ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಶನಿವಾರ ವಿರಾಟ್ ಕೊಹ್ಲಿ ಅವರ ವರ್ತನೆಯ ಕುರಿತು. ವಿರಾಟ್ ಕೊಹ್ಲಿ ಅವರ ವರ್ತನೆಯನ್ನು ನಾನು ಇಷ್ಟಪಡುತ್ತೇನೆ. ಆದರೆ ತುಂಬಾ ಜಗಳವಾಡುತ್ತಾರೆ,’ ಎಂದು ಅವರು ತಿಳಿಸಿದ್ದಾರೆ.

ಟಿ20, ಏಕದಿನ ಕ್ರಿಕೆಟ್ನ ನಾಯಕತ್ವದ ವಿಚಾರವಾಗಿ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಶೀಥಲ ಸಮರ ನಡೆಯುತ್ತಿದೆ.

ಈ ಮಧ್ಯೆ ಗಂಗೂಲಿ ಶನಿವಾರ ಕೊಹ್ಲಿ ವರ್ತನೆಯ ಬಗ್ಗೆ ಮಾತನಾಡಿದ್ದಾರೆ. ‘ನೀವು ಯಾವ ಆಟಗಾರನ ವರ್ತನೆಯನ್ನು ಹೆಚ್ಚು ಇಷ್ಟಪಡುತ್ತೀರಿ’ ಎಂದು ಗುರುಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ.

ಇದಕ್ಕೆ ಉತ್ತರಿಸಿರುವ ಗಂಗೂಲಿ, ನನಗೆ ವಿರಾಟ್ ಕೊಹ್ಲಿ ಅವರ ವರ್ತನೆ ಇಷ್ಟವಾಗುತ್ತದೆ. ಆದರೆ, ಅವರು ಹೆಚ್ಚು ಜಗಳವಾಡುತ್ತಾರೆ ಎಂದು ಹೇಳಿದ್ದಾರೆ.

ನೀವು ಜೀವನದಲ್ಲಿ ಒತ್ತಡವನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಗಂಗೂಲಿ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ‘ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಹೆಂಡತಿ ಮತ್ತು ಗೆಳತಿಯಿಂದ ಮಾತ್ರ ಒತ್ತಡ ಉಂಟಾಗುತ್ತದೆ,’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.