ನವದೆಹಲಿ: ಫಾರ್ಮ್ಗೆ ಮರಳಲು ಪರದಾಡುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಜ್ವಾನ್, ‘ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಆದರೆ, ಸದ್ಯ ಅವರು ಲಯ ಕಳೆದುಕೊಂಡಿದ್ದಾರೆ. ನಾವು ಅವರಿಗಾಗಿ ಆಶಿಸಬೇಕು. ಪ್ರತಿ ಆಟಗಾರರು ಫಾರ್ಮ್ ಸಮಸ್ಯೆ ಎದುರಿಸುತ್ತಾರೆ. ಶತಕಗಳನ್ನು ಗಳಿಸಿದ ಆಟಗಾರರು ಹಲವು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇದು ಜೀವನದ ಒಂದು ಭಾಗ’ ಎಂದು ಹೇಳಿಕೊಂಡಿದ್ದಾರೆ.

ಓದಿ...ಸರ್ಕಾರು ವಾರಿ ಪಾಟ Twitter Review: ಮಹೇಶ್–ಕೀರ್ತಿ ನಟನೆಗೆ ‘ಸೈ’ ಎಂದ ಪ್ರೇಕ್ಷಕ

‘ಕೊಹ್ಲಿ ಅವರು ಕಠಿಣ ಪರಿಶ್ರಮದಿಂದ ಮತ್ತೊಮ್ಮೆ ಫಾರ್ಮ್ಗೆ ಮರಳುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ರಿಜ್ವಾನ್ ತಿಳಿಸಿದ್ದಾರೆ.

ಕಳೆದ ವರ್ಷ ( 2021ರಲ್ಲಿ) ದುಬೈನಲ್ಲಿ ನಡೆದ ಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಗೆಲುವು ಸಾಧಿಸಿತ್ತು. ಅದರೊಂದಿಗೆ ಐಸಿಸಿಯ ವಿಶ್ವಕಪ್ ಟೂರ್ನಿಗಳಲ್ಲಿ ಇದೇ ಮೊದಲ ಸಲ ಭಾರತವನ್ನು ಮಣಿಸಿದ ಸಾಧನೆ ಮಾಡಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ ಪರ ನಾಯಕ ಬಾಬರ್ ಆಜಂ ಜೊತೆಗೂಡಿ ರಿಜ್ವಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರ ಆಟದ ಬಲದಿಂದ ಪಾಕ್ ಪಡೆ 17.5 ಓವರ್ಗಳಲ್ಲಿಯೇ ಗುರಿ ತಲುಪಿ, ಹತ್ತು ವಿಕೆಟ್ ವಿಕೆಟ್ ಅಂತರದ ಭಾರಿ ಜಯ ದಾಖಲಿಸಿತ್ತು.

ಬಾಬರ್ 68 ರನ್ ಗಳಿಸಿದ್ದರೆ, ರಿಜ್ವಾನ್ 79 ರನ್ ಸಿಡಿಸಿದ್ದರು.

ಓದಿ...IPL 2022: ಗಾಯಾಳು ರವೀಂದ್ರ ಜಡೇಜ ಐಪಿಎಲ್ನಿಂದ ಔಟ್

ಭಾರತ ವಿರುದ್ಧದ ಗೆಲುವಿನ ಬಗ್ಗೆ ಮಾತನಾಡಿದ ಅವರು, ‘ಡ್ರೆಸ್ಸಿಂಗ್ ರೂಮ್ನಲ್ಲಿ ನಾನು ಅಂತಹ ಸಂಭ್ರಮ ದೃಶ್ಯಗಳನ್ನು ನೋಡಿರಲಿಲ್ಲ. ಎಲ್ಲಾ ಆಟಗಾರರು ತುಂಬಾ ಸಂತೋಷಪಟ್ಟಿದ್ದರು. ಶಾಹೀನ್ ಅಫ್ರಿದಿ ಸೇರಿದಂತೆ ಅನೇಕರು ನನಗೆ ಅಭಿನಂದನೆ ತಿಳಿಸಿದ್ದರು. ನಾನು ಈ ಹಿಂದೆ ಅಂತಹ ದೊಡ್ಡ ಪಂದ್ಯಗಳಲ್ಲಿ ಆಡಿರಲಿಲ್ಲ. ಹಾಗಾಗಿ ಅದು ನನಗೆ ಹೊಸ ಅನುಭವವಾಗಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.