ಮುಂಬೈ: ‘ಈ ವರ್ಷಾಂತ್ಯದಲ್ಲಿ ಭಾರತ ತಂಡವು ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ಹೋಗಲಿದೆ. ಆ ಸರಣಿಯಲ್ಲಿ ಮಯಂಕ್ ಅಗರವಾಲ್ ಹಾಗೂ ರೋಹಿತ್ ಶರ್ಮಾ ಅವರಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಬೇಕು. ಪೃಥ್ವಿ ಶಾ ಅವರು ಎರಡನೇ ಆಯ್ಕೆಯಾಗಿರಲಿ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.

‘ಅಜಿಂಕ್ಯ ರಹಾನೆ ಅವರು ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್. ಟೆಸ್ಟ್ ಮಾದರಿಯಲ್ಲಿ ಐದನೇ ಕ್ರಮಾಂಕದಲ್ಲಿ ಆಡಲು ಅವರೇ ಸೂಕ್ತ’ ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

‘ಕರ್ನಾಟಕದ ಕೆ.ಎಲ್.ರಾಹುಲ್ ಅವರು ಸೀಮಿತ ಓವರ್‌ಗಳ ಮಾದರಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಹಾಗಂತ ರಹಾನೆ ಬದಲಿಗೆ ರಾಹುಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವುದು ಸೂಕ್ತವಲ್ಲ’ ಎಂದಿದ್ದಾರೆ.

‘ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಹೊಸತರಲ್ಲಿ ರಹಾನೆ ಅಮೋಘ ಫಾರ್ಮ್‌ನಲ್ಲಿದ್ದರು. ಈಗ ಅವರು ಆಗಿನಷ್ಟು ಪರಿಣಾಮಕಾರಿಯಾಗಿ ಆಡುತ್ತಿಲ್ಲ. ಹಾಗಂತ ಅವರನ್ನು ಕಡೆಗಣಿಸುವುದು ಬೇಡ. ಅವರು ಮತ್ತೆ ಹಳೆಯ ಲಯಕ್ಕೆ ಮರಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಈ ಹಿಂದೆ ಭಾರತವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಆಗ ನಡೆದ ಟೆಸ್ಟ್ ಸರಣಿಯಲ್ಲಿ ರಾಹುಲ್ ಪರಿಣಾಮಕಾರಿಯಾಗಿ ಆಡಿರಲಿಲ್ಲ. ಮಯಂಕ್ ಅಗರವಾಲ್ ಅವರ ಹಾಗೆ ರಾಹುಲ್ ಕೂಡ ದೇಶಿಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕು. ನಿಗದಿತ ಓವರ್‌ಗಳ ಮಾದರಿಯಲ್ಲಿ ಅವರಿಂದ ಮೂಡಿಬಂದಿರುವ ಸಾಮರ್ಥ್ಯವನ್ನೇ ಆಧಾರವಾಗಿಟ್ಟುಕೊಂಡು ಸ್ಥಾನ ನೀಡುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

‘ಸದ್ಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲೂ ವಿರಾಟ್ ಕೊಹ್ಲಿ ಅವರು ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಮೂರು ಮಾದರಿಯ ತಂಡಗಳಿಗೂ ಪ್ರತ್ಯೇಕ ನಾಯಕರನ್ನು ನೇಮಿಸುವ ಅಗತ್ಯ ಸದ್ಯಕ್ಕಂತೂ ಇಲ್ಲ. ಭವಿಷ್ಯದಲ್ಲಿ ಈ ಬಗ್ಗೆ ಚಿಂತಿಸಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.