ಮೊಹಾಲಿ: ರೋಹಿತ್ ಶರ್ಮಾ ಅವರು ಹದಿನಾಲ್ಕು ತಿಂಗಳುಗಳ ನಂತರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಕಣಕ್ಕೆ ಮರಳಲು ಮೊಹಾಲಿಯಲ್ಲಿ ವೇದಿಕೆ ಸಿದ್ಧವಾಗಿದೆ.

ಗುರುವಾರ ಇಲ್ಲಿ ನಡೆಯಲಿರುವ ಅಫ್ಗಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ನಾಯಕತ್ವದ ತಂಡ ಆಡಲಿದೆ.

ಈ ಸರಣಿಯ ಮೂಲಕ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರಿಬ್ಬರೂ ಚುಟುಕು ಮಾದರಿಗೆ ಮರಳುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ವಿರಾಟ್ ಆಡುತ್ತಿಲ್ಲ. ನಂತರದ ಎರಡು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ. ರೋಹಿತ್ ಮತ್ತು ವಿರಾಟ್ ಅವರಿಬ್ಬರೂ ಎರಡು ವರ್ಷಗಳ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಿದ್ದರು. ನಂತರ ಇಲ್ಲಿಯವರೆಗೂ ಅವರು ಟಿ20 ಸರಣಿಗಳಲ್ಲಿ ವಿಶ್ರಾಂತಿ ಪಡೆದಿದ್ದರು.

ರೋಹಿತ್ ಬಳಗದಲ್ಲಿ ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಐಪಿಎಲ್ ಮತ್ತು ಇತ್ತೀಚಿನ ಕೆಲವು ಅಂತರರಾಷ್ಟ್ರೀಯ ಸರಣಿಗಳಲ್ಲಿ ಮಿಂಚಿದ್ದ ರಿಂಕು ಸಿಂಗ್, ತಿಲಕ್ ವರ್ಮ್, ಜಿತೇಶ್ ಶರ್ಮಾ, ಬೌಲರ್‌ಗಳಾದ ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್ ಅವರೂ ಈ ತಂಡದಲ್ಲಿದ್ದಾರೆ. ಅವರಿಗೂ ಆಯ್ಕೆಗಾರರ ಗಮನ ಸೆಳೆಯಲು ಇದು ಉತ್ತಮ ಅವಕಾಶವಾಗಿದೆ.

ಕೆ.ಎಲ್. ರಾಹುಲ್ ವಿಶ್ರಾಂತಿ ಪಡೆದಿರುವುದರಿಂದ ವಿಕೆಟ್‌ಕೀಪಿಂಗ್ ಹೊಣೆಯು ಯುವ ಆಟಗಾರ ಜಿತೇಶ್ ಶರ್ಮಾ ಅಥವಾ ಅನುಭವಿ ಸಂಜು ಸ್ಯಾಮ್ಸನ್ ಅವರ ಹೆಗಲಿಗೆ ಬೀಳಲಿದೆ. ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಆಯ್ಕೆಯಾಗಿಲ್ಲ. ಕುಲದೀಪ್ ಯಾದವ್, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ ವಿಭಾಗದ ಹೊಣೆ ನಿಭಾಯಿಸುವರು.

ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಉತ್ತಮವಾಗಿ ಆಡುವವರನ್ನೂ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.

ಭಾರತ ತಂಡಕ್ಕ ಹೋಲಿಸಿದರೆ ಅನುಭವದ ಕೊರತೆ ಇರುವ ಅಫ್ಗಾನಿಸ್ತಾನ ತಂಡವನ್ನು ಯಾವುದೇ ಹಂತದಲ್ಲಿಯೂ ಹಗುರವಾಗಿ ಪರಿಗಣಿಸುವಂತಿಲ್ಲ. ಕಳೆದ ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಅಫ್ಗಾನಿಸ್ತಾನ ತಂಡವು ಘಟಾನುಘಟಿ ತಂಡಗಳಿಗೆ ಸೋಲುಣಿಸಿತ್ತು. ಹಂತಹಂತವಾಗಿ ಬೆಳೆಯುತ್ತಿರುವ ತಂಡವು ಆತಿಥೇಯ ಭಾರತಕ್ಕೆ ಕಠಿಣ ಪೈಪೋಟಿಯೊಡ್ಡುವ ಛಲದಲ್ಲಿದೆ.

ಆದರೆ ಈ ತಂಡದ ಪ್ರಮುಖ ಸ್ಪಿನ್–ಆಲ್‌ರೌಂಡರ್ ರಶೀದ್ ಖಾನ್ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಆದರೆ ಕೀಪರ್–ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್, ರೆಹಮತ್ ಶಾ, ಆಲ್‌ರೌಂಡರ್ ಮುಜೀಬ್ ಉರ್ ರೆಹಮಾನ್, ಅಜ್ಮತ್‌ವುಲ್ಲಾ ಒಮರ್‌ಝೈ, ನವೀನ್ ಉಲ್ ಹಕ್ ಮತ್ತು ನಾಯಕ ಇಬ್ರಾಹಿಂ ಝದ್ರಾನ್ ಅವರು ಉತ್ತಮವಾಗಿ ಆಡಬಲ್ಲರು.

ಪ್ರಥಮ ದ್ವಿಪಕ್ಷೀಯ ಸರಣಿ

ಅಫ್ಗಾನಿಸ್ತಾನ ಮತ್ತು ಭಾರತ ತಂಡಗಳು ಮೊದಲ ಬಾರಿಗೆ ಟಿ20 ಕ್ರಿಕೆಟ್ ದ್ವಿಪಕ್ಷೀಯ ಸರಣಿ ಆಡಲಿವೆ. ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಇದುವರೆಗೆ ಉಭಯ ತಂಡಗಳು ಏಷ್ಯಾ ಕಪ್ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗಿದ್ದವು.

ಎರಡೂ ತಂಡಗಳು ಐದು ಬಾರಿ ಮುಖಾಮುಖಿಯಾಗಿವೆ. ನಾಲ್ಕರಲ್ಲಿ ಭಾರತ ಗೆದ್ದಿದೆ. ಒಂದು ಪಂದ್ಯ ರದ್ದಾಗಿತ್ತು. ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅಫ್ಗಾನಿಸ್ತಾನ ತಂಡವು ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿತ್ತು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ತಿಲಕ್ ವರ್ಮಾ ರಿಂಕು ಸಿಂಗ್ ಜಿತೇಶ್ ಶರ್ಮಾ ಸಂಜು ಸ್ಯಾಮ್ಸನ್ (ಇಬ್ಬರೂ ವಿಕೆಟ್‌ಕೀಪರ್) ಶಿವಂ ದುಬೆ ವಾಷಿಂಗ್ಟನ್ ಸುಂದರ್ ಅಕ್ಷರ್ ಪಟೇಲ್ ರವಿ ಬಿಷ್ಣೋಯಿ ಕುಲದೀಪ್ ಯಾದವ್ ಆರ್ಷದೀಪ್ ಸಿಂಗ್ ಆವೇಶ್ ಖಾನ್ ಮುಕೇಶ್ ಕುಮಾರ್.

ಅಫ್ಗಾನಿಸ್ತಾನ: ಇಬ್ರಾಹಿಂ ಝದ್ರಾನ್ (ನಾಯಕ) ರೆಹಮಾನುಲ್ಲಾ ಗುರ್ಬಾಜ್ ಇಕ್ರಮ್ ಅಲಿಖಿಲ್ (ಇಬ್ಬರೂ ವಿಕೆಟ್‌ಕೀಪರ್) ಹಜರತ್ ಉಲ್ಲಾ ಝಝೈ ರೆಹಮತ್ ಶಾ ನಜೀಬುಲ್ಲಾ ಝದ್ರಾನ್ ಮೊಹಮ್ಮದ್ ನಬಿ ಕರೀಂ ಜನತ್ ಅಜ್ಮತ್‌ವುಲ್ಲಾ ಒಮರ್‌ಝೈ ಶರಾಫುದ್ದೀನ್ ಅಶ್ರಫ್ ಮುಜೀಬ್ ಉರ್ ರೆಹಮಾನ್ ಫಜಲ್ ಹಕ್ ಫಾರೂಕಿ ಫರೀದ್ ಅಹಮದ್ ನವೀನ್ ಉಲ್ ಹಕ್ ನೂರ್ ಅಹಮದ್ ಮೊಹಮ್ಮದ್ ಸಲೀಂ ಖೈಸ್ ಅಹಮದ್ ಗುಲಾಬದಿನ್ ನೈಬ್.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಪೋರ್ಟ್ಸ್ 18 ಹಾಗೂ ಜಿಯೊ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.