ಬೆಂಗಳೂರು: ಕರ್ನಾಟಕ ತಂಡವು ಬೋಲಂಗೀರ್ನಲ್ಲಿ ನಡೆದ 23 ವರ್ಷದೊಳಗಿನವರ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ತಂಡವನ್ನು 9 ವಿಕೆಟ್ಗಳಿಂದ ಮಣಿಸಿತು.

ಮೊದಲ ಇನಿಂಗ್ಸ್ನಲ್ಲಿ 204 ರನ್ ಹಿನ್ನಡೆ ಕಂಡು, ಫಾಲೊ ಆನ್ಗೆ ಒಳಗಾದ ಒಡಿಶಾ ತಂಡವು ಸೋಮವಾರ ಎರಡನೇ ಇನಿಂಗ್ಸ್ನಲ್ಲಿ 99.2 ಓವರ್ಗಳಲ್ಲಿ 346 ರನ್ (ಭಾನುವಾರ 6ಕ್ಕೆ274) ಗಳಿಸಿತು. ಹಿಂದಿನ ದಿನ ಔಟಾಗದೇ ಉಳಿದಿದ್ದ ಸಾವನ್ ಪೆಹಾರಿಯಾ 121 ರನ್ (229ಎ) ಮತ್ತು ಸುಜಲ್ ಸಿಂಗ್ 84 ರನ್ ಹೊಡೆದು ಕೊಂಚ ಪ್ರತಿರೋಧತೋರಿದರು. ಕರ್ನಾಟಕದ ಮನ್ವಂತ್ ಕುಮಾರ್ ಎಲ್. ಮತ್ತು ಪಾರಸ್ ಗುರುಭಕ್ಷ ಆರ್ಯ ತಲಾ ಮೂರು ವಿಕೆಟ್ ಪಡೆದರೆ, ಶಶಿಕುಮಾರ್ ಕೆ. ಎರಡು ವಿಕೆಟ್ ಕಬಳಿಸಿದರು.

ಗೆಲುವಿಗೆ 143 ರನ್ಗಳ ಸುಲಭ ಗುರಿ ಪಡೆದ ಕರ್ನಾಟಕ ತಂಡವು ಪ್ರಖರ್ ಚತುರ್ವೇದಿ (ಔಟಾಗದೇ 72; 96ಎ) ಮತ್ತು ಹರ್ಷಿಲ್ ಧರ್ಮಾನಿ (ಔಟಾಗದೇ 54; 45ಎ) ಅವರ ಬ್ಯಾಟಿಂಗ್ ಬಲದಿಂದ 29 ಓವರ್ಗಳಲ್ಲಿ ದಡ ಸೇರಿತು. ಅವರಿಬ್ಬರು ಎರಡನೇ ವಿಕೆಟ್ಗೆ ಮುರಿಯದ 105 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ 389. ಒಡಿಶಾ 62.3 ಓವರ್ಗಳಲ್ಲಿ 185. ಎರಡನೇ ಇನಿಂಗ್ಸ್: ಒಡಿಶಾ 99.2 ಓವರ್ಗಳಲ್ಲಿ 346 (ಸಾವನ್ ಪೆಹಾರಿಯಾ 121, ಸುಜಲ್ ಸಿಂಗ್ 84, ಮನ್ವಂತ್ ಕುಮಾರ್ ಎಲ್. 53ಕ್ಕೆ 3, ಪಾರಸ್ ಗುರುಭಕ್ಷ ಆರ್ಯ 77ಕ್ಕೆ 3, ಶಶಿಕುಮಾರ್ ಕೆ. 49ಕ್ಕೆ 2). ಕರ್ನಾಟಕ: 29 ಓವರ್ಗಳಲ್ಲಿ 1ಕ್ಕೆ 143 (ಪ್ರಖರ್ ಚತುರ್ವೇದಿ ಔಟಾಗದೇ 72, ಹರ್ಷಿಲ್ ಧರ್ಮಾನಿ ಔಟಾಗದೇ 54). ಫಲಿತಾಂಶ: ಕರ್ನಾಟಕಕ್ಕೆ 9 ವಿಕೆಟ್ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.