ಮೂವತ್ತು ವರ್ಷಗಳ ಹಿಂದೆ ಇದೇ ದಿನಭಾರತ ಹಾಗೂ ಪಾಕಿಸ್ತಾನ ತಂಡಗಳ ಯುವ ಆಟಗಾರರಿಬ್ಬರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಕೆಲವು ವರ್ಷಗಳು ಉರುಳುವಷ್ಟರಲ್ಲಿ ಒಬ್ಬ ವಿಶ್ವ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿಕೊಂಡರೆ, ಮತ್ತೊಬ್ಬ ರಿವರ್ಸ್ ಸ್ವಿಂಗ್ ಮೂಲಕ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಘಾತಕ ವೇಗಿ ಎನಿಸಿಕೊಂಡರು.

1989ರ ನವೆಂಬರ್ 15ರ ಈ ದಿನ ಕರಾಚಿಯಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಕಾರ್ ಯುನೀಸ್ ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಪರವಾಗಿ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಸಚಿನ್ ಬ್ಯಾಟಿಂಗ್ ಮಾಡುತ್ತಿರುವ ಹಾಗೂ ವಕಾರ್ ಬೌಲಿಂಗ್ ಮಾಡುತ್ತಿರುವ ಹಳೇ ಚಿತ್ರಗಳನ್ನು ಹೆಕ್ಕಿ ತೆಗೆದು ಒಟ್ಟಿಗೆ ಜೋಡಿಸಿರುವ ಐಸಿಸಿ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.

‘1989ರ ಈ ದಿನ ಸಚಿನ್ ತೆಂಡೂಲ್ಕರ್ ಹಾಗೂ ವಕಾರ್ ಯುನೀಸ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಉಳಿದದ್ದನ್ನು ಇತಿಹಾಸವೇ ಹೇಳುತ್ತಿದೆ’ ಎಂಬ ಕ್ಯಾಪ್ಷನ್ ಹೊಂದಿರುವ ಈ ಚಿತ್ರಗಳು ವಿಶ್ವದಾದ್ಯಂತ ಇರುವ ಅದರಲ್ಲೂ ಭಾರತ–ಪಾಕ್ ಅಭಿಮಾನಿಗಳನ್ನು ನೆನಪಿನಂಗಳಕ್ಕೆ ಜಾರುವಂತೆ ಮಾಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಸಾಧನೆ

ಪಂದ್ಯ

ರನ್

ಪಡೆದ ವಿಕೆಟ್

200 ಟೆಸ್ಟ್

15921

46

463 ಏಕದಿನ

18426

154

1 ಟಿ20

10

1

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಕಾರ್ ಯುನೀಸ್ ಸಾಧನೆ

ಪಂದ್ಯ

ರನ್

ಪಡೆದ ವಿಕೆಟ್

87 ಟೆಸ್ಟ್

1010

373

262ಏಕದಿನ

969

416

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.