‘ನಾವು ಆಗ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ಕನಸು ಕಂಡಿರಲಿಲ್ಲ. ನಮಗದೊಂದು ಮಹತ್ವದ ಅನುಭವ ಮತ್ತು ವಿಶ್ವದ ಎಲ್ಲ ತಂಡಗಳ ಎದುರು ಆಡುವ ಅವಕಾಶವಷ್ಟೇ ಆಗಿತ್ತು. ನಾನಂತೂ ವಿಶ್ವಕಪ್ ಟೂರ್ನಿಗೆ ಕೆಲದಿನಗಳ ಮುನ್ನವಷ್ಟೇ ಮದುವೆಯಾಗಿದ್ದೆ. ಅಮೆರಿಕಕ್ಕೆ ಹನಿಮೂನ್ಗೆ ಹೋಗುತ್ತಿದ್ದೆ. ಆಗ ತಂಡದ ನಾಯಕ ಕಪಿಲ್ ದೇವ್, ಟೂರ್ನಿ ಆಡು ನಂತರ ಅಲ್ಲಿಂದಲೇ ಅಮೆರಿಕಕ್ಕೆ ಹೋಗಬಹುದು ಎಂದಿದ್ದರು. ಸರಿ ಆಯಿತು. ಹೋಗುವ ಹಾದಿಯಲ್ಲಿ ಒಂದು ಟೂರ್ನಿ ಆಡಿ ಹೋಗ್ತೇನೆ ಅಂದುಕೊಂಡು ಲಂಡನ್ಗೆ ತೆರಳಿದ್ದೆ. ಆದರೆ, ನಾವು ವಿಶ್ವಕಪ್ ಗೆದ್ದೆವು. ಇತಿಹಾಸ ಬರೆದೆವು’–

ಸ್ಫೋಟಕ ಬ್ಯಾಟ್ಸ್ಮನ್ ಕೃಷ್ಣಮಾಚಾರಿ ಶ್ರೀಕಾಂತ್ ಅವರು 1983ರ ವಿಶ್ವಕಪ್ ವಿಜಯದ ಕುರಿತು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡ ಅನುಭವ ಇದು.

ಆಗಿನ ಆಟಗಾರರಿಗೆ ಕ್ರಿಕೆಟ್ ಎನ್ನುವುದು ನೆಚ್ಚಿನ ಹವ್ಯಾಸವಾಗಿತ್ತು. ದೇಶವನ್ನು ಪ್ರತಿನಿಧಿಸಬೇಕು. ಆಡಬೇಕು. ಜಗತ್ತು ಸುತ್ತಬೇಕು ಎಂಬೆಲ್ಲ ಆಕಾಂಕ್ಷೆಗಳು ಮಾತ್ರ ಇರುತ್ತಿದ್ದವು. ಈಗಿನಷ್ಟು ಪ್ರಚಾರ, ದುಡ್ಡು ಆಗ ಇರಲಿಲ್ಲ. 37 ವರ್ಷಗಳಲ್ಲಿ ಗಂಗೆ, ಯಮುನೆ, ಕಾವೇರಿ ನದಿಗಳಲ್ಲಿ ಅಪಾರ ಪ್ರಮಾಣದ ಹೊಸನೀರು ಹರಿದು ಹೋಗಿದೆ. ಅದೇ ರೀತಿ ಭಾರತದ ಕ್ರಿಕೆಟ್ ಹಲವಾರು ಮಗ್ಗಲುಗಳನ್ನು ಬದಲಿಸಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದು. ಆಟಗಾರರು ಕರೋಡಪತಿಗಳೂ ಆಗಿದ್ದಾರೆ. ಆದ್ದರಿಂದ ಈಗ ವಿಶ್ವಕಪ್ ಟೂರ್ನಿ ಆಡುವುದೆಂದರೆ ಭಾರತದ ಪಾಲಿಗೆ ಅದೊಂದು ಅಗ್ನಿಪರೀಕ್ಷೆ. ವೃತ್ತಿಪ್ರತಿಷ್ಠೆ. ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಟ್ರೋಫಿ ಗೆಲ್ಲುವುದು ಸಾಧ್ಯವಿಲ್ಲ.ಆದರೆ ಜಗ ಮೆಚ್ಚುವ ಹೋರಾಟ ಮಾಡಿ ಸೋಲಬೇಕು. ಕೊನೆ ಪಕ್ಷ ಫೈನಲ್ಗಾದರೂ ಹೋಗಬೇಕು ಎಂಬ ಕೋಟಿ ಕೋಟಿ ಅಭಿಮಾನಿಗಳು, ಪ್ರಾಯೋಜಕರು ಮತ್ತು ಟಿವಿ ಪ್ರಸಾರಕರ ಆಸೆ ಈಡೇರಿಸುವ ಹೊಣೆ ತಂಡದ ಮೇಲೆ ಇದೆ.

2011ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಬಳಗವು ಈ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿತ್ತು. ತವರಿನಂಗಳದಲ್ಲಿ ವಿಶ್ವಕಪ್ಗೆ ಮುತ್ತಿಕ್ಕಿತ್ತು. ಆದರೆ 2015ರಲ್ಲಿ ಕಪ್ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 2016ರಲ್ಲಿ ಭಾರತವೇ ಆತಿಥ್ಯ ವಹಿಸಿದ್ದ ಟ್ವೆಂಟಿ–20 ವಿಶ್ವ ಟೂರ್ನಿಯಲ್ಲಿಯೂ ತಂಡವು ಮುಗ್ಗರಿಸಿತ್ತು. ಅದರ ನಂತರ ಇಂಗ್ಲೆಂಡ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಸೋತಿತ್ತು. ಇದೀಗ ಮತ್ತದೇ ಇಂಗ್ಲೆಂಡ್ನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ದಿನದಿಂದ ದಿನಕ್ಕೆ ಕಾವು ಏರುತ್ತಿದೆ. 2016ರ ಆರಂಭದಿಂದಲೇ ಎಲ್ಲ ತಂಡಗಳೂ ತಮ್ಮ ಆಟಗಾರರನ್ನು ಮನೋದೈಹಿಕವಾಗಿ ವಿಶ್ವಕಪ್ ಟೂರ್ನಿಗಾಗಿ ಸಿದ್ಧಗೊಳಿಸುತ್ತಿವೆ. ಭಾರತವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಹಲವು ದಿಗ್ಗಜರು ‘ಡ್ರೀಮ್ ಟೀಮ್ ಇಂಡಿಯಾ’ ಕಲ್ಪನೆಯನ್ನು ಪ್ರಕಟಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹಲವು ಯುವ ಆಟಗಾರರು ಇಂಗ್ಲೆಂಡ್ ಕನಸು ಕಾಣುತ್ತಿದ್ದಾರೆ. ಅವರಿಗೆ ಅನುಭವಿಗಳೂ ಪೈಪೋಟಿ ನೀಡುತ್ತಿದ್ದಾರೆ.

ಇದೀಗ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯು ಆಯ್ಕೆಗಾರರ ಗಮನ ಸೆಳೆಯಲು ಆಟಗಾರರಿಗೆ ಕೊನೆಯ ಅವಕಾಶವಾಗಿದೆ. ಟೂರ್ನಿ ಆಡಲು ಲಂಡನ್ ವಿಮಾನ ಹತ್ತುವ 16 ಆಟಗಾರರ ಸಂಭವನೀಯ ತಂಡ ಹೀಗಿರಬಹುದೇ?

ಏಕದಿನ ಅಂಕಿ ಸಂಖ್ಯೆಗಳು ಮಾತ್ರ

ಬ್ಯಾಟ್ಸ್ಮನ್

ರೋಹಿತ್ ಶರ್ಮಾ (31)

ಪಂದ್ಯ: 203

ರನ್: 7845

ಶ್ರೇಷ್ಠ: 264

ಶತಕ: 22

ಅರ್ಧಶತಕ: 39

ಬೌಂಡರಿ: 686

ಸಿಕ್ಸರ್: 215

ಸಾಮರ್ಥ್ಯ: ಉತ್ತಮ ಆರಂಭಿಕ ಬ್ಯಾಟ್ಸ್ಮನ್. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕ ದಾಖಲಿಸಿದ ಶ್ರೇಯ. ಸ್ಟ್ರೋಕ್ ಮೇಕರ್. ಬಿಗ್ ಹಿಟ್ ಪರಿಣತ.

ಲೋಪ: ಆಫ್ ಸ್ಟಂಪ್ ಹೊರಗಿನ ಎಸೆತಗಳಿಗೆ ಮತ್ತು ಲೆಗ್ಸ್ಪಿನ್ನರ್ಗಳ ಮುಂದೆ ಫುಟ್ವರ್ಕ್ ಸುಧಾರಿಸಬೇಕು. ಫಿಟ್ನೆಸ್ಗೆ ಒತ್ತು ನೀಡಿದರೆ ವಿಕೆಟ್ನಲ್ಲಿ ಓಡುವ ವೇಗ ಹೆಚ್ಚಬಹುದು.

ಶಿಖರ್ ಧವನ್ (33)

ಪಂದ್ಯ: 125

ರನ್: 5199

ಶ್ರೇಷ್ಠ: 137

ಶತಕ: 15

ಅರ್ಧಶತಕ: 27

ಬೌಂಡರಿ: 60

ಸಿಕ್ಸರ್: 64

ಸಾಮರ್ಥ್ಯ: ಆರಂಭಿಕ ಎಡಗೈ ಬ್ಯಾಟ್ಸ್ಮನ್. ಆಫ್ಸೈಡ್ನಲ್ಲಿ ಉತ್ತಮ ಹೊಡೆತಗಳನ್ನು ಪ್ರಯೋಗಿಸಬಲ್ಲರು. ಫೀಲ್ಡಿಂಗ್ನಲ್ಲಿಯೂ ಚಾಕಚಕ್ಯತೆ ಮೆರೆಯಬಲ್ಲರು.

ಲೋಪ: ಬ್ಯಾಕ್ಫುಟ್ ಮತ್ತು ಲೆಗ್ಸೈಡ್ ಸ್ಟ್ರೋಕ್ ಮೇಕಿಂಗ್ನಲ್ಲಿ ಪರಿಣತಿ ಕಡಿಮೆ.

ಕೆ.ಎಲ್. ರಾಹುಲ್ (26)

ಪಂದ್ಯ: 13

ರನ್: 317

ಶ್ರೇಷ್ಠ: 100*

ಶತಕ; 01

ಅರ್ಧಶತಕ: 02

ಸಿಕ್ಸರ್; 05

ಬೌಂಡರಿ: 06

ಸಾಮರ್ಥ್ಯ: ತಾಂತ್ರಿಕವಾಗಿ ಪರಿಣತ ಬ್ಯಾಟ್ಸ್ಮನ್. ಒಳ್ಳೆಯ ಫುಟ್ವರ್ಕ್ ಮತ್ತು ವಿದೇಶಿ ನೆಲದಲ್ಲಿ ವೇಗಿಗಳನ್ನು ಎದುರಿಸುವ ಕೌಶಲ್ಯ.

ಲೋಪ: ಏಕಾಗ್ರತೆಯ ಕೊರತೆ. ಪ್ರಮುಖ ಹಂತದಲ್ಲಿ ಹೊಡೆತಗಳ ಆಯ್ಕೆಯಲ್ಲಿ ಎಡವುತ್ತಾರೆ.

ವಿರಾಟ್ ಕೊಹ್ಲಿ (30)

ಪಂದ್ಯ: 224

ಶ್ರೇಷ್ಠ: 183

ರನ್: 10693

ಶತಕ: 40

ಅರ್ಧಶತಕ: 49

ಬೌಂಡರಿ: 1000

ಸಿಕ್ಸರ್: 115

ಸಾಮರ್ಥ್ಯ: ವಿಶ್ವದ ಅಗ್ರಶ್ರೇಯಾಂಕದಲ್ಲಿ ಮೆರೆಯುತ್ತಿರುವ ಆಟಗಾರ. ಯಾವುದೇ ಬೌಲರ್ಗೂ ಕೊಹ್ಲಿ ‘ಪ್ರೈಜ್ ವಿಕೆಟ್’. ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿಯೂ ಶತಕ ಬಾರಿಸಬಲ್ಲ ತಾಂತ್ರಿಕವಾಗಿ ಬಲಿಷ್ಠ ಬ್ಯಾಟ್ಸ್ಮನ್. ವೇಗವಾಗಿ ಒಂದು –ಎರಡು ರನ್ ಓಡಬಲ್ಲ ಬಲಾಢ್ಯ.

ಲೋಪ: ಇನಿಂಗ್ಸ್ ಅರಂಭಿಸಿ ಮೊದಲ 25–30 ರನ್ ಗಳಿಸುವವರೆಗೆ ಏಕಾಗ್ರತೆಯ ಕೊರತೆ. ಒಂದೊಮ್ಮೆ ಹೊಂದಿಕೊಂಡರೆ ಮುಂದೆ ದೀರ್ಘ ಇನಿಂಗ್ಸ್ ಆಡಬಲ್ಲರು. ಅತಿಯಾದ ಆತ್ಮವಿಶ್ವಾಸ.

ಅಜಿಂಕ್ಯ ರಹಾನೆ (30)

ಪಂದ್ಯ: 90

ರನ್: 2962

ಶತಕ: 03

ಆರ್ಧಶತಕ : 24

ಬೌಂಡರಿ: 293

ಸಿಕ್ಸರ್: 33

ಸಾಮರ್ಥ್ಯ: ಮಧ್ಯಮಕ್ರಮಾಂಕದಲ್ಲಿ ಕೌಶಲ್ಯಪೂರ್ಣ ಬ್ಯಾಟ್ಸ್ಮನ್. ಉತ್ತಮ ಫೀಲ್ಡರ್. ಇಂಗ್ಲೆಂಡ್ನಲ್ಲಿ ಉತ್ತಮವಾಗಿ ಆಡಿರುವ ದಾಖಲೆ.

ಲೋಪ: ಗಾಯದ ಸಮಸ್ಯೆ ಹೆಚ್ಚು.

ಅಂಬಟಿ ರಾಯುಡು (33)

ಪಂದ್ಯ: 54

ರನ್ : 1692

ಶ್ರೇಷ್ಠ: 124*

ಶತಕ: 03

ಅರ್ಧಶತಕ: 10

ಬೌಂಡರಿ: 145

ಸಿಕ್ಸರ್: 30

ಸಾಮರ್ಥ್ಯ: ತಾಳ್ಮೆಯಿಂದ ಇನಿಂಗ್ಸ್ ಕಟ್ಟಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್. ನಿಗದಿಯ ಓವರ್ಗಳಲ್ಲಿ ಉತ್ತಮ ದಾಖಲೆ.

ಲೋಪ: ಬೌಲಿಂಗ್ ಶೈಲಿ ಸರಿಯಿಲ್ಲ. ಫಿಟ್ನೆಸ್ ಕೊರತೆ ಮತ್ತು ಗಾಯದ ಸಮಸ್ಯೆ.

ಆಲ್ರೌಂಡರ್ಗಳು

ಹಾರ್ದಿಕ್ ಪಾಂಡ್ಯ (25)

ಪಂದ್ಯ: 45

ರನ್: 731

ಶ್ರೇಷ್ಠ: 83

ಅರ್ಧಶತಕ: 04

ಬೌಂಡರಿ: 48

ಸಿಕ್ಸರ್ 36

ಗಳಿಸಿದ ವಿಕೆಟ್:

ಸಾಮರ್ಥ್ಯ: ಪಿಚ್ ಮರ್ಮ ಅರಿತು ಸ್ವಿಂಗ್ ಮತ್ತು ಕಟರ್ಗಳನ್ನು ಪ್ರಯೋಗಿಸಬಲ್ಲ ಮಧ್ಯಮವೇಗಿ. ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕಗಳನ್ನು ಗಳಿಸುವ ಆತ್ಮವಿಶ್ವಾಸಭರಿತ ಬ್ಯಾಟ್ಸ್ಮನ್. ಒಳ್ಳೆಯ ಫೀಲ್ಡರ್.

ಲೋಪ: ಅನುಭವ ಕೊರತೆ. ಅತಿಯಾದ ಅಗ್ರೆಸಿವ್ನೆಸ್. ಶಾಂತಚಿತ್ತತೆ ಕಡಿಮೆ.

ರವೀಂದ್ರ ಜಡೇಜ (30)

ಪಂದ್ಯ: 149

ರನ್: 2011

ಶ್ರೇಷ್ಠ: 87

ಅರ್ದಶತಕ: 10

ಬೌಂಡರಿ 155

ಸಿಕ್ಸರ್ 36

ವಿಕೆಟ್: 172

ಸಾಮರ್ಥ್ಯ: ಎಡಗೈ ಸ್ಪಿನ್ನಿಂಗ್ ಆಲ್ರೌಂಡರ್. ನಿಧಾನ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಖೆಡ್ಡಾಕ್ಕೆ ಬೀಳಿಸಬಲ್ಲರು. ಏಳು ಮತ್ತು ಎಂಟನೇ ಕ್ರಮಾಂಕದಲ್ಲಿ ಬಂದು ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಬಾರಿಸುವ ಸಮರ್ಥರು. ಉತ್ತಮ ಫೀಲ್ಡರ್

ಲೋಪ: ಬ್ಯಾಟಿಂಗ್ನಲ್ಲಿ ನಿರಂತರ ಉತ್ತಮ ಫಾರ್ಮ್ ಇಲ್ಲ.

ಆರ್. ವಿಜಯಶಂಕರ್

ಪಂದ್ಯ: 06

ರನ್: 123

ವಿಕೆಟ್: 02

ಶ್ರೇಷ್ಠ: 15ಕ್ಕೆ2

ಸಾಮರ್ಥ್ಯ: ಉತ್ಸಾಹಿ ಆಲ್ರೌಂಡರ್. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಉತ್ತಮ ಆಟ. ಮೀಸಲು ಆಟಗಾರನಾಗಿ ಸ್ಥಾನ ಪಡೆಯಬಹುದು.

ಲೋಪ: ಅನುಭವದ ಕೊರತೆ.

ವಿಕೆಟ್ ಕೀಪರ್

ಮಹೇಂದ್ರಸಿಂಗ್ ಧೋನಿ (37)

ಪಂದ್ಯ: 340

ರನ್: 10474

ಶ್ರೇಷ್ಠ: 183*

ಶತಕ: 10

ಅರ್ಧಶತಕ: 71

ಬೌಂಡರಿ: 804

ಸಿಕ್ಸರ್: 223

ಕ್ಯಾಚ್ : 314

ಸ್ಟಂಪಿಂಗ್: 120

ಸಾಮರ್ಥ್ಯ: ತಂಡದಲ್ಲಿರುವ ಅತ್ಯಂತ ಅನುಭವಿ ಮತ್ತು ಕೌಶಲ್ಯಪೂರ್ಣ ವಿಕೆಟ್ ಕೀಪರ್–ಬ್ಯಾಟ್ಸ್ಮನ್. ಶ್ರೇಷ್ಠ ಫಿನಿಷರ್ ಎಂಬ ಖ್ಯಾತಿಯೂ ಇದೆ. ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು ತಂಡವನ್ನು ಗೆಲುವಿನ ದಡ ಸೇರಿಸಬಲ್ಲರು. ಅಸಾಂಪ್ರದಾಯಿಕ ಶೈಲಿಯ ಹೊಡೆತಗಳನ್ನು ಪ್ರಯೋಗಿಸುವ ಆಟಗಾರ. ಮಿಂಚಿನ ವೇಗದ ಸ್ಟಂಪಿಂಗ್ ದಾಖಲೆ ಇರುವ ವಿಕೆಟ್ಕೀಪರ್. ‘ಧೋನಿ ಕೀಪಿಂಗ್ ಮಾಡುವಾಗ ಗೆರೆ ದಾಟಬೇಡಿ’ ಎಂದು ಸ್ವತೈ ಐಸಿಸಿಯು ಬ್ಯಾಟ್ಸ್ಮನ್ಗಳಿಗೆ ಈಚೆಗೆ ಎಚ್ಚರಿಕೆ ನೀಡಿತ್ತು. ವೇಗದ ಓಟಗಾರ. ಶಾಂತಚಿತ್ತ.

ಲೋಪ: ಬ್ಯಾಟಿಂಗ್ ಫಾರ್ಮ್ನಲ್ಲಿ ಅಸ್ಥಿರತೆ.

ರಿಷಭ್ ಪಂತ್ (21)

ಪಂದ್ಯ: 03

ರನ್: 41

ಶ್ರೇಷ್ಠ: 24

ಬೌಂಡರಿ: 05

ಸಿಕ್ಸರ್: 01

ಸಾಮರ್ಥ್ಯ: ಉತ್ತಮ ಎಡಗೈ ಬ್ಯಾಟ್ಸ್ಮನ್. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯಲ್ಲಿ ಉತ್ತಮ ಸಾಧನೆ.

ಲೋಪ: ವಿಕೆಟ್ಕೀಪಿಂಗ್ನಲ್ಲಿ ಕ್ಯಾಚಿಂಗ್ ಮತ್ತು ಸ್ಟಂಪಿಂಗ್ನಲ್ಲಿ ಇನ್ನಷ್ಟು ಏಕಾಗ್ರತೆ ಮತ್ತು ಚುರುಕುತನ ರೂಢಿಸಿಕೊಳ್ಳಬೇಕು.

ಬೌಲಿಂಗ್

ಭುವನೇಶ್ವರ್ ಕುಮಾರ್ (29)

ಪಂದ್ಯ: 103

ವಿಕೆಟ್: 114

ಕೊಟ್ಟ ರನ್: 4094

ಶ್ರೇಷ್ಠ: 42ಕ್ಕೆ5

ಗಳಿಸಿದ ರನ್: 476

ಸಾಮರ್ಥ್ಯ: ಪಿಚ್ನ ಸತ್ವ ಮತ್ತು ಗಾಳಿಯ ಚಲನೆಗೆ ತಕ್ಕಂತೆ ಸ್ವಿಂಗ್ ಪ್ರಯೋಗಿಸಬಲ್ಲ ಬಲಗೈ ಮಧ್ಯಮವೇಗಿ. ಹೊಸ ಚೆಂಡಿನಲ್ಲಿ ಹೆಚ್ಚು ಸಫಲತೆ ಕಂಡಿದ್ದಾರೆ.

ಲೋಪ: ಅಂತಿಮ ಓವರ್ಗಳಲ್ಲಿ ಹೆಚ್ಚು ರನ್ ಬಿಡಬಹುದು. ಫಿಟ್ನೆಸ್ ಕೊರತೆ

ಜಸ್ಪ್ರೀತ್ ಬೂಮ್ರಾ (25)

ಪಂದ್ಯ: 46

ಕೊಟ್ಟ ರನ್: 1728

ವಿಕೆಟ್: 82

ಶ್ರೇಷ್ಟ: 27ಕ್ಕೆ5

ಗಳಿಸಿದ ರನ್: 11

ಸಾಮರ್ಥ್ಯ: ಕೊನೆಯ ಹಂತದ (ಡೆತ್ ಓವರ್) ಓವರ್ಗಳ ಪರಿಣತ. ಉತ್ತಮ ಯಾರ್ಕರ್ ಪ್ರಯೋಗಿಸಬಲ್ಲ ಕೆಲವೇ ಬೌಲರ್ಗಳಲ್ಲಿ ಒಬ್ಬರು. ಎದುರಾಳಿಗಳ ರನ್ ಗಳಿಕೆಗೆ ತಡೆಯೊಡ್ಡುವ ಸಮರ್ಥರು. ರಿವರ್ಸ್ ಸ್ವಿಂಗ್ ಪರಿಣಾಮಕಾರಿಯಾಗಿ ಹಾಕಬಲ್ಲರು.

ಲೋಪ: ನೋಬಾಲ್ ಹಾಕುವುದನ್ನು ನಿಯಂತ್ರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಮೊಹಮ್ಮದ್ ಶಮಿ (28)

ಪಂದ್ಯ: 61

ರನ್: 2842

ವಿಕೆಟ್: 110

ಶ್ರೇಷ್ಠ: 35ಕ್ಕೆ4

ಗಳಿಸಿದ ರನ್: 120

ಸಾಮರ್ಥ್ಯ: ಉತ್ತಮ ಆರಂಭಿಕ ಬೌಲರ್. ಹೊಸಚೆಂಡಿನಲ್ಲಿ ಸ್ವಿಂಗ್ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಾರೆ.

ಲೋಪ: ಮಧ್ಯದ ಮತ್ತು ಕೊನೆಯ ಹಂತದ ಓವರ್ಗಳಲ್ಲಿ ಕೆಲವೊಮ್ಮೆ ಲೈನ್ ಮತ್ತು ಲೆಂಗ್ತ್ ಲಯ ತಪ್ಪುತ್ತಾರೆ.

ಯಜುವೇಂದ್ರ ಚಾಹಲ್ (28)

ಪಂದ್ಯ: 40

ರನ್: 1692

ವಿಕೆಟ್: 71

ಶ್ರೇಷ್ಠ: 42ಕ್ಕೆ6

ಗಳಿಸಿದ ರನ್: 34

ಸಾಮರ್ಥ್ಯ: ಬಲಗೈ ಲೆಗ್ಬ್ರೇಕ್ ಬೌಲರ್. ಮಣಿಕಟ್ಟಿನ ಸ್ಪಿನ್ ಮೂಲಕ ಬ್ಯಾಟ್ಸ್ಮನ್ಗಳಿಗೆ ಸವಾಲೊಡ್ಡಬಲ್ಲರು.

ಲೋಪ: ಇವರ ಬತ್ತಳಿಕೆಯಲ್ಲಿ ವಿಭಿನ್ನ ರೀತಿಯ ಸ್ಪಿನ್ ಅಸ್ತ್ರಗಳ ವೇರಿಯೇಷನ್ ಇಲ್ಲ.

ಕುಲದೀಪ್ ಯಾದವ್ (24)

ಪಂದ್ಯ: 41

ರನ್: 2118

ವಿಕೆಟ್ 82

ಶ್ರೇಷ್ಠ: 25ಕ್ಕೆ6

ಗಳಿಸಿದ ರನ್ 81

ಸಾಮರ್ಥ್ಯ: ಚೈನಾಮೆನ್ ಶೈಲಿಯ ಬೌಲರ್.

ಲೋಪ: ಲೈನ್ ಮತ್ತು ಲೆಂಗ್ತ್ ಸುಧಾರಣೆ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.