ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರಿಗೆ ಗುರುವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಐಪಿಎಲ್ ಫೈನಲ್ ನಂತರ ಮಂಗಳವಾರ ಅವರು ಅಹಮದಾಬಾದ್ನಿಂದ ಮುಂಬೈಗೆ ಹೋಗಿದ್ದರು.

ಮುಂಬೈನ ಹೆಸರಾಂತ ಮೂಳೆತಜ್ಞ ಡಾ.ದಿನ್ಶಾ ಪಾರ್ದಿವಾಲಾ ಅವರ ಸಲಹೆ ಪಡೆದ ಧೋನಿ, ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಡಾ.ಪಾರ್ದಿವಾಲಾ ಅವರು ಬಿಸಿಸಿಐ ವೈದ್ಯಕೀಯ ಸಮಿತಿಯಲ್ಲೂ ಇದ್ದು ಈ ಹಿಂದೆ ರಿಷಬ್ ಪಂತ್ ಸೇರಿ ದೇಶದ ಪ್ರಮುಖ ಕ್ರಿಕೆಟ್ ತಾರೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

‘ಧೋನಿ ಅವರಿಗೆ ಗುರುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ನನ್ನ ಬಳಿ ಹೆಚ್ಚಿನ ಮಾಹಿತಿಯಿಲ್ಲ. ಶಸ್ತ್ರಚಿಕಿತ್ಸೆಯ ಸ್ವರೂಪ ಮತ್ತಿತರ ಮಾಹಿತಿ ಇನ್ನೂ ಲಭ್ಯವಾಗಿಲ್ಲ’ ಎಂದು ಸಿಎಸ್ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಶಸ್ತ್ರಚಿಕಿತ್ಸೆಗಾಗಿ ಧೋನಿ ಅವರು ತಜ್ಞ ವೈದ್ಯರ ಸಲಹೆ ಪಡೆಯಲಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅವರಿಗೆ ಸಂಬಂಧಿಸಿದ್ದು’ ಎಂದು ಬುಧವಾರವಷ್ಟೇ ವಿಶ್ವನಾಥನ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.