ನವದೆಹಲಿ: ಆಯ್ಕೆ ಪ್ರಕ್ರಿಯೆ ಸೇರಿದಂತೆ ವಿವಿಧ ಹಂತಗಳಲ್ಲಿ ಎದುರಾಗುವ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸುವ ‘ಕಲೆ’ಯನ್ನು ಹೇಳಿಕೊಡುವ ಮೂಲಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಈಗ ಕಾರ್ಪೊರೇಟ್ ಮಟ್ಟದ ತರಬೇತಿ ನೀಡುವ ಹಂತಕ್ಕೆ ಬೆಳೆದಿದೆ.

‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಮುಖ್ಯಸ್ಥರಾಗಿರುವ ಎನ್‌ಸಿಎಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಲೆವೆಲ್–2 ಕೋಚಿಂಗ್ ತರಬೇತಿಯಲ್ಲಿ ಹೆಸರಾಂತ ಪ್ರಥಮ ದರ್ಜೆ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಇದರಲ್ಲಿ ಮೊದಲ ಬಾರಿ ‘ಕಾರ್ಪೊರೇಟ್ ಸಮಸ್ಯೆ ಪರಿಹಾರ ತರಗತಿ’ಯ ಪ್ರಯೋಗ ಮಾಡಲಾಗಿದೆ.

ತರಬೇತಿ ಸಂದರ್ಭ ಹೊರತುಪಡಿಸಿ ಕ್ರೀಡಾಂಗಣದ ಆಚೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಟಗಾರರಿಗೆ ತಿಳಿಸಿದ್ದು ಮುಂದಿನ ತರಬೇತಿ ಕಾರ್ಯಕ್ರಮದಲ್ಲಿ ಇದು ಮುಂದುವರಿಯಲಿದೆ. ಮುಂಬೈ ತಂಡದ ಮಾಜಿ ವೇಗದ ಬೌಲರ್ ಕ್ಷೇಮಲ್ ವೈಂಗಣಕರ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಎಂಬಿಎ ಮಾಡಿರುವ ಅವರು ನಡೆಸಿಕೊಟ್ಟ ತರಗತಿ ಅಚ್ಚರಿ ಮೂಡಿಸುವಂತಿತ್ತು ಎಂದು ಪಾಲ್ಗೊಂಡ ಆಟಗಾರರೊಬ್ಬರು ತಿಳಿಸಿದ್ದಾರೆ.

ತರಬೇತಿಯಲ್ಲಿ ಪಾಲ್ಗೊಂಡ ಇಬ್ಬರು ಆಟಗಾರರ ಮುಂದೆ ಸಮಸ್ಯೆಯೊಂದನ್ನು ಇರಿಸಿ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ನಡೆಯಿತು. ಅತ್ಯಂತ ಸುಲಭವಾಗಿ ಸಮಸ್ಯೆಯನ್ನು ಎದುರಿಸುವುದು ಹೇಗೆ ಮತ್ತು ಯಾರಿಗೂ ಬೇಸರವಾಗದಂತೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಾಯಿತು.

ಲೆವೆಲ್–2 ಕೋಚಿಂಗ್ ತರಬೇತಿಯಲ್ಲಿ ಪಾಲ್ಗೊಂಡ ಆಟಗಾರರೆಲ್ಲ ತಮ್ಮ ಊರಿಗೆ ಮರಳಿದ್ದು ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಎಲ್ಲರಿಗೂ ಸವಾಲನ್ನು ನೀಡಲಾಗಿದೆ. ಕನಿಷ್ಠ ಒಬ್ಬ ಆಟಗಾರನ ಜೊತೆ ಬೆರೆತು ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ.

ತರಗತಿಯಲ್ಲಿ ಕುಳಿತ ದ್ರಾವಿಡ್:ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ತರಬೇತಿ ನೀಡುವ ಬದಲು ತರಗತಿಯಲ್ಲಿ ಕುಳಿತುಕೊಂಡು ‘ಪಾಠ’ ಕೇಳಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವೈಂಗಣಕರ್, ಸುಜಿತ್ ಸೋಮಸುಂದರ್, ಅಪೂರ್ವ್ ದೇಸಾಯಿ ಮತ್ತು ರಜಿಬ್ ದತ್ತಾ ಅವರ ತರಗತಿಗಳಿಗೆ ಮೆಚ್ಚುಗೆ ಸೂಚಿಸಿದರು.

ರಾಬಿನ್ ಬಿಷ್ಠ್, ಜಕಾರಿಯ ಜುಫ್ರಿ, ಪ್ರಭಾಂಜನ್ ಮಲಿಕ್, ಉದಯ್ ಕೌಲ್, ಸಾಗರ್ ಜೋಗಿಯಾನಿ, ಸರಬ್‌ಜೀತ್ ಸಿಂಗ್, ಅರಿಂದಂ ದಾಸ್, ಸೌರಾಶಿಷ್ ಲಾಹಿರಿ, ರಣದೇವ್ ಬೋಸ್, ಕೆ.ಬಿ.ಪವನ್ ಮತ್ತು ಕೊನರ್ ವಿಲಿಯಮ್ಸ್ ಮುಂತಾದವರು ತರಬೇತಿಯಲ್ಲಿ ಪಾಲ್ಗೊಂಡ ಪ್ರಮುಖರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.