ಲಂಡನ್: ಐಮದ್ ವಾಸಿಂ ಅವರ ಅಜೇಯ ಶತಕದ (117; 78 ಎಸೆತ, 4 ಸಿಕ್ಸರ್, 13 ಬೌಂಡರಿ) ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಶುಭಾರಂಭ ಮಾಡಿದೆ. ಕೆಂಟ್ ವಿರುದ್ಧ ಶನಿವಾರ ರಾತ್ರಿ ನಡೆದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 100 ರನ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟ್‌ಗಳಿಗೆ 358 ರನ್ ಗಳಿಸಿತ್ತು. ಆರಂಭಿಕ ಜೋಡಿ ಇಮಾಮ್ ಉಲ್ ಹಕ್ ಮತ್ತು ಫಕ್ರ್ ಜಮಾನ್ 92 ರನ್‌ಗಳ ಜೊತೆಯಾಟ ಆಡಿದ್ದರು. ಮಧ್ಯಮ ಕ್ರಮಾಂಕದ ಹ್ಯಾರಿಸ್ ಸೊಹೇಲ್ 71 ಎಸೆತಗಳಲ್ಲಿ 75 ರನ್ ಗಳಿಸಿದರು.

ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಐಮದ್ ವಾಸಿಂ ಲಿಸ್ಟ್ ‘ಎ’ ಪಂದ್ಯದಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದರು.

ಬೃಹತ್ ಮೊತ್ತವನ್ನು ಬೆನ್ನತ್ತಿದ ಕೆಂಟ್ ಇನ್ನೂ ಐದು ಓವರ್‌ಗಳು ಬಾಕಿ ಇರುವಾಗಲೇ 258 ರನ್‌ಗಳಿಗೆ ಪತನ ಕಂಡಿತು. ಎಡಗೈ ಸ್ಪಿನ್ನರ್ ಇಮ್ರಾನ್ ಖಯ್ಯುಮ್ 45 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿ ಎದುರಾಳಿಗಳ ಪತನಕ್ಕೆ ಪ್ರಮುಖ ಕಾರಣರಾದರು.

ಸೋಮವಾರ ಮತ್ತು ಬುಧವಾರ ಸ್ಥಳೀಯ ಕ್ಲಬ್‌ಗಳ ವಿರುದ್ಧ ಪಾಕಿಸ್ತಾನ ಏಕದಿನ ಪಂದ್ಯಗಳನ್ನು ಆಡಲಿದ್ದು ಮುಂದಿನ ಭಾನುವಾರ ಕಾರ್ಡಿಫ್‌ನಲ್ಲಿ ಏಕೈಕ ಟ್ವೆಂಟಿ–20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 50 ಓವರ್‌ಗಳಲ್ಲಿ 7ಕ್ಕೆ 358 (ಇಮಾಮ್ ಉಲ್ ಹಕ್ 39, ಫಕ್ರ್ ಜಮಾನ್ 76, ಹ್ಯಾರಿಸ್ ಸೊಹೇಲ್ 75, ಐಮದ್ ವಾಸಿಂ ಅಜೇಯ 117; ಇಮ್ರಾನ್ ಖಯ್ಯುಮ್ 45ಕ್ಕೆ4); ಕೆಂಟ್: 44.1 ಓವರ್‌ಗಳಲ್ಲಿ 258 (ರಾಬಿನ್ಸನ್ 49, ಬ್ಲೇಕ್ 89, ಇಮ್ರಾನ್ ಖಯ್ಯುಮ್ 26; ಫಾಹೀಂ ಅಶ್ರಫ್ 16ಕ್ಕೆ2, ಹಸನ್ ಅಲಿ 35ಕ್ಕೆ2, ಯಾಸಿರ್ ಶಾ 90ಕ್ಕೆ3, ಫಕ್ರ್ ಜಮಾನ್ 20ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 100 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.