ನವದೆಹಲಿ: ತಂಡದಲ್ಲಿ ಮಿಥಾಲಿ ರಾಜ್ ಅವರು ಎಲ್ಲರಿಗಿಂತ ಪ್ರತ್ಯೇಕವಾಗಿ ಇರುತ್ತಿದ್ದರು. ಅವ ರೊಂದಿಗೆ ವೃತ್ತಿಪರ ಸಂಪರ್ಕ ಸಾಧಿ ಸುವುದು ಕಷ್ಟವಾಗಿತ್ತು. ಆದ್ದರಿಂದ ಅವರೊಂದಿಗೆ ನಮ್ಮ ಸಂಬಂಧ ಅಷ್ಟಕ್ಕಷ್ಟೇ ಇತ್ತು ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಮೇಶ್ ಪೊವಾರ್ ಹೇಳಿದ್ದಾರೆ.

ಈಚೆಗೆ ಮಹಿಳಾ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಆಡಿದ್ದ ಭಾರತ ತಂಡದಿಂದ ಮಿಥಾಲಿ ರಾಜ್ ಅವರನ್ನು ಕೈಬಿಡಲಾಗಿತ್ತು. ಆ ಪಂದ್ಯದಲ್ಲಿಭಾರತ ತಂಡವು ಸೋತ ನಂತರ ಮಿಥಾಲಿಯನ್ನು ಆಯ್ಕೆ ಮಾಡದ ವಿಷಯ ವಿವಾದದ ರೂಪ ಪಡೆದಿತ್ತು. ಮಂಗಳವಾರ ಬಿಸಿಸಿಐಗೆ ಪತ್ರ ಬರೆದಿದ್ದ ಮಿಥಾಲಿ ಅವರು, ‘ರಮೇಶ್ ತಮ್ಮ ತೇಜೋವಧೆ ಮಾಡಿದ್ದಾರೆ’ ಎಂದು ಆರೋಪಿಸಿದ್ದರು. ಈ ಕುರಿತು ಬುಧವಾರ ರಮೇಶ್ ಅವರು ಬಿಸಿಸಿಐ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

‘ಮಿಥಾಲಿ ಅವರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಸರಿಯಿರಲಿಲ್ಲ. ಆದ್ದ ರಿಂದ ಅವರನ್ನು ತಂಡದಿಂದ ಕೈಬಿಡ ಲಾಗಿತ್ತು. ಗೆಲುವಿನ ಕಾಂಬಿನೇಷನ್ ಇರುವ ತಂಡವನ್ನು ಉಳಿಸಿಕೊಳ್ಳುವುದು ತಂಡದ ವ್ಯವಸ್ಥಾಪಕ ಮಂಡ ಳಿಯ ಉದ್ದೇಶವಾಗಿತ್ತು’ ಎಂದು ಪೊವಾರ್ ಹೇಳಿದ್ದಾರೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.