ಮ್ಯಾಂಚೆಸ್ಟರ್: ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದ ಆಂತಿಮ ದಿನದಾಟ ಮಳೆಯಿಂದಾಗಿ ರದ್ದುಗೊಂಡಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡ ಕಾರಣ ಆಸ್ಟ್ರೇಲಿಯಾ, ಆ್ಯಷಸ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ನಾಲ್ಕು ಪಂದ್ಯಗಳ ಬಳಿಕ ಆಸ್ಟ್ರೇಲಿಯಾ 2–1 ರಲ್ಲಿ ಮುನ್ನಡೆ ಸಾಧಿಸಿದೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2–2 ಸಮಬಲ ಸಾಧಿಸುವ ಇಂಗ್ಲೆಂಡ್ನ ಕನಸಿಗೆ ಮಳೆ ಅಡ್ಡಿಯಾಯಿತು. ಇದರಿಂದ ಬೆನ್ ಸ್ಟೋಕ್ಸ್ ಬಳಗವು ಐದು ಪಂದ್ಯಗಳ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿತು.

ದಿ ಓವಲ್ನಲ್ಲಿ ಮುಂದಿನ ವಾರ ನಡೆಯಲಿರುವ ಅಂತಿಮ ಟೆಸ್ಟ್ಅನ್ನು ಇಂಗ್ಲೆಂಡ್ ಗೆದ್ದರೂ ಸರಣಿ 2–2 ರಲ್ಲಿ ಸಮಬಲ ಆಗಲಿದೆ. ಕಳೆದ ಬಾರಿಯ ಸರಣಿ ಆಸ್ಟ್ರೇಲಿಯಾ ಗೆದ್ದಿರುವ ಕಾರಣ, ಆ್ಯಷಸ್ ಟ್ರೋಫಿಯನ್ನು ಪ್ಯಾಟ್ ಕಮಿನ್ಸ್ ಬಳಗ ತನ್ನಲ್ಲೇ ಉಳಿಸಿಕೊಳ್ಳಲಿದೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 317 ರನ್ ಗಳಿಸಿದ್ದರೆ, ಇಂಗ್ಲೆಂಡ್ 592 ರನ್ ಪೇರಿಸಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ಗಳಿಗೆ 214 ರನ್ ಗಳಿಸಿತ್ತು. ಭಾನುವಾರ ಒಂದೂ ಎಸೆತದ ಆಟ ನಡೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.