ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಲ್ರೌಂಡರ್ ಆಟದ ಮೂಲಕ ಗೆಲ್ಲಿಸಿಕೊಟ್ಟ ಹಾರ್ದಿಕ್ ಪಂಡ್ಯಾ ಅವರಿಗೆ ದಿನೇಶ್ ಕಾರ್ತಿಕ್ ಅವರು ಪಂದ್ಯದ ಕೊನೆಯಲ್ಲಿ ಗೌರವ ಅರ್ಪಿಸಿದ ರೀತಿ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ವೈರಲ್ ಆಗಿದ್ದು, #DineshKarthik ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿದೆ.

ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಟೂರ್ನಿಯ ಭಾರತ–ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕ್ ತಂಡ 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಭಾರತ 19.4 ಓವರ್ಗಳಲ್ಲಿ ಐದು ವಿಕೆಟ್ ನಷ್ಟದೊಂದಿಗೆ ಯಶಸ್ವಿಯಾಗಿ ಗುರಿಮುಟ್ಟಿತು. ರೋಚಕ ಪಂದ್ಯದಲ್ಲಿ ಗೆದ್ದ ಭಾರತ ಏಷ್ಯಾ ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮೂರು ವಿಕೆಟ್ ಮತ್ತು 17 ಬಾಲ್ಗಳಿಂದ ಅಜೇಯ 33 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠರೆನಿಸಿದರು.

ಆದರೆ, ಪಂದ್ಯವು ಕೊನೆ ಓವರ್ ವರೆಗೆ ಕುತೂಹಲ ಉಳಿಸಿಕೊಂಡಿದ್ದು ವಿಶೇಷ. ಒಂದು ಹಂತದಲ್ಲಿ ಭಾರತಕ್ಕೆ ಗೆಲ್ಲಲು ಮೂರು ಎಸೆತಗಳಲ್ಲಿ ಆರು ರನ್ ಬೇಕಿತ್ತು. ಆಗ ಸ್ಟ್ರೈಕ್ನಲ್ಲಿದ್ದ ಪಾಂಡ್ಯ ಚೆಂಡನ್ನು ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದು ಕೊಟ್ಟರು.

ಭಾರತ ಗೆಲ್ಲುತ್ತಲೇ ಪಾಂಡ್ಯ ಬಳಿಗೆ ತೆರಳಿದ ದಿನೇಶ್ ಕಾರ್ತಿಕ್, ಶಿರಬಾಗಿ ನಮಿಸಿದರು. ಈ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

‘ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ನೆರವಾದ ಪಾಂಡ್ಯ ಅವರ ಬಗ್ಗೆ ಭಾರತ ಹೆಮ್ಮೆ ಪಡುತ್ತಿದೆ. ಭಾರತೀಯರ ಭಾವನೆಯನ್ನು ದಿನೇಶ್ ಅವರು ಪಾಂಡ್ಯಗೆ ಅರ್ಪಿಸಿದ್ದಾರೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇವುಗಳನ್ನೂ ಓದಿ

IND vs SA| ಟಿ20ಗೆ ಪದಾರ್ಪಣೆ ಮಾಡಿ 15 ವರ್ಷದ ನಂತರ ಮೊದಲ ಅರ್ಧಶತಕ ಗಳಿಸಿದ ಡಿಕೆ

ಫಿನಿಶರ್ ದಿನೇಶ್ ಕಾರ್ತಿಕ್ ಧೋನಿಯಷ್ಟೇ 'ಕೂಲ್': ನಾಯಕ ಡುಪ್ಲೆಸಿ ಪ್ರಶಂಸೆ

'ಪಕ್ಕದ ಮನೆ ಹೆಂಡ್ತಿ'; ಸಿಕ್ಕಿಬಿದ್ದ ದಿನೇಶ್ ಕಾರ್ತಿಕ್ ಕ್ಷಮೆಯಾಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.