ನಾಗಪುರ: ಒತ್ತಡದ ಸಮಯದಲ್ಲಿ ಛಲಭರಿತ ಆಟವಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ರೋಹಿತ್ ಶರ್ಮಾ ಸೊಗಸಾದ ಶತಕ ಗಳಿಸಿ ಸಂಭ್ರಮಿಸಿದರು.

ನಾಯಕನ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬಾರ್ಡರ್– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 144 ರನ್‌ಗಳ ಮುನ್ನಡೆ ಗಳಿಸಿದ್ದು, ಆಸ್ಟ್ರೇಲಿಯಾ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ.

ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರದ ಆಟದ ಅಂತ್ಯಕ್ಕೆ ಆತಿಥೇಯ ತಂಡ 7 ವಿಕೆಟ್‌ಗಳಿಗೆ 321 ರನ್ ಗಳಿಸಿದೆ. ರವೀಂದ್ರ ಜಡೇಜ (66) ಮತ್ತು ಅಕ್ಷರ್ ಪಟೇಲ್ (52) ಅಜೇಯ ಅರ್ಧಶತಕಗಳ ಮೂಲಕ ಎದುರಾಳಿ ತಂಡವನ್ನು ಕಾಡಿದರು.

ಬೌಲಿಂಗ್‌ಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ರನ್ ಗಳಿಸುವುದು ಕಷ್ಟಕರವಾಗಿತ್ತು. ಆದರೂ ರೋಹಿತ್ (120) ಆಕರ್ಷಕ ಹೊಡೆತಗಳ ಮೂಲಕ ಮಿಂಚಿದರು. 212 ಎಸೆತಗಳ ಇನಿಂಗ್ಸ್ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಸುಮಾರು ಆರು ಗಂಟೆ ಕ್ರೀಸ್‌ನಲ್ಲಿದ್ದ ಅವರು ಸ್ಪಿನ್ ಮತ್ತು ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 81ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಅವರ ಸುಂದರ ಎಸೆತದಲ್ಲಿ ಔಟಾದರು.

ಟೆಸ್ಟ್‌ನಲ್ಲಿ ರೋಹಿತ್ ಗಳಿಸಿದ ಒಂಬತ್ತನೇ ಶತಕ ಇದು. ನಾಯಕನಾಗಿ ಕ್ರಿಕೆಟ್‌ನ ಎಲ್ಲ ಮೂರು ಮಾದರಿಗಳಲ್ಲಿ ಶತಕ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಗೌರವಕ್ಕೆ ಪಾತ್ರರಾದರು. ಮೂರೂ ಮಾದರಿಗಳಲ್ಲಿ ಹಲವು ವರ್ಷ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಿಗೂ ಈ ಸಾಧನೆ ಮಾಡಲು
ಆಗಿರಲಿಲ್ಲ.

ರೋಹಿತ್ ಮತ್ತು ಜಡೇಜ ಆರನೇ ವಿಕೆಟ್‌ಗೆ 61 ರನ್ ಸೇರಿಸಿದರೆ, ಜಡೇಜ–ಅಕ್ಷರ್ ಜೋಡಿ ಮುರಿಯದ ಎಂಟನೇ ವಿಕೆಟ್‌ಗೆ ಈಗಾಗಲೇ 81 ರನ್ ಕಲೆಹಾಕಿದೆ. ಬೌಲಿಂಗ್‌ನಲ್ಲಿ ಮಿಂಚಿದ್ದ ಜಡೇಜ, ಬ್ಯಾಟ್ ಮೂಲಕವೂ ಪ್ರವಾಸಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಭಾರತ ಎರಡನೇ ದಿನದಾಟದಲ್ಲಿ 244 ರನ್ ಪೇರಿಸಿತು.

ಮರ್ಫಿ ಮ್ಯಾಜಿಕ್: ಒಂದು ವಿಕೆಟ್‌ಗೆ 77 ರನ್‌ಗಳಿಂದ ಆಟ ಮುಂದುವರಿಸಿದ್ದ ಭಾರತ, ಮೊದಲ ಎರಡು ಅವಧಿಗಳಲ್ಲಿ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡಿತು. ಚೊಚ್ಚಲ ಪಂದ್ಯವನ್ನಾಡಿದ ಟಾಡ್ ಮರ್ಫಿ (82ಕ್ಕೆ 5) ಕೈಚಳಕ ಮೆರೆದರು.

ಆರ್.ಅಶ್ವಿನ್ ಅವರನ್ನು ಔಟ್ ಮಾಡಿ ಎರಡನೇ ದಿನದಾಟದಲ್ಲಿ ವಿಕೆಟ್ ಬೇಟೆ ಶುರು ಮಾಡಿದ ಮರ್ಫಿ, ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸಿದರು. ‘ಟಿ20 ಸ್ಪೆಶಲಿಸ್ಟ್’ ಸೂರ್ಯಕುಮಾರ್ ಯಾದವ್ ವಿಫಲರಾದರು. ನೇಥನ್ ಲಯನ್ ಎಸೆತದಲ್ಲಿ ಅವರು ಬೌಲ್ಡ್ ಆದರು.

ಶ್ರೀಕರ್ ಭರತ್ ಅವರಿಗೂ ಮರ್ಫಿ ಬೌಲಿಂಗ್‌ನ ಮರ್ಮ ಅರಿಯಲು ಆಗಲಿಲ್ಲ. ಇದರಿಂದ ಸ್ಕೋರ್ 240 ರನ್ ಆಗುವಷ್ಟರಲ್ಲಿ ಏಳು ವಿಕೆಟ್‌ಗಳು ಬಿದ್ದವು. ಭಾರತ ತಂಡವನ್ನು 300 ರನ್‌ಗಳ ಒಳಗೆ ಕಟ್ಟಿಹಾಕುವ ಕನಸನ್ನು ಆಸ್ಟ್ರೇಲಿಯಾ ಬೌಲರ್‌ಗಳು ಕಂಡಿದ್ದರು. ಆದರೆ ಆದರೆ ಜಡೇಜ ಮತ್ತು ಅಕ್ಷರ್ ಅದಕ್ಕೆ ಅವಕಾಶ ನೀಡಲಿಲ್ಲ. ದಿನದ ಅಂತಿಮ ಅವಧಿಯಲ್ಲಿ ಇಬ್ಬರೂ ಎಚ್ಚರಿಕೆಯಿಂದ ಆಡಿದರು.

ದಿನದಾಟದ ಕೊನೆಯ ಓವರ್‌ನಲ್ಲಿ ಜಡೇಜಗೆ ಜೀವದಾನ ಲಭಿಸಿತು. ಲಯನ್ ಎಸೆತದಲ್ಲಿ ಮೊದಲ ಸ್ಲಿಪ್‌ನಲ್ಲಿ ಸ್ಟೀವನ್ ಸ್ಮಿತ್ ಕ್ಯಾಚ್ ಕೈಚೆಲ್ಲಿದರು. 37 ಓವರ್ ಬೌಲರ್ ಮಾಡಿದ ಲಯನ್‌ಗೆ ದಕ್ಕಿದ್ದು ಒಂದು ವಿಕೆಟ್ ಮಾತ್ರ.

ಸ್ಕೋರ್ ಕಾರ್ಡ್

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ 177 (63.5 ಓವರ್)

ಭಾರತ 7ಕ್ಕೆ 321 (114 ಓವರ್)

(ಗುರುವಾರದ ಆಟದಲ್ಲಿ 1 ವಿಕೆಟ್‌ಗೆ 77)

ರೋಹಿತ್ ಬಿ ಕಮಿನ್ಸ್ 120 (212 ಎ., 4X15, 6X2), ಅಶ್ವಿನ್ ಎಲ್‌ಬಿಡಬ್ಲ್ಯು ಬಿ ಮರ್ಫಿ 23 (62 ಎ., 4X2, 6X1), ಪೂಜಾರ ಸಿ ಬೊಲಾಂಡ್ ಬಿ
ಮರ್ಫಿ 7 (14 ಎ., 4X1), ಕೊಹ್ಲಿ ಸಿ ಕ್ಯಾರಿ ಬಿ ಮರ್ಫಿ 12 (26 ಎ., 4X2), ಸೂರ್ಯಕುಮಾರ್ ಬಿ ಲಯನ್ 8 (20 ಎ., 4X1), ಜಡೇಜ ಬ್ಯಾಟಿಂಗ್ 66 (170 ಎ., 4X9), ಭರತ್ ಎಲ್‌ಬಿಡಬ್ಲ್ಯು ಬಿ ಮರ್ಫಿ 8 (10 ಎ., 4X1), ಅಕ್ಷರ್ ಬ್ಯಾಟಿಂಗ್ 52 (102 ಎ., 4X8)

ಇತರೆ: 5 (ಲೆಗ್‌ಬೈ 2, ನೋಬಾಲ್ 3)

ವಿಕೆಟ್ ಪತನ: 2–118 (ಆರ್.ಅಶ್ವಿನ್; 40.1), 3–135 (ಚೇತೇಶ್ವರ ಪೂಜಾರ; 44.1), 4–151 (ವಿರಾಟ್ ಕೊಹ್ಲಿ; 52.1), 5–168 (ಸೂರ್ಯಕುಮಾರ್ ಯಾದವ್; 59.1), 6–229 (ರೋಹಿತ್ ಶರ್ಮಾ; 80.4), 7–240 (ಶ್ರೀಕರ್ ಭರತ್;
83.1)

ಬೌಲಿಂಗ್: ಪ್ಯಾಟ್ ಕಮಿನ್ಸ್ 18–2–74–1,ಸ್ಕಾಟ್ ಬೊಲಾಂಡ್ 17–4–34–0, ನೇಥನ್ ಲಯನ್ 37–10–98–1, ಟಾಡ್ ಮರ್ಫಿ 36–9–82–5, ಮಾರ್ನಸ್ ಲಾಬುಷೇನ್ 5–0–24–0, ಮ್ಯಾಟ್ ರೆನ್‌ಷಾ 1–0–7–0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.