ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಅಟದ ಬಗ್ಗೆ ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಯಾನ್ ಲಾರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂತ್ ತಮ್ಮ ಆಟದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿದ್ದು, ಕ್ರೀಡಾಂಗಣದ ಎಲ್ಲ ಭಾಗದಲ್ಲೂ ರನ್ ಗಳಿಸಬಲ್ಲರು. ಅವರು ಐಪಿಎಲ್–2020ಯಲ್ಲಿ ಕ್ಯಾಪಿಟಲ್ಸ್‌ನ ದೊಡ್ಡ ಆಸ್ತಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂತ್ ಈ ಬಾರಿ ಆಡಿರುವ ಐದು ಪಂದ್ಯಗಳಲ್ಲಿ ಕ್ರಮವಾಗಿ 31, ಅಜೇಯ 37, 28,38, 37 ರನ್ ಕಲೆಹಾಕಿದ್ದಾರೆ.

ಸ್ಟಾರ್‌ಸ್ಪೋರ್ಟ್ಸ್ ಕ್ರೀಡಾ ವಾಹಿನಿಗೆ ಮಾತನಾಡಿರುವ ಲಾರಾ, ‘ಅವರು (ಪಂತ್) ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಆಸ್ತಿ ಎಂದು ನನಗನಿಸುತ್ತದೆ. ಇದೀಗ ಅವರು ತಮ್ಮ ಆಟದಲ್ಲಿ ಸಾಕಷ್ಟು ಸುಧಾರಣೆ ತಂದುಕೊಂಡಿದ್ದಾರೆ. ನಾನು ಅವರ ಬ್ಯಾಟಿಂಗ್ ಬಗ್ಗೆ ಮತ್ತು ಅದರಲ್ಲಿ ಮಾಡಿಕೊಂಡಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಿದ್ದೇನೆ.ತಕ್ಷಣ ಗಮನಿಸಬಹುದಾದ ಸಂಗತಿಯೆಂದರೆ ಅವರು ಎಲ್ಲ ರೀತಿ ಆಡಲು ಪ್ರಯತ್ನಿಸುತ್ತಿರುವುದು. ಎಲ್ಲ ಎಸೆತಗಳನ್ನೂ ಲೆಗ್ ಸೈಡ್‌ನಲ್ಲಿ ಹೊಡೆಯಲು ನೋಡುತ್ತಿದ್ದರು. ಆದರೆ ಈಗ ಬದಲಾವಣೆಯನ್ನು ಗಮನಿಸಬಹುದು’ ಎಂದು ಹೇಳಿದ್ದಾರೆ.

‘ಕ್ರೀಡಾಂಗಣದ ಎಲ್ಲ ಭಾಗದಲ್ಲೂ ರನ್ ಗಳಿಸುವ ಸಾಮರ್ಥ್ಯ ವೃದ್ಧಿಸಿಕೊಂಡಿದ್ದಾರೆ. ರನ್ ಗಳಿಕೆಯೂ ಗಮನ ಸೆಳೆಯುತ್ತದೆ. ಇದು ಬೌಲರ್‌ಗಳಿಗೆ ಸಾಕಷ್ಟು ತಲೆನೋವು ತಂದಿದೆ.ಈಗ ಅವರು ಸಮತೋಲನದಿಂದ ಕೂಡಿದ ಬ್ಯಾಟ್ಸ್‌ಮನ್ ರೀತಿ ಕಾಣುತ್ತಾರೆ. ಎಕ್ಸ್ಟ್ರಾ ಕವರ್, ಪಾಯಿಂಟ್‌ನಲ್ಲಿಯೂ ರನ್ ಗಳಿಸುತ್ತಿದ್ದಾರೆ. ಇದು ಅವರು ಮಾಡಿಕೊಂಡಿರುವ ದೊಡ್ಡ ಸುಧಾರಣೆಯಾಗಿದೆ. ಈ ಆಟಗಾರ ಇನ್ನೂ ಸಾಕಷ್ಟು ಮುಂದೆ ಸಾಗಲಿದ್ದಾರೆ’ ಎಂದು ಲಾರಾ ಹೇಳಿದ್ದಾರೆ.

ಇದುವರೆಗೆ ಒಟ್ಟು 59 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಪಂತ್, 1 ಶತಕ ಮತ್ತು 11 ಅರ್ಧಶತಕ ಸಹಿತ 1907 ರನ್ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.