ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿಯ ಪಂದ್ಯಗಳನ್ನು 50 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆಂದು ಡಿಸ್ನಿ ಸ್ಟಾರ್ ಸಂಸ್ಥೆ ತಿಳಿಸಿದೆ.

ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ವಾಹಿನಿಗಳಲ್ಲಿ ಪಂದ್ಯಗಳ ನೇರಪ್ರಸಾರ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇ 32ರಷ್ಟು ಏರಿಕೆ ಕಂಡಿದೆ. ಅದರಲ್ಲಿ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣದ ಫೈನಲ್ ಪಂದ್ಯದ ವೀಕ್ಷಣೆಯು ದಾಖಲೆಯ ಏರಿಕೆ (64.1%) ಕಂಡಿದೆ. ಹಿಂದಿ ವಾಹಿನಿಯಲ್ಲಿ 33 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

’ವರ್ಷದಿಂದ ವರ್ಷಕ್ಕೆ ವೀಕ್ಷಕರ ಸಂಖ್ಯೆಯಲ್ಲಿ ಅಪಾರ ಹೆಚ್ಚಳವಾಗುತ್ತಿದೆ. ನಮ್ಮ ವಾಹಿನಿಗಳ ಗುಣಮಟ್ಟ ಮತ್ತು ನೂತನ ತಾಂತ್ರಿಕತೆಯ ಮೂಲಕ ಪಂದ್ಯಗಳ ಕ್ಷಣಕ್ಷಣವನ್ನೂ ಪ್ರೇಕ್ಷಕರಿಗೆ ಒದಗಿಸುತ್ತಿರುವುದು ಇದಕ್ಕೆ ಕಾರಣ‘ ಎಂದು ಡಿಸ್ನಿ ಸ್ಟಾರ್ ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.