಮತ್ತು ಬಿಡುಗಡೆ ಪ್ರಕ್ರಿಯೆಯ ಈ ವಿನಿಮಯ ನಡೆದಿದೆ.

ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡಕ್ಕೆ ಆರಂಭಿಕ ಬ್ಯಾಟರ್ ದೇವದತ್ತ ಸೇರ್ಪಡೆಯಾಗಿದ್ದಾರೆ. ರಾಜಸ್ಥಾನ ತಂಡವು ಅವರನ್ನು ಈ ಹಿಂದೆ ₹ 7.75 ಕೋಟಿಗೆ ಖರೀದಿಸಿತ್ತು. ಅದಕ್ಕೂ ಮುನ್ನ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಐಪಿಎಲ್‌ನಲ್ಲಿ ಒಟ್ಟು 57 ಪಂದ್ಯಗಳನ್ನು ಆಡಿರುವ ಅವರು 1521 ರನ್ ಗಳಿಸಿದ್ದಾರೆ. ಅದರಲ್ಲಿ ಒಂದು ಶತಕ ಮತ್ತು ಒಂಬತ್ತು ಅರ್ಧಶತಕಗಳಿವೆ.

2022ರಲ್ಲಿ ನಡೆದಿದ್ದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಲಖನೌ ತಂಡವು ಆವೇಶ್ ಅವರಿಗೆ ₹ 10 ಕೋಟಿಗೆ ಖರೀದಿಸಿತ್ತು.

ಐಪಿಎಲ್‌ನಲ್ಲಿ 47 ಪಂದ್ಯಗಳನ್ನು ಆಡಿರುವ ಅವರು 55 ವಿಕೆಟ್ ಗಳಿಸಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಳೆದುಕೊಂಡಿದ್ದ ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ಮನೀಷ್ ಪಂಡೆ ಅವರಿಬ್ಬರನ್ನೂ ಡೆಲ್ಲಿ ತಂಡವು ಬಿಡುಗಡೆ ಮಾಡಿದೆ. ಪಾಂಡೆ ಅವರು ₹ 2.40 ಕೋಟಿ ಮತ್ತು ಖಾನ್ ಅವರಿಗೆ ₹ 20 ಲಕ್ಷ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.