ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಪ್ರಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಂತೆ ರೋಹಿತ್ ಶರ್ಮಾ ಕೂಡ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸ್ಥಾನ ತೊರೆಯುವುದಾಗಿ ಭಾವಿಸಿದ್ದೆ ಎಂದು ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

'ಇಎಸ್ಪಿಎನ್ ಕ್ರಿಕ್ಇನ್ಫೋ'ದ ಐಪಿಎಲ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂಜಯ್, ವಿರಾಟ್ ಕೊಹ್ಲಿಯಂತೆ ರೋಹಿತ್ ಶರ್ಮಾ ನಾಯಕತ್ವವನ್ನು ತೊರೆಯುವುದಾಗಿ ನಿರೀಕ್ಷೆ ಮಾಡಿದ್ದೆ. ಆ ಮೂಲಕ ನಿರಾಳರಾಗಿ ಪರಿಪೂರ್ಣ ಬ್ಯಾಟರ್ ಆಗಿ ಆಡಬಹುದಿತ್ತು. ರೋಹಿತ್ ನಾಯಕ ಸ್ಥಾನವನ್ನು ಕೀರನ್ ಪೊಲಾರ್ಡ್ಗೆ ಹಸ್ತಾಂತರಿಸಬಹುದಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ:IPL 2022: ರೋಹಿತ್ ಶರ್ಮಾ 10,000 ಟಿ20 ರನ್ಗಳ ಸರದಾರ

ನಾಯಕತ್ವ ಹೊಣೆಗಾರಿಕೆ ರೋಹಿತ್ ಮೇಲೆ ಹೆಚ್ಚಿನ ಒತ್ತಡವನ್ನು ಬೀರಿದೆ ಎಂದು ಮಂಜ್ರೇಕರ್ ತಿಳಿಸಿದರು. ಕಳೆದ ನಾಲ್ಕೈದು ಆವೃತ್ತಿಗಳಲ್ಲಿ ರೋಹಿತ್ ದಾಖಲೆಯು ಇದನ್ನು ಸಾರುತ್ತಿದೆ. ಬ್ಯಾಟಿಂಗ್ ಸರಾಸರಿ 30ಕ್ಕಿಂತಲೂ ಕಡಿಮೆಯಾಗಿದ್ದು, ಸ್ಟ್ರೈಕ್ರೇಟ್ ಕಡಿಮೆಯಾಗಿದೆ. ಆದರೆ ಭಾರತಕ್ಕಾಗಿ ಆಡುವಾಗ ಉತ್ತಮವಾಗಿ ಆಡುತ್ತಾರೆ ಎಂದು ಹೇಳಿದರು.

ಕಳೆದ ವರ್ಷ ಆರ್ಸಿಬಿ ನಾಯಕತ್ವವನ್ನು ವಿರಾಟ್ ಕೊಹ್ಲಿ ತೊರೆದಿದ್ದರು. ಅಲ್ಲದೆ ಎಲ್ಲ ಮೂರು ಪ್ರಕಾರದಲ್ಲೂ ಟೀಮ್ ಇಂಡಿಯಾ ನಾಯಕತ್ವವನ್ನು ತ್ಯಜಿಸಿದ್ದಾರೆ. ಬಳಿಕ ಟೀಮ್ ಇಂಡಿಯಾ ಕಪ್ತಾನರಾಗಿ ರೋಹಿತ್ ಶರ್ಮಾ ಅವರನ್ನು ನೇಮಕಗೊಳಿಸಲಾಗಿತ್ತು.

ಇದು ರೋಹಿತ್ ಅವರಲ್ಲಿ ಮಾನಸಿಕ ದಣಿವನ್ನುಂಟು ಮಾಡಿದ್ದು, ಐಪಿಎಲ್ನಲ್ಲಿ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ರೇಮ್ ಸ್ಮಿತ್ ಕೂಡ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.