ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 15ನೇ ಆವೃತ್ತಿಯ ಟೂರ್ನಿಗಾಗಿ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿದಿವೆ.

ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಫ್ರಾಂಚೈಸ್ಗಳು ತಲಾ 21 ಆಟಗಾರರನ್ನು ಹೊಂದಿವೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸ್ಗಳು ಕ್ರಮವಾಗಿ 20, 19 ಆಟಗಾರರನ್ನು ಹೊಂದಿವೆ. ಮುಂಬೈ ಇಂಡಿಯನ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಲಾ 18 ಆಟಗಾರರನ್ನು ಖರೀದಿಸಿವೆ. ಉಳಿದಂತೆ, ಗುಜರಾತ್ ಟೈಟಾನ್ಸ್ ಬಳಿ 17, ರಾಜಸ್ಥಾನ ರಾಯಲ್ಸ್ ಬಳಿ 14 ಆಟಗಾರರು ಇದ್ದಾರೆ.

ಸದ್ಯ 2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕೋಟಿಕೋಟಿ ಹಣ ಸುರಿದು ಆಟಗಾರರನ್ನು ಖರೀದಿಸಿರುವ ಫ್ರಾಂಚೈಸ್ಗಳು, ಪರ್ಸ್ಗಳಲ್ಲಿಯೂ ಹಣ ಉಳಿಸಿಕೊಂಡಿವೆ.

ಯಾವ ಫ್ರಾಂಚೈಸ್ ಬಳಿ ಎಷ್ಟು ಹಣ?

ಫ್ರಾಂಚೈಸ್

ಹರಾಜಿಗೂ ಮುನ್ನ

ಹರಾಜಿನ ಬಳಿಕ

ಕೋಲ್ಕತ್ತ ನೈಟ್ ರೈಡರ್ಸ್

₹ 48 ಕೋಟಿ

₹ 8.85 ಕೋಟಿ

ಗುಜರಾತ್ ಟೈಟಾನ್ಸ್

₹ 52 ಕೋಟಿ

₹ 8.65 ಕೋಟಿ

ರಾಜಸ್ಥಾನ ರಾಯಲ್ಸ್

₹ 62 ಕೋಟಿ

₹ 8.60 ಕೋಟಿ

ಚೆನ್ನೈ ಸೂಪರ್ಕಿಂಗ್ಸ್

₹ 48 ಕೋಟಿ

₹ 7.15 ಕೋಟಿ

ಪಂಜಾಬ್ ಕಿಂಗ್ಸ್

₹ 72 ಕೋಟಿ

₹ 5.30 ಕೋಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು

₹ 57 ಕೋಟಿ

₹ 5 ಕೋಟಿ

ಸನ್ರೈಸರ್ಸ್ ಹೈದರಾಬಾದ್

₹ 68 ಕೋಟಿ

₹ 2.60 ಕೋಟಿ

ಲಖನೌ ಸೂಪರ್ ಜೈಂಟ್ಸ್

₹ 59 ಕೋಟಿ

₹ 2.20 ಕೋಟಿ

ಮುಂಬೈ ಇಂಡಿಯನ್ಸ್

₹ 48 ಕೋಟಿ

₹ 2.15 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್

₹ 47.5 ಕೋಟಿ

₹ 1.30 ಕೋಟಿ

ಅರುಣೈ ಸಿಂಗ್ ಅವರು ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯ ಕೊನೆಯ ಆಟಗಾರನಾಗಿ ಮಾರಾಟಗೊಂಡರು. ರಾಜಸ್ಥಾನ ರಾಯಲ್ಸ್ ಫ್ರಾಂಚೈಸ್, ಸಿಂಗ್ ಅವರನ್ನು ₹ 20 ಲಕ್ಷ ನೀಡಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

ಇದರೊಂದಿಗೆ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾಗಿದೆ.

ರವಿಕುಮಾರ್ ಸಮರ್ಥ್ಗೆ ₹20 ಲಕ್ಷ, ಅಭಿಜಿತ್ ತೋಮರ್ಗೆ ₹40 ಲಕ್ಷ, ಹಾಗೂ ಅಶೋಕ್ ಶರ್ಮಾಗೆ ₹55 ಲಕ್ಷ ನೀಡಿ ಕೆಕೆಆರ್ ತಂಡ ಖರೀದಿಸಿದೆ.

ಶ್ರೀಲಂಕಾ ಕ್ರಿಕೆಟಿಗ ಚಾಮಿಕಾ ಕರುಣಾರತ್ನೆಗೆ ₹50 ಲಕ್ಷ ಮತ್ತು ಭಾರತದ ಬಾಬಾ ಇಂದ್ರಜಿತ್ಗೆ ₹20 ಲಕ್ಷ ನೀಡಿ ಕೆಕೆಆರ್ ತಂಡ ಖರೀದಿ ಮಾಡಿದೆ.

ನ್ಯೂಜಿಲೆಂಡ್ನ ಸ್ಫೋಟಕ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅವರು ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೆ ಉಳಿದಿದ್ದಾರೆ. ಅವರು ಕೆಲ ದಿನಗಳಿಂದ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.

ಆಸ್ಟ್ರೇಲಿಯಾ ಆಟಗಾರ ರಿಲೆ ಮೆರೆಡಿತ್ ಅವರಿಗೆ ₹1 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ.

ವೆಸ್ಟ್ ಇಂಡೀಸ್ ಆಟಗಾರ ಅಲ್ಜಾರಿ ಜೋಸೆಫ್ಗೆ ₹2.4 ಕೋಟಿ ನೀಡಿ ಗುಜರಾತ್ ಟೈಟಾನ್ಸ್ ಖರೀದಿಸಿದೆ.

ಆಸ್ಟ್ರೇಲಿಯಾದ ಆಲೌರೌಂಡರ್ ಸೀನ್ ಅಬಾಟ್ಗೆ ₹2.4 ಕೋಟಿ ನೀಡಿ ಸನ್ರೈಸರ್ಸ್ ಹೈದರಾಬಾದ್ ಖರೀದಿ ಮಾಡಿದೆ.

ಪ್ರಶಾಂತ್ ಸೋಲಂಕಿಗೆ ಚೆನ್ನೈ ಸೂಪರ್ ಕಿಂಗ್ಸ್ ₹1.20 ಕೋಟಿ ನೀಡಿದೆ.

ಚಾಮ ಮಿಲಿಂದ್ಗೆ ₹25 ಲಕ್ಷ ನೀಡಿ ಆರ್ಸಿಬಿ ಖರೀದಿಸಿದೆ.

ಗೋವಾ ಪರ ಆಡುವ ಸುಯಾಶ್ ಪ್ರಭುದೇಸಾಯಿ ಅವರನ್ನು ₹ 30 ಲಕ್ಷ ನೀಡಿ ಆರ್ಸಿಬಿ ಖರೀದಿ ಮಾಡಿದೆ.

ಕರ್ನಾಟಕದ ಪ್ರವೀಣ್ ದುಬೇ ಹಾಗೂ ಸೌರಾಷ್ಟ್ರದ ಪ್ರೇರಕ್ ಮಂಕಡ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ರಾಂಚೈಸ್ಗಳು ಕ್ರಮವಾಗಿ ₹ 50 ಲಕ್ಷ ಮತ್ತು ₹ 20 ಲಕ್ಷ ನೀಡಿ ಖರೀದಿ ಮಾಡಿವೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ವರೆಗೆ ಒಂದೂ ಪಂದ್ಯವಾಡದ ಸಿಂಗಾಪುರ ಪ್ರತಿಭೆ ಟಿಮ್ ಡೇವಿಡ್ ಅವರಿಗಾಗಿ ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ ₹ 8.25 ಕೊಟಿ ವ್ಯಯಿಸಿದೆ.

ಡೇವಿಡ್ಗೆ ₹ 40 ಲಕ್ಷ ಮೂಲ ಬೆಲೆ ಇತ್ತು.

ಇಂಗ್ಲೆಂಡ್ನ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 8 ಕೋಟಿ ನೀಡಿ ಖರೀದಿಸಿದೆ.

ಈಗಾಗಲೇ ಜಸ್ಪ್ರೀತ್ ಅವರನ್ನೊಳಗೊಂಡಿರುವ ಮುಂಬೈ ಬೌಲಿಂಗ್ ಈಗ ಇನ್ನಷ್ಟು ಬಲಿಷ್ಠವಾಗಲಿದೆ.

ಆಸ್ಟ್ರೇಲಿಯಾದ ಆಲ್ರೌಂಡರ್ ಡ್ಯಾನಿಯಲ್ ಸ್ಯಾಮ್ಸ್ ಅವರನ್ನು ಈ ಬಾರಿ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಕಳೆದ ಸಲ ಆರ್ಸಿಬಿ ಪರ ಆಡಿದ್ದ ಅವರಿಗಾಗಿ, ಮುಂಬೈ ₹ 2.6 ಕೋಟಿ ವ್ಯಯಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಪರ ಆಡುವ ಗಯಾನದ ಪ್ರತಿಭೆ ಶೆರ್ಫಾನ್ ರುದರ್ಫೋರ್ಡ್ ಅವರನ್ನು ಆರ್ಸಿಬಿ ತಂಡ ₹ 1 ಕೋಟಿ ನೀಡಿ ಖರೀದಿಸಿದೆ.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಮುನ್ನಡೆಸಿದ್ದ ರಿಶಿ ಧವನ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ತಂಡ ₹ 55 ಲಕ್ಷ ಕೊಟ್ಟು ಕೊಂಡುಕೊಂಡಿದೆ.

ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕದ ಕರುಣ್ ನಾಯರ್ ಅವರನ್ನು ಖರೀದಿಸಲು ಯಾವುದೇ ಪ್ರಾಂಚೈಸ್ ಆಸಕ್ತಿ ತೋರಿಲ್ಲ.

ರಾಜ್ಯಕ್ಕೆ ರಣಜಿ ಗೆದ್ದುಕೊಟ್ಟ ನಾಯಕರಾಗಿರುವ ಕರುಣ್, ದೇಶೀ ಕ್ರಿಕೆಟ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟಿಗ ಡಿವೋನ್ ಕಾನ್ವೆ ಅವರನ್ನು ಚೆನ್ನೈ ತಂಡ ₹ 1 ಕೋಟಿಗೆ ಖರೀದಿಸಿದೆ.

ನ್ಯೂಜಿಲೆಂಡ್ ಕ್ರಿಕೆಟಿಗ ಫಿನ್ ಅಲೆನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸ್, ₹ 80 ಲಕ್ಷ ವ್ಯಯಿಸಿ ಖರೀದಿಸಿದೆ.

19 ವರ್ಷದೊಳಿಗಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಕಣಕ್ಕಿಳಿದಿದ್ದ ರಾಜವರ್ಧನ್ ಹಂಗಾರ್ಗೇಕರ್ ಅವರನ್ನು ಚೆನ್ನೈ ಸೂಪರ್ ಸಿಂಗ್ಸ್ ಪ್ರಾಂಚೈಸ್ ₹ 1.50 ಕೋಟಿ ನೀಡಿ ಖರೀದಿಸಿದೆ.

ಈ ಬಾರಿಯ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಹೀರೋ ಆಗಿ ಮೆರೆದ ರಾಜ್ ಬಾವಾ ಅವರನ್ನು ಪಂಜಾಬ್ ಕಿಂಗ್ಸ್ ಪಡೆ ಬರೋಬ್ಬರಿ ₹ 2 ಕೋಟಿ ನೀಡಿ ಖರೀದಿಸಿದೆ.

ಉಗಾಂಡ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 162 ರನ್ ಚಚ್ಚಿದ್ದ ಬಾವಾ, ಭಾರತ 326 ರನ್ ಗಳ ಭಾರೀ ಜಯ ಸಾಧಿಸಲು ನೆರವಾಗಿದ್ದರು.

2022ರ19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಯಶ್ ಧುಳ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ₹ 50 ಲಕ್ಷ ನೀಡಿ ಖರೀದಿಸಿದೆ.

ಡೆಲ್ಲಿ ತಮ್ಮ ನೆಚ್ಚಿನ ತಂಡ ಎಂದು ಈ ಮೊದಲು ಹೇಳಿಕೊಂಡಿದ್ದರು.

ಹರಾಜು ಪ್ರಕ್ರಿಯೆ ವೇಳೆ ಕುಸಿದು ಬಿದ್ದಿದ್ದ ಹರಾಜುದಾರ ಹಗ್ ಎಡ್ಮೀಡ್ಸ್ ಅವರು ಸದ್ಯ ಚೆನ್ನಾಗಿದ್ದಾರೆ ಎಂದು ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಹಗ್ ಎಡ್ಮೀಡ್ಸ್ ಅವರು ಮಾತನಾಡಿರುವ ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ.

ವೆಸ್ಟ್ ಇಂಡೀಸ್ ತಂಡದ ಪ್ರಮುಖ ವೇಗಿ ಶೇಲ್ಡನ್ ಕಾರ್ಟ್ರೇಲ್ ಮತ್ತು ಆಸ್ಟ್ರೇಲಿಯಾದ ಬೌಲರ್ ನಾಥನ್ ಕಲ್ಟರ್ನೇಲ್ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಲ್ಲ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ನವದೀಪ್ ಸೈನಿ ಅವರನ್ನು ರಾಜಸ್ಥಾನ ರಾಯಲ್ಸ್ ತಂಡವು ₹ 2.60ಕೋಟಿ ನೀಡಿ ಖರೀದಿಸಿದೆ.

ಕಳೆದ ಆವೃತ್ತಿಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಎನಿಸಿದ್ದ ಸಂದೀಪ್ ಶರ್ಮಾ ಈ ಬಾರಿ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಅವರಿಗೆ ₹ 50 ಲಕ್ಷ ನೀಡಲಾಗಿದೆ.

ಬ್ಯಾಟರ್ ಅಂಜಿಕ್ಯ ರಹಾನೆ ಅವರನ್ನು ₹1 ಕೋಟಿ ಮೊತ್ತಕ್ಕೆ ಕೆಕೆಆರ್ ತಂಡವು ಖರೀದಿಸಿದೆ.

ಭಾರತದ ವೇಗಿ ಶಾರ್ದೂಲ್ ಠಾಕೂರ್ ಅವರಿಗೆ ₹10.75 ಕೋಟಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ.

ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಅವರಿಗೆ ₹10 ಕೋಟಿ ನೀಡಿ ರಾಜಸ್ಥಾನ್ ರಾಯಲ್ಸ್ ಖರೀದಿಸಿದೆ.

ಇಂಗ್ಲೆಂಡ್ ಆಟಗಾರ ಜಾನಿ ಬೆಸ್ಟೊಗೆ ₹6.75 ಕೋಟಿ ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಬೆಸ್ಟೊ ಕಳೆದ ಆವೃತ್ತಿಯಲ್ಲಿ ಹೈದರಾಬಾದ್ ತಂಡದ ಪರ ಆಡಿದ್ದರು.

ದಿನೇಶ್ ಕಾರ್ತಿಕ್ ಅವರಿಗೆ ₹5.50 ಕೋಟಿ ನೀಡಿ ಆರ್ಸಿಬಿ ತಂಡ ಖರೀದಿಸಿದೆ.

ವೇಗಿ ಟಿ.ನಟರಾಜನ್ ಅವರನ್ನು ₹4 ಕೋಟಿಗೆ ಸನ್ರೈಸರ್ಸ್ ಹೈದರಾಬಾದ್ ಖರೀದಿಸಿದೆ.

ಟೀಮ್ ಇಂಡಿಯಾದ ವೇಗಿ ದೀಪಕ್ ಚಾಹರ್ ಅವರಗೆ ₹14 ಕೋಟಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಖರೀದಿಸಿದೆ.

ಇಂದು (ಶನಿವಾರ) ಈವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರನಾಗಿ ಇಶಾನ್ ಕಿಶನ್ ಹೊರಹೊಮ್ಮಿದ್ದಾರೆ.

ಹರಾಜುದಾರರಲ್ಲೊಬ್ಬರಾದ ಹಗ್ ಎಡ್ಮೀಡ್ಸ್ ಕುಸಿದು ಬಿದ್ದಿದ್ದು, ಬಿಡ್ಡಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹೊಸ ಪ್ರಾಂಚೈಸ್ ಲಖನೌ ಸೂಪರ್ ಜೈಂಟ್ಸ್ ತಂಡ ದೀಪಕ್ ಹೂಡಾ ಅವರನ್ನು ಖರೀದಿಸಿದೆ.

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಗೆ ಬಲ ತುಂಬಿದ್ದ ಮತ್ತು ಬೌಲಿಂಗ್ನಲ್ಲಿಯೂ ಕೊಡುಗೆ ನೀಡಿದ್ದ ಹೂಡಾ, ₹ 5.75 ಗಿಟ್ಟಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಅತಿಹೆಚ್ಚು ವಿಕೆಟ್ ಉರುಳಿಸಿದ್ದ ಹರ್ಷಲ್ ಪಟೇಲ್ ಅವರನ್ನು ಕೊಂಡುಕೊಳ್ಳುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಅವರಿಗಾಗಿ ₹ 10.75 ಕೋಟಿ ನೀಡಿದೆ.

ಆರಂಭಿಕ ಬ್ಯಾಟರ್ ನಿತೀಶ್ ರಾಣಾ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಕೆಕೆಆರ್ ಯಶಸ್ವಿಯಾಗಿದೆ. ಅವರಿಗೆ ₹ 8 ಕೋಟಿ ನೀಡಲಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ಆಲ್ರೌಂಡರ್ ಹಾಗೂ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶಕೀಬ್ ಅಲ್ಹಸನ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ.

ಕಳೆದ ಆವೃತ್ತಿಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡಿದ್ದ ಜೇಸನ್ ಹೋಲ್ಡರ್ ಅವರಿಗೆ ₹ 8.75 ಕೋಟಿ ನೀಡಿ, ಲಖನೌ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ.

ವೆಸ್ಟ್ ಇಂಡೀಸ್ನ ಈ ಆಲ್ರೌಂಡರ್ಗಾಗಿ ಚೆನ್ನೈ, ಮುಂಬೈ ಮತ್ತು ರಾಜಸ್ಥಾನ ಪ್ರಾಂಚೈಸ್ಗಳು ಪೈಪೋಟಿ ನಡೆಸಿದ್ದವು.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೊ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ₹ 4.40 ಕೋಟಿ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.

ಮಾರಾಟವಾದ ಬೆಲೆ: ₹7.75 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

ಮಾರಾಟವಾದ ಬೆಲೆ: ₹2 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಬೆಲೆ: ₹2 ಕೋಟಿ
ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಮಾರಾಟವಾದ ಬೆಲೆ: ₹8.5 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

ಮೂಲ ಬೆಲೆ: ₹1 ಕೋಟಿ
ಮಾರಾಟವಾದ ಬೆಲೆ: ₹4.6 ಕೋಟಿ
ಖರೀದಿಸಿದ ತಂಡ: ಲಖನೌ ಸೂಪರ್ ಜೈಂಟ್ಸ್

IPL ಮೆಗಾ ಹರಾಜು: ಮೊದಲ ಬಿಡ್ ಧವನ್, ₹ 12.25 ಕೋಟಿಗೆ ಕೆಕೆಆರ್ ಪಾಲಾದ ಅಯ್ಯರ್

ಮಾರಾಟವಾದ ಬೆಲೆ: ₹6.75 ಕೋಟಿ
ಖರೀದಿಸಿದ ತಂಡ: ಲಖನೌ ಸೂಪರ್ ಜೈಂಟ್ಸ್

ಮಾರಾಟವಾದ ಬೆಲೆ: ₹7 ಕೋಟಿ
ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮಾರಾಟವಾದ ಬೆಲೆ: ₹6.25 ಕೋಟಿ
ಖರೀದಿಸಿದ ತಂಡ: ಗುಜರಾತ್ ಟೈಟನ್ಸ್

ಮೂಲ ಬೆಲೆ: ₹12.25 ಕೋಟಿ
ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಮಾರಾಟವಾದ ಬೆಲೆ: ₹8 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

ಮಾರಾಟವಾದ ಬೆಲೆ: ₹9.25 ಕೋಟಿ
ಖರೀದಿಸಿದ ತಂಡ: ಪಂಜಾಬ್ ಕಿಂಗ್ಸ್

ಮಾರಾಟವಾದ ಬೆಲೆ: ₹7.25 ಕೋಟಿ
ಖರೀದಿಸಿದ ತಂಡ: ಕೋಲ್ಕತ್ತ ನೈಟ್ ರೈಡರ್ಸ್

ಮೂಲ ಬೆಲೆ: ₹2 ಕೋಟಿ
ಮಾರಾಟವಾದ ಬೆಲೆ: ₹5 ಕೋಟಿ
ಖರೀದಿಸಿದ ತಂಡ: ರಾಜಸ್ಥಾನ್ ರಾಯಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.