ರಾಂಚಿ: ವಿಕೆಟ್ಕೀಪರ್ ಇಶಾನ್ ಕಿಶನ್ ಅವರನ್ನು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಜಾರ್ಖಂಡ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಹೋದ ವರ್ಷ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಗುತ್ತಿಗೆ ಕಳೆದುಕೊಂಡಿದ್ದರು. 2022ರಲ್ಲಿ ರಿಷಭ್ ಪಂತ್ ಅವರು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕ್ರಿಕೆಟ್ನಿಂದ ದೂರವುಳಿದಿದ್ದರು. ಆ ಸಂದರ್ಭದಲ್ಲಿ ಇಶಾನ್ ಅವರು ಭಾರತ ತಂಡದ (ಸೀಮಿತ್ ಓವರ್ಗಳ ಕ್ರಿಕೆಟ್) ಕೀಪರ್ ಆಗಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿಯೇ ತವರಿಗೆ ಮರಳಿದ್ದರು. ಅದರ ನಂತರವೂ ಅವರು ಬಿಸಿಸಿಐ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.

ಭಾರತ ತಂಡದಲ್ಲಿ ಆಡದ ಸಂದರ್ಭದಲ್ಲಿ ದೇಶಿಕ್ರಿಕೆಟ್ನಲ್ಲಿ ತಮ್ಮ ತವರು ರಾಜ್ಯ ತಂಡವನ್ನು ಪ್ರತಿನಿಧಿಸುವುದು ಕಡ್ಡಾಯ ಎಂಬ ನಿಯಮವನ್ನು ಅವರು ಪಾಲಿಸಿರಲಿಲ್ಲ. ಇದರಿಂದಾಗಿ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರಿಂದ ಗುತ್ತಿಗೆ ಕಳೆದುಕೊಂಡಿದ್ದರು.

ತಮ್ಮ ವರ್ಚಸ್ಸು ಮರಳಿ ಗಳಿಸಿಕೊಳ್ಳಲು ಇಶಾನ್ ಮತ್ತೆ ದೇಶಿ ಕ್ರಿಕೆಟ್ಗೆ ಮರಳಿದ್ದಾರೆ. ಕಳೆದ ತಿಂಗಳು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅವರು ಇಂಡಿಯಾ ಸಿ ತಂಡದಲ್ಲಿ ಆಡಿ ಶತಕ ಗಳಿಸಿದ್ದರು. ಇರಾನಿ ಕಪ್ ಟೂರ್ನಿಯಲ್ಲಿ ಭಾರತ ಇತರೆ ತಂಡದಲ್ಲಿ ಆಡಿದ್ದರು. ಇದೇ ತಿಂಗಳು ಆರಂಭವಾಗಲಿರುವ ರಣಜಿ ಟೂರ್ನಿಯಲ್ಲಿ ತಮ್ಮ ತವರು ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಡಿ ಗುಂಪಿನಲ್ಲಿ ಜಾರ್ಖಂಡ್ ತಂಡವು ಮೊದಲ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಗುವಾಹಟಿಯಲ್ಲಿ ಆಡಲಿದೆ.

ತಂಡ: ಇಶಾನ್ ಕಿಶನ್ (ನಾಯಕ), ವಿರಾಟ್ ಸಿಂಗ್ (ಉಪನಾಯಕ), ಕುಮಾರ ಖುಷಾಗ್ರ (ವಿಕೆಟ್ಕೀಪರ್), ನಜೀಂ ಸಿದ್ಧಿಕಿ, ಆರ್ಯಮನ್ ಸೇನ್, ಶರಣದೀಪ್ ಸಿಂಗ್, ಕುಮಾರ ಸೂರಜ್, ಅನುಕೂಲ್ ರಾಯ್, ಉತ್ಕರ್ಷ ಸಿಂಗ್, ಸುಪ್ರಿಯೊ ಚಕ್ರವರ್ತಿ, ಸೌರಭ್ ಶೇಖರ್, ವಿಕಾಸ್ ಕುಮಾರ್, ವಿವೇಕಾನಂದ ತಿವಾರಿ, ಮಾನಿಷಿ, ರವಿ ಕುಮಾರ್ ಯಾದವ್, ರೌನಕ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.