ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ತಂಡಕ್ಕೆ ಸನತ್ ಜಯಸೂರ್ಯ ಪೂರ್ಣಪ್ರಮಾಣದ ಕೋಚ್

Published : 7 ಅಕ್ಟೋಬರ್ 2024, 13:44 IST
Last Updated : 7 ಅಕ್ಟೋಬರ್ 2024, 13:44 IST
ಫಾಲೋ ಮಾಡಿ
Comments

ಕೊಲಂಬೊ: ಸನತ್ ಜಯಸೂರ್ಯ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಪೂರ್ಣಾವಧಿ ಮುಖ್ಯ ಕೋಚ್ ಆಗಿ ಸೋಮವಾರ ನೇಮಕ ಮಾಡಲಾಗಿದೆ. ಅವರು 2026ರ ಟಿ20 ವಿಶ್ವಕಪ್ ಟೂರ್ನಿಯವರೆಗೆ ಕಾರ್ಯನಿರ್ವಹಿಸುವರು. 

ಲಂಕಾ ತಂಡದ ಮಾಜಿ ನಾಯಕ ಸನತ್ ಅವರು ಹೋದ ಜುಲೈನಲ್ಲಿ ಹಂಗಾಮಿ ಕೋಚ್ ಆಗಿ ನೇಮಕವಾಗಿದ್ದರು. ಇಂಗ್ಲೆಂಡ್ ಮತ್ತು ಭಾರತ ಎದುರಿನ ಸರಣಿಗಳಲ್ಲಿ ಉತ್ತಮ ಕಾರ್ಯನಿರ್ವಹಣೆಯ ಮೂಲಕ ಅವರು ಗಮನ ಸೆಳೆದಿದ್ದರು. ಅದರಿಂದಾಗಿ ಅವರನ್ನು ಪೂರ್ಣಾವಧಿ ಕೋಚ್ ಆಗಿ ನೇಮಕ ಮಾಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ನಿರ್ಧರಿಸಿದೆ. 

ಜಯಸೂರ್ಯ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡವು  ಭಾರತದ ಎದುರು 27 ವರ್ಷಗಳ ನಂತರ ಏಕದಿನ ಸರಣಿ ಜಯಿಸಿತ್ತು. ಅದರ ನಂತರ ಇಂಗ್ಲೆಂಡ್ ತಂಡವನ್ನೂ ಸೋಲಿಸಿತ್ತು. ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಪಡೆಯು ನ್ಯೂಜಿಲೆಂಡ್ ವಿರುದ್ಧ 2–0ಯಿಂದ ಗೆಲುವು ಸಾಧಿಸಿತ್ತು. 

‘2024ರ ಅಕ್ಟೋಬರ್ 1ರಿಂದ ಜಾರಿಯಾಗುವಂತೆ ಜಯಸೂರ್ಯ ಅವರನ್ನು ನೇಮಕ ಮಾಡಲಾಗಿದೆ. ಅವರು 2026ರ ಮಾರ್ಚ್ 31ರವರೆಗೆ ಕಾರ್ಯನಿರ್ವಹಿಸುವರು’ ಎಂದು ಎಸ್‌ಎಲ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT