ಬ್ರಿಸ್ಬೇನ್: ಭಾರತ ತಂಡದ ಯುವ ಆಟಗಾರರು ಆಸ್ಟ್ರೇಲಿಯಾ ಎದುರಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ತೋರಿದ ಧೈರ್ಯ, ಸಾಹಸ ಮತ್ತು ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದ ಕೋಚ್ ರವಿಶಾಸ್ತ್ರಿ ಪಂದ್ಯದ ನಂತರ ಡ್ರೆಸಿಂಗ್ ಕೊಠಡಿಯಲ್ಲಿ ಆಡಿದ ಮಾತುಗಳು ತಂಡದ ವಿಶ್ವಾಸವನ್ನು ನೂರ್ಮಡಿಗೊಳಿಸಿದೆ.

ಪಂದ್ಯ ಗೆದ್ದ ನಂತರ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಡ್ರೆಸಿಂಗ್ ಕೊಠಡಿಯಲ್ಲೂ ಪರಸ್ಪರ ಮೆಚ್ಚುಗೆಯ ನುಡಿಗಳನ್ನು ಆಡಿದ್ದರು. ಅಪ್ಪಿಕೊಂಡು ಅಭಿನಂದಿಸಿದ್ದರು. ಈ ಸಂದರ್ಭದಲ್ಲಿ ಮೂರು ನಿಮಿಷ ಮಾತನಾಡಿದ ರವಿಶಾಸ್ತ್ರಿ ‘ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ನಿಮ್ಮನ್ನು ಕೊಂಡಾಡಲಿದೆ’ ಎಂದು ಹೇಳಿದ್ದರು.

328 ರನ್ಗಳ ಗೆಲುವಿನ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಭಾರತ ಗಾಬಾ ಕ್ರೀಡಾಂಗಣದಲ್ಲಿ ಮೊದಲ ಜಯ ಸಾಧಿಸಿತ್ತು. ಈ ಮೂಲಕ ಬಾರ್ಡರ್–ಗಾವಸ್ಕರ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆತಿಥೇಯರು 32 ವರ್ಷಗಳ ನಂತರ ಇಲ್ಲಿ ಮೊದಲ ಸೋಲು ಕಂಡಿದ್ದರು.

’ಮೊದಲ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ 36 ರನ್ಗಳಿಗೆ ಆಲೌಟಾದ ನಂತರ ಗಾಯದ ಸಮಸ್ಯೆಯೂ ತಂಡವನ್ನು ಕಾಡಿತ್ತು. ಅದ್ಯಾವುದನ್ನೂ ಲೆಕ್ಕಿಸದೆ ನೀವು ತೋರಿದ ಸಾಮರ್ಥ್ಯ ಅಸಾಮಾನ್ಯ. ಈ ಗೆಲುವನ್ನು ಎಂದೂ ಮರೆಯಬೇಡಿ. ಇದು ಸಂಭ್ರಮಿಸುವ ಕಾಲ’ ಎಂದು ರವಿಶಾಸ್ತ್ರಿ ಭಾವುಕರಾಗಿ ಹೇಳುವಾಗ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಸಮೀಪದಲ್ಲೇ ನಿಂತು ನಗೆಸೂಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.