ಲಂಡನ್: ಭದ್ರತಾ ಕಾರಣಗಳಿಗಾಗಿ ನ್ಯೂಜಿಲ್ಯಾಂಡ್ ತಂಡ ಪಾಕ್ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಕೂಡ ಪಾಕ್ ಪ್ರವಾಸ ರದ್ದುಗೊಳಿಸಿದೆ.

ಇಂಗ್ಲೆಂಡ್ ಪುರಷರು ಮತ್ತು ವನಿತೆಯರ ತಂಡಗಳೆರಡರ ಮುಂಬರುವ ಪಾಕ್ ಪ್ರವಾಸವನ್ನು ರದ್ದುಗೊಳಿಸಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ನಿರ್ಧಾರ ಕೈಗೊಂಡಿದ್ದಾರೆ.

ಅಕ್ಟೋಬರ್ 13 ಮತ್ತು 14 ರಂದು ಪುರುಷರ ತಂಡವು ಎರಡು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಬೇಕಿತ್ತು. ಮಹಿಳೆಯರು ಅಕ್ಟೋಬರ್ 17, 19 ಮತ್ತು 21 ರಂದು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದರು.

ಎಲ್ಲಾ ಪಂದ್ಯಗಳು ರಾವಲ್ಪಿಂಡಿಯಲ್ಲಿ ನಿಗದಿಯಾಗಿದ್ದವು.

‘ಈ ಪ್ರದೇಶಕ್ಕೆ ಪ್ರಯಾಣಿಸುವುದರ ಬಗ್ಗೆ ಆತಂಕ ವ್ಯಕ್ತವಾಗಿರುವುದು ನಮಗೆ ತಿಳಿದಿದೆ. ಕೋವಿಡ್ ಪರಿಸರದಲ್ಲೂ ಈಗಾಗಲೇ ದೀರ್ಘಾವಧಿಯ ಕಾರ್ಯಾಚರಣೆಯನ್ನು ನಿಭಾಯಿಸಿದ ತಂಡಕ್ಕೆ ಮುಂದಿನ ಪ್ರವಾಸವು ಮತ್ತಷ್ಟು ಒತ್ತಡವನ್ನು ನೀಡುತ್ತದೆ ಎಂದು ನಾವು ನಂಬಿದ್ದೇವೆ,’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.