ಫ್ಲಾರಿಡಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಭಾರತ ಹಾಗೂ ಕೆನಡಾ ನಡುವಣ ಪಂದ್ಯ ಒಂದೂ ಎಸೆತವನ್ನು ಕಾಣದೇ ರದ್ದುಗೊಂಡಿದೆ.

ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮೈದಾನ ತೇವಗೊಂಡಿತ್ತು. ಹಲವು ಸಲ ಮೈದಾನ ಪರಿಶೀಲಿಸಿದ ಅಧಿಕೃತರು ಅಂತಿಮವಾಗಿ ಪಂದ್ಯವನ್ನು ಕೈಬಿಡಲು ನಿರ್ಧರಿಸಿದರು.

ಇದಕ್ಕೆ ಇತ್ತಂಡಗಳ ನಾಯಕರು ಒಪ್ಪಿಗೆ ಸೂಚಿಸಿದರು. ಇದರಿಂದಾಗಿ ಟಾಸ್ ಕೂಡ ಕಾಣದೇ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಇತ್ತಂಡಗಳಿಗೆ ಸಮಾನ ಒಂದು ಅಂಕವನ್ನು ಹಂಚಿಕೊಳ್ಳಲಾಗಿದೆ. ಇದರೊಂದಿಗೆ 'ಎ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟೀಮ್ ಇಂಡಿಯಾ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಿದೆ.

ರೋಹಿತ್ ಶರ್ಮಾ ಬಳಗವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಒಟ್ಟು ಏಳು ಅಂಕಗಳನ್ನು ಕಲೆ ಹಾಕಿದೆ.

ಇದೇ ಗುಂಪಿನಲ್ಲಿ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಅಮೆರಿಕ, ಒಟ್ಟು ಐದು ಅಂಕಗಳೊಂದಿಗೆ ಎರಡನೇ ತಂಡವಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

ಪಾಕಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ನಿರ್ಗಮಿಸಿವೆ. ಇತ್ತಂಡಗಳು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

'ಎ' ಗುಂಪಿನ ಅಂಕಪಟ್ಟಿ ಇಂತಿದೆ:
.T20 WC: ಅಮೆರಿಕಕ್ಕೆ 5 ರನ್ ಪೆನಾಲ್ಟಿ, ಅರ್ಷದೀಪ್ ದಾಖಲೆ, ಕೊಹ್ಲಿ ಗೋಲ್ಡನ್ ಡಕ್.T20 World Cup: ಭಾರತ ಸೇರಿದಂತೆ ಸೂಪರ್ ಎಂಟರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.