ಬೆಂಗಳೂರು: ಕನ್ನಡಿಗ ಕರುಣ್ ನಾಯರ್ ಸೊಗಸಾದ ಅರ್ಧಶತಕ (ಔಟಾಗದೆ 92) ದಾಖಲಿಸಿದರು. ಅವರ ಆಟದ ಬಲದಿಂದ ಇಂಡಿಯಾ ರೆಡ್ ತಂಡವು ದುಲೀಪ್ ಟ್ರೋಫಿ ಪಂದ್ಯದ ಎರಡನೇ ದಿನ ಇಂಡಿಯಾ ಬ್ಲೂ ವಿರುದ್ಧ ಎರಡು ವಿಕೆಟ್ಗೆ 163 ರನ್ ಗಳಿಸಿದೆ. ಈ ಪಂದ್ಯಕ್ಕೂ ಮಳೆ ಕಾಡಿತು.

ಆಲೂರು ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ರೆಡ್ ತಂಡ, ಅಭಿಮನ್ಯು ಈಶ್ವರನ್ (0) ವಿಕೆಟ್ ಅನ್ನು ಬೇಗ ಕಳೆದುಕೊಂಡಿತು.

ಬಳಿಕ ಕರುಣ್ ಮತ್ತು ನಾಯಕ ಪ್ರಿಯಾಂಕ್ ಪಾಂಚಾಲ್ (15) ದಿಟ್ಟ ಆಡ ಆಡಿದರು. 15 ಓವರ್ಗಳಲ್ಲಿ 40 ರನ್ ಸೇರಿಸಿದರು. ಮಧ್ಯಮವೇಗಿ ದಿವೇಶ್ ಪಠಾಣಿಯಾ ಅವರು ಪಾಂಚಾಲ್ ವಿಕೆಟ್ ಉರುಳಿಸಿದರು. ಅಂಕಿತ್ ಕಲ್ಸಿ (ಔಟಾಗದೆ 48) ಹಾಗೂ ಕರುಣ್ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 120 ರನ್ ಪೇರಿಸಿದರು. 189 ಎಸೆತಗಳನ್ನು ಎದುರಿಸಿದ ಕರುಣ್ ಇನಿಂಗ್ಸ್ನಲ್ಲಿ 9 ಬೌಂಡರಿ ಇದ್ದವು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ರೆಡ್: 68 ಓವರ್ಗಳಲ್ಲಿ 2 ವಿಕೆಟ್ಗೆ 163 (ಕರುಣ್ ನಾಯರ್ ಔಟಾಗದೆ 92, ಅಂಕಿತ್ ಕಲ್ಸಿ ಔಟಾಗದೆ 48; ದಿವೇಶ್ ಪಠಾಣಿಯಾ 27ಕ್ಕೆ 1, ಅನಿಕೇತ್ ಚೌಧರಿ 29ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.