ನವದೆಹಲಿ: ಸಿ.ಕೆ.ನಾಯ್ಡು ಟ್ರೋಫಿ ಮತ್ತು ಸೀನಿಯರ್ ಮಹಿಳೆಯರ ಟ್ವೆಂಟಿ20 ಕ್ರಿಕೆಟ್ ಟೂರ್ನಿಯನ್ನು ಪುನರಾರಂಭಿಸುವ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸದ್ಯದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಮಾರ್ಚ್ ಎರಡರಂದು ಬಿಸಿಸಿಐ ಅಪೆಕ್ಸ್ ಸಮಿತಿ ಸಮಿತಿ ಸಭೆ ನಡೆಯಲಿದ್ದು ಅದರಲ್ಲಿ ಈ ಕುರಿತು ತರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಟೂರ್ನಿಗಳನ್ನು ಕೊವಿಡ್ –19ರ ಕಾರಣದಿಂದ ಕಳೆದ ತಿಂಗಳಲ್ಲಿ ಮುಂದೂಡಲಾಗಿತ್ತು. 2023ರ ಏಕದಿನ ವಿಶ್ವಕಪ್ ಟೂರ್ನಿ ಆಯೋಜನಗೆ ಸಂಬಂಧಿಸಿ ಸ್ಥಳೀಯ ಆಯೋಜನಾ ಸಮಿತಿ ರಚನೆಯೂ ಅಪೆಕ್ಸ್ ಸಮಿತಿ ಸಭೆಯಲ್ಲಿ ನಡೆಯುವ ಸಾಧ್ಯತೆ ಇದೆ.

ಸಭೆಯಲ್ಲಿ 14 ವಿಷಯಗಳು ಚರ್ಚೆಗೆ ಬರಲಿದ್ದು ಗೇಮ್ ಡೆವಲಪ್ಮೆಂಟ್ಗೆ ಸಂಬಂಧಿಸಿದ ಪ್ರಧಾನ ವ್ಯವಸ್ಥಾಪಕರ ನೇಮಕಾತಿಯೂ ಇದೇ ಸಂಧರ್ಭದಲ್ಲಿ ನಡೆಯಲಿದೆ. ಈ ಹುದ್ದೆಯಲ್ಲಿದ್ದ ಧೀರಜ್ ಮಲ್ಹೋತ್ರಾ ಕಳೆದ ತಿಂಗಳಲ್ಲಿ ಸ್ಥಾನ ತೊರೆದಿದ್ದರು. ಭಾರತ ತಂಡದ ಪ್ರಾಯೋಜಕತ್ವ ವಹಿಸುತ್ತಿರುವ ಶೈಕ್ಷಣಿಕ ಆ್ಯಪ್ ಬೈಜೂಸ್ ಜೊತೆಗಿನ ಒಪ್ಪಂದ ಮಾರ್ಚ್ 31ಕ್ಕೆ ಮುಗಿಯಲಿದೆ. ಈ ಕುರಿತ ಚರ್ಚೆಯೂ ನಡೆಯಲಿದೆ.

ಜೂನ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟ್ವೆಂಟಿ20 ಸರಣಿಯ ಐದು ಪಂದ್ಯಗಳನ್ನು ಎಲ್ಲೆಲ್ಲಿ ನಡೆಸಬೇಕು ಎಂಬ ಕುರಿತ ಚರ್ಚೆಯೂ ಸಭೆಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.