ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಹತ್ತು ಫ್ರಾಂಚೈಸಿಗಳಿಗೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಶನಿವಾರ ನಡೆದ ಐಪಿಎಲ್ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಐಪಿಎಲ್ 2025ರ ಆವೃತ್ತಿಗಾಗಿ ಫ್ರಾಂಚೈಸಿಗೆ ಪರ್ಸ್ ಮೊತ್ತವನ್ನು ₹ 120 ಕೋಟಿಗೆ ನಿಗದಿಪಡಿಸಲಾಗಿದೆ. ಅದರಲ್ಲಿ ₹75 ಕೋಟಿಯನ್ನು ತಂಡವು ಉಳಿಸಿಕೊಳ್ಳುವ ಆರು ಆಟಗಾರರಿಗೆ ವಿನಿಯೋಗಿಸಬೇಕಿದೆ. ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್‌ಗೆ ಮತ್ತೆ ಅವಕಾಶ ನೀಡಲಾಗಿದೆ.

ಕನಿಷ್ಠ ಐದು ಕ್ಯಾಲೆಂಡರ್ ವರ್ಷಗಳವರೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಎಲ್ಲ ಭಾರತ ಆಟಗಾರರನ್ನು ‘ಅನ್‌ಕ್ಯಾಪ್ಡ್ ಆಟಗಾರರು’ ಎಂದು ಪರಿಗಣಿಸಲು ಬಿಸಿಸಿಐ ನಿರ್ಧರಿಸಿದೆ. ತಂಡವು ಉಳಿಸಿಕೊಳ್ಳುವ ಆಟಗಾರರಲ್ಲಿ ಒಬ್ಬ ಅನ್‌ಕ್ಯಾಪ್ಡ್ ಆಟಗಾರ ಇರಬೇಕೆಂದು ನಿಯಮ ರೂಪಿಸಿದೆ. ಹೀಗಾಗಿ, ಮಹೇಂದ್ರ ಸಿಂಗ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅನ್‌ಕ್ಯಾಪ್ಡ್ ಆಟಗಾರರ ನಿಯಮದಡಿ ಉಳಿಸಿಕೊಳ್ಳಲು ಅವಕಾಶವಿದೆ.

ಅನ್‌ಕ್ಯಾಪ್ಡ್ ಆಟಗಾರನಿಗೆ ಗರಿಷ್ಠ ₹ 4 ಕೋಟಿ ವಿನಿಯೋಗಿಸಬಹುದಾಗಿದೆ. ಹೀಗಾಗಿ, ಧೋನಿ ಅವರನ್ನು ಚೆನ್ನೈ ತಂಡ ಉಳಿಸಿಕೊಂಡರೂ ಅವರ ಸಂಭಾವಣೆ ಈ ಹಿಂದಿಗಿಂತ ಕಡಿಮೆ ಇರಲಿದೆ. 43 ವರ್ಷದ ಧೋನಿ ಅವರು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕಾಗಿ ಕೊನೆಯ ಬಾರಿ ಆಡಿದ್ದರು.

ಯಾವುದೇ ವಿದೇಶಿ ಆಟಗಾರ ಮೆಗಾ ಹರಾಜಿಗೆ ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಸಾಗರೋತ್ತರ ಆಟಗಾರರು ನೋಂದಾಯಿಸಿಕೊಳ್ಳದಿದ್ದರೆ, ಮುಂದಿನ ವರ್ಷದ ಆಟಗಾರರ ಹರಾಜಿನಲ್ಲಿ ನೋಂದಾಯಿಸಲು ಅವರು ಅನರ್ಹರಾಗುತ್ತಾರೆ.

ಹರಾಜಿನಲ್ಲಿ ತಂಡಕ್ಕೆ ಆಯ್ಕೆಯಾದ ಬಳಿಕ ಗಾಯದ ಅಥವಾ ನಿರ್ದಿಷ್ಟ ಕಾರಣದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್ನಿಂದ ಹಿಂದೆ ಸರಿದರೆ, ಆ ಆಟಗಾರನ ಮೇಲೆ 2 ವರ್ಷಗಳವರೆಗೆ ನಿಷೇಧ ಹೇರುವ ನಿಯಮವನ್ನು ಜಾರಿಗೊಳಿಸಲಾಗಿದೆ.

ಟೂರ್ನಿಯಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದಿನ ವರ್ಷದ ಟೂರ್ನಿಯಲ್ಲಿಯೂ ಮುಂದುವರಿಸಲು ನಿರ್ಧರಿಸಲಾಗಿದೆ. 2023ರ ಟೂರ್ನಿಯಲ್ಲಿ ಈ ನಿಯಮವನ್ನು ಜಾರಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.